ಕಡೂರು: ಸಖರಾಯಪಟ್ಟಣ ಸಮೀಪದ ಅಗ್ರಹಾರ ಗ್ರಾಮದಲ್ಲಿ ಬುಧವಾರ ಶ್ರೀಮಲ್ಲಿಗ್ಯೆಮ್ಮ, ಹೊಂಗ್ಯೆಮ್ಮ ಹಾಗೂ ಶ್ರೀಆಂಜನೇಯ ಸ್ವಾಮಿಯ ಕೆಂಡಾರ್ಚನೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.

ಭಾನುವಾರ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿಯವರಿಗೆ ಹಾಲುವರ್ತಿಯಲ್ಲಿ ಗಂಗಾಪೂಜೆ, ಸೋಮವಾರ ಶ್ರೀಮಲ್ಲಿಕಾರ್ಜುನ ಸ್ವಾಮಿಯವರ ಪರೇವು, ಅಮ್ಮನವರಿಗೆ ವಿಶೇಷ ಉತ್ಸವ ಹಾಗೂ ಬೇವಿನ ಸೀರೆ ಸೇವೆ ನಂತರ ಸಿಡಿ ಕಾರ್ಯಕ್ರಮಗಳು ನಡೆದವು.

ಬುಧವಾರ ಬೆಳಿಗ್ಗೆ ಶ್ರೀದೇವಿಯವರ ದುಗ್ಗಳ ಸೇವೆ ಮತ್ತು ಕೆಂಡಾರ್ಚನೆ ನಡೆಯಿತು. ಅದೇ ದಿನ ರಾತ್ರಿ ಮುತ್ತಿನ ಪಲ್ಲಕ್ಕಿ ಸೇವೆಯನ್ನು ಕಾಳೇಗೌಡ ಕುಟುಂಬದವರು, ನಂತರ ಸಿಡಿಮದ್ದಿನ ಸೇವೆಯನ್ನು ಎಸ್.ವಿ. ಬಸವರಾಜಪ್ಪ ಮತ್ತು ಮಂಜುನಾಥ್ ಸಂಗಡಿಗರು ಏರ್ಪಡಿಸಿದ್ದರು.

ಅಗ್ರಹಾರದ ಎಜಿಆರ್ ಬಾಯ್ಸ್ ಗ್ರಾಮದ ಸ್ವಚ್ಛತೆ, ಅಲಂಕಾರ ಮತ್ತಿತರ ಚಟುವಟಿಕೆಗಳ ನೇತೃತ್ವ ವಹಿಸಿದರೆ, ಗ್ರಾಮಸ್ಥರ ಸಹಕಾರದಿಂದ ದೇವಾಲಯ ಅಲಂಕಾರ, ಪ್ರಸಾದ ವಿನಿಯೋಗ ಮತ್ತಿತರ ಕಾರ್ಯಕ್ರಮಗಳು ಜರುಗಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-126-1245585215

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.