ಕಡೂರು (ಚಿಕ್ಕಮಗಳೂರು): ಮದ್ಯಪಾನ ಮಾಡಿ ವಾಹನವನ್ನು ಚಾಲನೆ ಮಾಡಿದ್ದ ಚಾಲಕನಿಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯವು ಸಮುದಾಯ ಸೇವೆಯ ಶಿಕ್ಷೆ ವಿಧಿಸಿದೆ.

ಪಟ್ಟಣದಲ್ಲಿ ಮಾರ್ಚ್ 11ರಂದು ಮದ್ಯಪಾನ ಮಾಡಿ ಲಾರಿ ಚಾಲನೆ ಮಾಡುತ್ತಿದ್ದ ತಾಲ್ಲೂಕಿನ ಬಿಸಲೇಹಳ್ಳಿ ಗ್ರಾಮದ ರಂಜಿತ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ಸಿ ಕೋರ್ಟ್ನ ನ್ಯಾಯಾಧೀಶೆ ಅಮ್ರೀನ್ ಸುಲ್ತಾನಾ ಅವರು, ರಂಜಿತ್ ಕುಮಾರ್ ತಪ್ಪು ಒಪ್ಪಿಕೊಂಡಿದ್ದರಿಂದ ಈ ಶಿಕ್ಷೆ ವಿಧಿಸಿದರು.

ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಪಟ್ಟಣದ ಮಲ್ಲೇಶ್ವರ–ಮರವಂಜಿ ವೃತ್ತದಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಫಲಕ ಹಿಡಿದು ನಿಲ್ಲುವ ಸಜೆ ವಿಧಿಸಿದರು. ಮೇಲ್ವಿಚಾರಣೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆಯೂ ನಿರ್ದೇಶಿಸಿದ್ದರು.

ಕೋರ್ಟ್ ಆದೇಶದಂತೆ, ಪೊಲೀಸ್ ಸಿಬ್ಬಂದಿ ಮಹೇಂದ್ರ ಕುಮಾರ್ ಮೇಲ್ವಿಚಾರಣೆಯಲ್ಲಿ ರಂಜಿತ್ ಕುಮಾರ್ ಅವರನ್ನು ಮಲ್ಲೇಶ್ವರ ವೃತ್ತದಲ್ಲಿ ನಿಲ್ಲಿಸಲಾಯಿತು. ಈ ವೇಳೆ ಪಿಎಸ್ಐ ಸಜಿತ್ಕುಮಾರ್ ಸಾರ್ವಜನಿಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು. ಸಿಬ್ಬಂದಿ ರೇಣುಕಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.