ಕಡೂರು: ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಜಿಲ್ಲಾ ಮಟ್ಟದ 1046ನೇ ದೇವರ ದಾಸಿಮಯ್ಯ ಜಯಂತಿಯನ್ನು ಏ. 2ರಂದು ಆಯೋಜಿಸಲಾಗಿದೆ ಎಂದು ತಾಲ್ಲೂಕು ದೇವಾಂಗ ಸಮಾಜದ ಅಧ್ಯಕ್ಷ ಎಚ್.ಎಲ್. ಬೆಂಕಿ ರಂಗನಾಥ್ ತಿಳಿಸಿದರು.

ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಸೋಮವಾರ ಸಮಾಜದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜವು ಜಿಲ್ಲೆಯಲ್ಲಿ ಉತ್ತಮವಾಗಿ ಸಂಘಟಿತವಾಗುತ್ತಿದ್ದು, ಅದರ ಫಲಿತಾಂಶವನ್ನು ಸಮಾವೇಶದ ರೂಪದಲ್ಲಿ ಪ್ರಕಟಿಸಬೇಕಿದೆ. ಜಿಲ್ಲಾ ಮಟ್ಟದ ದೇವಾಂಗ ಜನ ಜಾಗೃತಿ ಹಾಗೂ ಸಂಘಟನಾ ಸಮಾವೇಶವು ಹಂಪಿ ಹೇಮಕೂಟದ ದೇವಾಂಗ ಸಮಾಜದ ದಯಾನಂದಪುರಿ ಸ್ವಾಮೀಜಿ, ಮಹಾರಾಷ್ಟ್ರದ ಸೊಲ್ಲಾಪುರದ ಅಭಿನವ ರಾಮಲಿಂಗ ಪಟ್ಟದೇವರ ಸಾನ್ನಿಧ್ಯದಲ್ಲಿ ನಡೆಯಲಿದೆ. ದೇವರ ದಾಸಿಮಯ್ಯ ಆಚರಣಾ ಸಮಿತಿಯ ಅಧ್ಯಕ್ಷ ಜೆ.ಯೋಗೇಶ್ವರ ಅಧ್ಯಕ್ಷತೆ ವಹಿಸುವರು. ಶಾಸಕ ಕೆ.ಎಸ್.ಆನಂದ್ ಉದ್ಘಾಟನೆ ಮಾಡಲಿದ್ದು, ರಾಜ್ಯಸಭಾ ಸದಸ್ಯ ಕೆ.ನಾರಾಯಣ್, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಅವರು ಭಾವಚಿತ್ರ ಅನಾವರಣ ಮಾಡುವರು.

ಕಡೂರು ಪಟ್ಟಣದ ವೈದ್ಯ ಛಾಯಾಪತಿ ಅವರಿಗೆ ಈ ಬಾರಿಯ ‘ದೇವಲ ಮಹರ್ಷಿ’ ಪ್ರಶಸ್ತಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರದಾನ ಮಾಡುವರು. ದೇವರ ದಾಸಿಮಯ್ಯ ಅವರ ವಚನ ಪುಸ್ತಕವನ್ನು ಶಾಸಕ ಎಚ್.ಡಿ. ತಮ್ಮಯ್ಯ ಬಿಡುಗಡೆ ಮಾಡುವರು. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸದಸ್ಯ ಎಸ್.ಎಲ್. ಭೋಜೇಗೌಡ, ಜಿ.ಎಚ್. ಶ್ರೀನಿವಾಸ್, ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ವೈ.ಎಸ್.ವಿ ದತ್ತ, ಎಂ.ಡಿ. ಲಕ್ಮ್ಮೀನಾರಾಯಣ ಭಾಗವಹಿಸುವರು. ಚಿಕ್ಕಮಗಳೂರಿನ ನಾಗಶ್ರೀ ತ್ಯಾಗರಾಜ್ ಅವರಿಂದ ಉಪನ್ಯಾಸ ನಡೆಯಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಕೆ.ಶ್ರೀನಿವಾಸ್, ಮಲೆನಾಡು ದೇವಾಂಗ ಸಂಘದ ಚಿಕ್ಕಮಗಳೂರಿನ ಭಗವತಿ ಹರೀಶ್, ಸಹ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್, ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಬೆಂಕಿ ಶೇಖರಪ್ಪ, ಅರೇಕಲ್ಲು ಆರ್.ಪ್ರಕಾಶ್, ಬನಶಂಕರಿ ಸಮುದಾಯ ಭವನದ ಅಧ್ಯಕ್ಷ ಹರೀಶ್ ಕುಮಾರ್, ಸಮಾಜದ ಹಿರಿಯರು, ಯುವಕರು ಸಭೆಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-126-18330875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.