ಕಡೂರು: ದೊಡ್ಡಪಟ್ಟಣಗೆರೆ ಫೀಡರ್ ವ್ಯಾಪ್ತಿಯಲ್ಲಿ ರೈತರು ಸಮಸ್ಯೆ ಎದುರಿಸುತ್ತಿದ್ದು, ಸಮರ್ಪಕ ಮಾರ್ಗ ಸ್ಥಾಪಿಸಿ ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ರೈತರು ಆಗ್ರಹಿಸಿದರು.

ಇಲ್ಲಿನ ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಒತ್ತಾಯಿಸಿದರು.

ಕಂಸಾಗರದ ರೈತ ಶೇಖರ್ ಮಾತನಾಡಿ, ಕಡೂರುಹಳ್ಳಿ ಬಳಿ 11 ಕೆ.ವಿ. ವಿದ್ಯುತ್ ಲೈನ್ ರೈಲ್ವೆ ಹಳಿ ದಾಟಿ ಅಳವಡಿಸಲಾಗಿತ್ತು. ಐದಾರು ವರ್ಷಗಳ ಹಿಂದೆ ಕಾಮಗಾರಿ ಸಂದರ್ಭದಲ್ಲಿ ಒಂದು ಲೈನ್ ಡಿಸ್ಕನೆಕ್ಟ್ ಆಗಿತ್ತು. ಜಿಗಣೇಹಳ್ಳಿ, ದೊಡ್ಡಪಟ್ಟಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರ ಐಪಿ ಸೆಟ್ಗಳಿವೆ. ಅದನ್ನು ದುರಸ್ತಿಪಡಿಸಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಈವರೆಗೆ ಮೆಸ್ಕಾಂ ಕ್ರಮ ವಹಿಸಿಲ್ಲ. ಈ ನಿರ್ಲಕ್ಷ್ಯಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಎಇಇ ತಿರುಪತಿ ನಾಯ್ಕ್, ನಾವು ಈ ಕಾಮಗಾರಿ ಪೂರೈಸಲು ರೈಲ್ವೆ ಇಲಾಖೆಯ ಅನುಮತಿ ಪಡೆಯಬೇಕಿದ್ದು, ಅಂದಾಜುಪಟ್ಟಿ ತಯಾರಿಸಿ ನಂತರ ಕ್ರಮ ವಹಿಸುವುದಾಗಿ ತಿಳಿಸಿದರು. ಇದಕ್ಕೆ ಗರಂ ಆದ ಶೇಖರ್, ನೀವು ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಕಳಿಸಿ ರೈಲ್ವೆ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಿರಿ. ಕೇಂದ್ರ ಸಚಿವ ವಿ. ಸೋಮಣ್ಣ ಅವರ ಬಳಿ ಮಾತನಾಡಿ ನಾನೇ ಅನುಮತಿ ಕೊಡಿಸುತ್ತೇನೆ ಎಂದರು.

ಈ ಭಾಗದಲ್ಲಿ ಮಾರ್ಗದಾಳುಗಳ ಕೊರತೆ ಇದ್ದು ಕ್ರಮ ವಹಿಸಲು ಏನು ಸಮಸ್ಯೆ ಎಂದು ಶೇಖರ್ ಪ್ರಶ್ನಿಸಿದರು. ಅದಕ್ಕೆ ಅಧಿಕಾರಿ, ಇದು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ಮಂಡಳಿಯು ಸದ್ಯವೇ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿದ್ದು, ಶೀಘ್ರ ಲೈನ್ಮ್ಯಾನ್ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಚಿಕ್ಕಮಗಳೂರು ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು.

ಕಡೂರು ಕೆಎಸ್ಆರ್ಟಿಸಿ ಡಿಪೊ ಬಳಿ ಲೈನ್ಗಳು ತುಂಡಾಗಿದ್ದು, ಅವಘಡ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇಲ್ಲಿ ಲೈನ್ ಬದಲಾವಣೆ ಯಾವಾಗ ಎಂದು ಗ್ರಾಹಕ ಕೆ.ಆರ್. ರಾಘವೇಂದ್ರ ಗ್ರಾಹಕ ಆಕ್ಷೇಪಿಸಿದ್ದಕ್ಕೆ, ಜಂಗಲ್ ತೆರವು ಮಾಡಬೇಕಿದ್ದು ಬೇಗನೆ ಕ್ರಮ ವಹಿಸಲಾಗುವುದು ಎಂದು ಶಾಖಾಧಿಕಾರಿ ಎಚ್. ಚಂದ್ರಪ್ಪ ಉತ್ತರಿಸಿದರು.

ಸೀಗೇಹಡ್ಲು ಗ್ರಾಮದ ಭರತ್ ಎಂಬುವರು, 53 ಕೆ.ವಿ. ಪರಿವರ್ತಕ ಸುಟ್ಟುಹೋಗಿ 15 ದಿನಗಳಾಗಿವೆ. ಈವರೆಗೆ ವಿತರಣೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು. ಅಡಿಕೆ, ತೆಂಗಿನ ತೋಟಗಳ ಒಳಗೆ 11 ಕೆ.ವಿ. ವಿದ್ಯುತ್ ಮಾರ್ಗ ಹಾದುಹೋಗಿದ್ದು, ಗರಿಗಳು ಬಿದ್ದು ಲೈನ್ ಟ್ರಿಪ್ ಆದರೆ ಮತ್ತೆ ವಿದ್ಯುತ್ ಪೂರೈಕೆಯನ್ನೂ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 53 ಕೆ.ವಿ. ಪರಿವರ್ತಕಗಳ ಸಂಗ್ರಹವಿಲ್ಲ. ಬಂದ ತಕ್ಷಣ ಕೊಡುವುದಾಗಿ, 11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಲೈನ್ ಕವರ್ ಕಂಡಕ್ಟರ್ ಮತ್ತು ಜಿಒಎಸ್ (ಗುಂಪು ನಿರ್ವಹಣಾ ವ್ಯವಸ್ಥೆ) ಅಳವಡಿಸಿ ವಿದ್ಯುತ್ ಪೂರೈಕೆಗೆ ಕ್ರಮ ವಹಿಸುವುದಾಗಿ ಎಇಇ ತಿರುಪತಿನಾಯ್ಕ್ ತಿಳಿಸಿದರು.

ಅಕ್ರಮ ಸಕ್ರಮ ವಿಷಯವಾಗಿ ಗ್ರಾಹಕರ ಪ್ರಶ್ನೆಗೆ 2018–19ರ ಸಾಲಿನ ಅರ್ಜಿಗಳು ಪ್ರಗತಿಯಲ್ಲಿದ್ದು, ಜೇಷ್ಠತೆ ಆಧಾರದಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಶ್ರೀರಾಮಪುರದ ಚಂದ್ರಶೇಖರ್ ಗ್ರಾಮ ಪಂಚಾಯಿತಿ, ಪುರಸಭೆ ವ್ಯಾಪ್ತಿಯಲ್ಲಿ ಮಧ್ಯಾಹ್ನ ಬೀದಿ ದೀಪಗಳು ಉರಿಯುತ್ತವೆ. ಈ ಬಗ್ಗೆ ಕ್ರಮ ವಹಿಸಲು ಸಾರ್ವಜನಿಕರು ಒತ್ತಾಯಿಸಿದರು. ಬೀದಿ ದೀಪಗಳ ನಿರ್ವಹಣೆ ಪಂಚಾಯಿತಿ, ಪುರಸಭೆ ವ್ಯಾಪ್ತಿಗೆ ಸೇರಿದೆ. ಟೈಮರ್ ಸ್ವಿಚ್ ಅಳವಡಿಸಲು ಕ್ರಮ ವಹಿಸುವಂತೆ ಪತ್ರ ವ್ಯವಹಾರ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು. ಅನುದಾನದ ಕೊರತೆ ಇರುವುದರಿಂದ ಕಾಮಗಾರಿ ಸ್ಥಗಿತಗೊಂಡಿವೆ. ಅನುದಾನ ದೊರೆತ ಬಳಿಕ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದರು.

ಕಡೂರು ಇಇ ರವಿಕಿರಣ್, ಎಇಇ ಸಿ.ಎಂ.ಪ್ರಸನ್ನ, ಸಹಾಯಕ ಲೆಕ್ಕಾಧಿಕಾರಿ ಲೋಹಿತ್ ಕುಮಾರ್, ಗ್ರಾಮಾಂತರ ಕಿರಿಯ ಎಂಜಿನಿಯರ್ ಬಸವರಾಜಪ್ಪ, ಸಖರಾಯಪಟ್ಟಣ ಕಿರಿಯ ಎಂಜಿನಿಯರ್ ವೀರೇಶ್, ಮತಿಘಟ್ಟ ಮತ್ತು ನಿಡಘಟ್ಟ ಎಂಜಿನಿಯರ್ ಶಿವಕುಮಾರ್, ಗ್ರಾಹಕರು, ಸಾರ್ವಜನಿಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-126-209375590

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.