ಕಡೂರು: ಶೋಷಿತ ಸಮುದಾಯಗಳ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಪಡೆಯುವ ಮೂಲಕ ಜೀವನವನ್ನು ಬದಲಿಸಿಕೊಳ್ಳಿ ಎಂದು ಕೊರಚ-ಕೊರಮ ಜನಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಿಂಗಟಗೆರೆ ಪೊಲೀಸ್ ಠಾಣೆಗೆ ಪಿಎಸ್ಐ ಆಗಿ ನೇಮಕಗೊಂಡ ತಾಲ್ಲೂಕಿನ ಆರ್.ಜಿ.ಕೊಪ್ಪಲು ಗ್ರಾಮದ ಹೊನ್ನಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಕಡಿಮೆ ಜನಸಂಖ್ಯೆ ಇರುವ ಕೊರಚ-ಕೊರಮ ಸಮಾಜದಲ್ಲಿ ಹುಟ್ಟಿ, ಕಠಿಣ ಪರಿಶ್ರಮದ ಮೂಲಕ ವಿದ್ಯಾಭ್ಯಾಸ ಪೂರೈಸಿ ಬಳಿಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿರುವ ಹೊನ್ನಪ್ಪ ಅವರು, ನಮ್ಮ ಸಮಾಜದ ಯುವ ಜನರಿಗೆ ಮಾದರಿಯಾಗಿದ್ದಾರೆ. ಅವರ ಸೇವೆ ಮತ್ತಷ್ಟು ಉತ್ತಮಗೊಂಡು ಇಲಾಖೆಯ ಗೌರವವನ್ನು ಹೆಚ್ಚಿಸುವಂತಾಗಲಿ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿಎಸ್ಐ ಹೊನ್ನಪ್ಪ, ಸಮಾಜದ ಬಂಧುಗಳ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸಮಾಜದ ಪ್ರಗತಿಗೆ ತಮ್ಮ ಇತಿಮಿತಿಯ ಸಹಕಾರ ನಿರಂತರವಾಗಿರಲಿದೆ. ನಮ್ಮ ಮಕ್ಕಳು ಮೊದಲು ಶೈಕ್ಷಣಿಕವಾಗಿ ಸಬಲರಾಗಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಣ್ಣಯ್ಯ, ಶ್ರೀನಿವಾಸ್, ಕೃಷ್ಣಕೀರ್ತಿ, ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಪ್ರವೀಣ್, ರಮೇಶ್, ಶಶಿಕುಮಾರ್, ಸುಜಾತಾ ರಂಗಪ್ಪ, ಕೃಷ್ಣಮೂರ್ತಿ, ಶಿಕ್ಷಕ ಶ್ರೀನಿವಾಸ್, ಗುರುಸ್ವಾಮಿ, ಸಂಘದ ಪ್ರಧಾನ ಕಾರ್ಯದರ್ಶಿ ಹೋರಿತಿಮ್ಮನಹಳ್ಳಿ ಶ್ರೀನಿವಾಸ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-126-866750705

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.