ಕಡೂರು: ನಕಲಿ ಚಿನ್ನ ನೀಡಿ ₹22 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಬೀರೂರಿನ ನಿವಾಸಿ, ಅಡಿಕೆ ವ್ಯಾಪಾರಿ ಹೇಮರಾಜ್ ಅವರು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಭಾನುವಾರ ಪ್ರಕರಣ ದಾಖಲಾಗಿದೆ.

ಹೇಮರಾಜ್ ಅವರಿಗೆ ಪರಿಚಿತರಾದ ಬಾಣಾವರದ ಗರುಡನಗಿರಿ ಜುಂಜಪ್ಪ ದೇವಾಲಯದ ಪೂಜಾರಿ ಹಾಗೂ ಗೊಲ್ಲರಹಟ್ಟಿ ವಾಸಿ, ಸ್ವಾಮಿ ಮತ್ತು ಅವರ ಪುತ್ರ ಗಂಗಾಧರ ಅವರು ಫೆ. 20ರಂದು ಹೇಮರಾಜ್ ಅವರಿಗೆ ಕರೆ ಮಾಡಿ, ಚಿನ್ನ ತುಂಬಿದ ಏಳು ಮಡಿಕೆ ಸಿಕ್ಕಿದ್ದು ಇದರಲ್ಲಿ ಒಂದನ್ನು ತಮಗೆ ಕೊಡುವೆ. ಮಡಿಕೆ ತೆಗೆದುಕೊಳ್ಳುವಾಗ ಬೇರೊಬ್ಬ ವ್ಯಕ್ತಿ ನೋಡಿದ್ದು ಆತನಿಗೆ ಹಣ ಕೊಡಬೇಕಿದೆ ಎಂದು ಹೇಳಿ ₹22 ಲಕ್ಷ ಹಣ ಪಡೆದು ಚಿನ್ನದ ನಾಣ್ಯಗಳಂತೆ ಕಾಣುವ ವಸ್ತುಗಳಿರುವ ಮಡಿಕೆಯನ್ನು ಕೊಟ್ಟು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಡಿಕೆಯಲ್ಲಿರುವ ನಾಣ್ಯಗಳನ್ನು ಎಲ್ಲಿಯೂ ಪರೀಕ್ಷೆಗೆ ಒಳಪಡಿಸಬೇಡಿ, ನಾನೇ ವಾಪಸ್ ತೆಗೆದುಕೊಂಡು ಹೋಗುವೆ ಎಂದು ಆರೋಪಿ ತಿಳಿಸಿದ್ದರು. 20 ದಿನಗಳ ನಂತರ ಮತ್ತೆ ಕರೆ ಮಾಡಿದ ಆರೋಪಿಗಳು ಮಡಿಕೆಯಲ್ಲಿ ಹೆಚ್ಚು ಚಿನ್ನ ಇದೆ. ನಮಗೆ ಇನ್ನೂ ₹3.50 ಲಕ್ಷ ಹಣ ಕೊಡಿ ಎಂದು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ಹೇಮರಾಜ್ ನಾಣ್ಯಗಳನ್ನು ಅಕ್ಕಸಾಲಿಗರ ಬಳಿ ಒಯ್ದು ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-126-170858143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.