ಕಡೂರು: ‘ಗ್ಯಾರಂಟಿ ಯೋಜನೆಗಳ ಮೂಲಕ ತಾಲ್ಲೂಕಿನ ಫಲಾನುಭವಿಗಳಿಗೆ ಸುಮಾರು ₹709 ಕೋಟಿ ಸಂದಾಯವಾಗಿದೆ’ ಎಂದು ಕಡೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಆಸಂದಿ ಟಿ. ಕಲ್ಲೇಶ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆಯಡಿ 70,273 ಫಲಾನುಭವಿಗಳ ಖಾತೆಗೆ ₹396. 88 ಕೋಟಿ ಹಣ ಜಮೆಯಾಗಿದೆ. ಗೃಹಜ್ಯೋತಿ ಯೋಜನೆಯಡಿ ಬೀರೂರು ಉಪ ವಿಭಾಗದಲ್ಲಿ ₹30.12 ಕೋಟಿ ವೆಚ್ಚವಾದರೆ, ಕಡೂರು ಉಪ ವಿಭಾಗದಲ್ಲಿ ₹70.36 ಕೋಟಿ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಡಿ ಕಡೂರು ಸಾರಿಗೆ ಇಲಾಖೆಯು 2.12 ಕೋಟಿ ಮಹಿಳೆಯರಿಗೆ ಇದುವರೆಗೆ ಟಿಕೆಟ್ ನೀಡಿದ್ದು, ಇಲಾಖೆಗೆ ಇಲ್ಲಿಯವರೆಗೆ ₹84.03 ಕೋಟಿ ಸಂದಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿ ಒಟ್ಟು 2,65,569 ಕುಟುಂಬ ಸದಸ್ಯರಿಗೆ ಇದುವರೆಗೆ ₹123.76 ಕೋಟಿ ವೆಚ್ಚವಾಗಿದೆ. ಯುವನಿಧಿ ಯೋಜನೆಯಡಿ 1,450 ವಿದ್ಯಾರ್ಥಿಗಳಿಗೆ ₹3.66 ಕೋಟಿ ಹಣ ಪಾವತಿಸಲಾಗಿದೆ ಎಂದರು.

ಸಮಿತಿ ಸದಸ್ಯ ಧನಂಜಯ್, ಯಗಟಿಯಿಂದ ನಾಗಗೊಂಡನಹಳ್ಳಿಗೆ ಸಂಪರ್ಕ ಕಲ್ಪಿಸುವ ಬಸ್ ಅನ್ನು ಮಧ್ಯಾಹ್ನ ಸಮಯವೂ ಓಡಿಸಿದರೆ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು. ಶೀಘ್ರದಲ್ಲೇ ಕ್ರಮ ವಹಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿ ಭರವಸೆ ನೀಡಿದರು.

ಕಡೂರು ಇಂದಿರಾ ಕ್ಯಾಂಟೀನ್ ಮುಂಭಾಗದ ಪ್ರಯಾಣಿಕರ ನಿಲ್ದಾಣವಿದ್ದು, ಶಿವಮೊಗ್ಗ ಕಡೆ ತೆರಳುವ ಕೆಲ ಬಸ್ಗಳು ನಿಲ್ಲಿಸದೆ ಸಾಗುತ್ತಿವೆ ಎಂದು ಧನಂಜಯ್ ಆರೋಪಿಸಿದರು. ನಿರ್ವಾಹಕ ಮತ್ತು ಚಾಲಕರಿಗೆ ನಿರ್ದೇಶನ ನೀಡಿದ್ದೇವೆ. ಬೇರೆ ಡಿಪೊಗಳ ಬಸ್ಗಳು ಈ ರೀತಿ ಮಾಡುತ್ತಿರಬಹುದು. ಅವರಿಗೆ ಸೂಕ್ತ ಸೂಚನೆಗಳನ್ನು ನೀಡಿ ನಿಲುಗಡೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಅಧಿಕಾರಿ ತಿಳಿಸಿದರು.

ಸದಸ್ಯ ರಾಜಾನಾಯ್ಕ ಮಾತನಾಡಿ, ಅಂತರಘಟ್ಟೆ ಸಮೀಪದ ಮಂಜುನಾಥಪುರದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದ್ದು, ಅನೇಕ ಬಾರಿ ಮನವಿ ನೀಡಿದರೂ ಟಿಸಿ ನೀಡುತ್ತಿಲ್ಲ. ಟಿಸಿ ಸುಟ್ಟುಹೋದರೆ ಯಾರನ್ನು ಸಂಪರ್ಕಿಸಬೇಕೆಂದು ಮಾಹಿತಿ ನೀಡಿ ಎಂದು ಮೆಸ್ಕಾಂ ಎಂಜಿನಿಯರ್ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆಯ ಟೆಸ್ಟಿಂಗ್ ಅಧಿಕಾರಿಗೆ ಟಿಸಿ ಸುಟ್ಟುಹೋಗಿರುವ ಬಗ್ಗೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಇದರ ಬಗ್ಗೆ ಕ್ರಮವಹಿಸುತ್ತಾರೆ ಎಂದು ಮೆಸ್ಕಾಂ ಎಂಜಿನಿಯರ್ ಪ್ರತಿಕ್ರಿಯಿಸಿದರು.

ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್ ತಾಲ್ಲೂಕಿನ ಕುಗ್ರಾಮಗಳಿಗೂ ಸರ್ಕಾರಿ ಬಸ್ಗಳು ಬರಬೇಕು ಎಂದು ಮನವಿ ಮಾಡುವುದರ ಜೊತೆಗೆ ವಿವಿಧ ಪ್ರದೇಶಗಳಲ್ಲಿ ಬಸ್ ನಿಲುಗಡೆ ನೀಡಬೇಕೆಂದು ಆಗ್ರಹಿಸಿದರು. ಅನುಷ್ಠಾನ ಸಮಿತಿ ಸದಸ್ಯ ಮಚ್ಚೇರಿ ಚನ್ನಣ್ಣನವರ ನಿಧನಕ್ಕೆ ಸಭೆಯಲ್ಲಿ ಮೌನ ಆಚರಿಸುವ ಮೂಲಕ ಸಂತಾಪ ಸೂಚಿಸಲಾಯಿತು.

ಗ್ಯಾರಂಟಿ ಸಮಿತಿಯ ಕಾರ್ಯದರ್ಶಿ ತಾ.ಪಂ ಇಒ ಸಿ.ಆರ್. ಪ್ರವೀಣ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್.ಎಸ್. ದೇವರಾಜ್, ಆಹಾರ ಇಲಾಖೆಯ ನಿರೀಕ್ಷಕರಾದ ಶ್ರೀನಿವಾಸ್ ಎಚ್. ಮತ್ತು ಶಿಲ್ಪಾ ಎಸ್., ಮೆಸ್ಕಾಂ ಎಂಜಿನಿಯರ್ ತಿರುಪತಿ ನಾಯ್ಕ, ಕೆಎಸ್ಅರ್ಟಿಸಿ ಅಧಿಕಾರಿ ರಾಜಾನಾಯ್ಕ, ಸಮಿತಿಯ ಸದಸ್ಯರಾದ ಸಂತೋಷ್, ತೌಸೀಫ್, ಶೋಭಾ, ಮಧು, ಸುಜಾತಾ ಚಂದ್ರಶೇಖರ್, ರೋಹನ್ ಫರ್ನಾಂಡಿಸ್, ರಮೇಶ್, ಪುಷ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-126-409155120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.