ಕಡೂರು: ಬೀರೂರು ಹೋಬಳಿ ಹೊಗರೇಕಾನು ಗಿರಿಯ ಹೊಂಡದಲ್ಲಿ ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ತಾಲ್ಲೂಕಿನ ಅಂದೇನಹಳ್ಳಿಯ ಎ.ಎಂ.ಶೇಖರಪ್ಪ (65) ಮೃತಪಟ್ಟವರು.

ಅಂದೇನಹಳ್ಳಿ ಗ್ರಾಮಸ್ಥರು ಗ್ರಾಮದೇವರಾದ ಸಿದ್ದೇಶ್ವರ ಸ್ವಾಮಿಗೆ ಹೊಗರೇಕಾನು ಗಿರಿಯಲ್ಲಿ ಪುಣ್ಯಾಹ ಕಾರ್ಯ ನೆರವೇರಿಸುವ ಸಲುವಾಗಿ ಭಾನುವಾರ ತೆರಳಿ ರಾತ್ರಿ ಹೊಗರೇಕಾನು ಗಿರಿಯಲ್ಲಿಯೇ ಉಳಿದಿದ್ದರು. ಸೋಮವಾರ ಉಪಾಹಾರ ಮುಗಿಸಿ ಪುಣ್ಯಾಹ ಕಾರ್ಯ ಮಾಡುವ ಸಲುವಾಗಿ ಸ್ನಾನಕ್ಕೆ ಇಳಿದಿದ್ದ ಶೇಖರಪ್ಪ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೀರೂರು ಪೊಲೀಸರು ಸ್ಥಳಕ್ಕೆ ತೆರಳಿ ಶವಕ್ಕಾಗಿ ಹುಡುಕಾಟ ನಡೆಸಿ ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ಸೋಮವಾರ ಮಧ್ಯಾಹ್ನ ಶವವನ್ನು ಹೊರಗೆ ತೆಗೆದರು. ಮೃತರ ಸಹೋದರ ನೀಡಿದ ದೂರಿನ ಅನ್ವಯ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-126-810693174

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.