ಕಡೂರು: ‘ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ತಲೆಮಾರುಗಳಿಂದ ವಾಸವಿರುವವರಿಗೆ ಕಾನೂನುಬದ್ಧವಾಗಿ ಅವರ ಆಸ್ತಿಗೆ ಸಂಬಂಧಿಸಿದಂತೆ ಹಕ್ಕುಪತ್ರ ಮತ್ತು ಇ-ಸ್ವತ್ತು ದಾಖಲೆಗಳನ್ನು ರಾಜ್ಯ ಸರ್ಕಾರವು ‘ಭೂ ಗ್ಯಾರಂಟಿ’ ಯೋಜನೆಯಡಿ ವಿತರಿಸುತ್ತಿದ್ದು, ಕ್ಷೇತ್ರದಲ್ಲಿ 14,700 ಇ-ಸ್ವತ್ತು ವಿತರಣೆ ಬಾಕಿ ಇದೆ’ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಯಗಟಿ ಹೋಬಳಿಯ ಉಡುಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣೇನಹಳ್ಳಿ ಗ್ರಾಮದಲ್ಲಿ ಸೋಮವಾರ ಮನೆಗಳ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ 109 ಆಸ್ತಿಗಳನ್ನು ಗುರುತಿಸಿದ್ದು, ಸಾಂಕೇತಿಕವಾಗಿ ಇ-ಸ್ವತ್ತು ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆಯಂತೆ ಕಂದಾಯ ಇಲಾಖೆಯು ಗ್ರಾಮಗಳಲ್ಲಿ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಮೂಲಕ ಜನವಸತಿಗಳನ್ನು ಕಂದಾಯ ಗ್ರಾಮ, ಉಪ ಗ್ರಾಮಗಳನ್ನಾಗಿ ಗುರುತಿಸಿ ಘೋಷಿಸಿ ಅಲ್ಲಿನ ಜನರು ಅನುಭವದಲ್ಲಿರುವ ಆಸ್ತಿಗೆ ಅಧಿಕೃತ ಮತ್ತು ಶಾಶ್ವತ ದಾಖಲೆಗಳ ಹಕ್ಕು ಒದಗಿಸುವ ಮೂಲಕ ಮಾಲೀಕತ್ವ ಹಾಗೂ ನೆಮ್ಮದಿ ಕಲ್ಪಿಸುತ್ತಿದೆ. ಅಧಿಕೃತ ದಾಖಲೆಗಳ ಮೂಲಕ ಜನರು ತಮ್ಮ ಮನೆಯ ಮೇಲೆ ಸಾಲ ಮತ್ತಿತರ ವ್ಯವಹಾರ ಮಾಡಲು ನೆರವಾಗಲಿದೆ. ಕಂದಾಯ ಇಲಾಖೆಯ ಮಾರ್ಗಸೂಚಿ ಪಾಲಿಸುವ ಮೂಲಕ ಅಧಿಕೃತ ದಾಖಲೆಗಳನ್ನು ಹೊಂದಬೇಕು. ಕಂದಾಯ ಇಲಾಖೆಯು ಬಾಕಿ ಇರುವ ಇ-ಸ್ವತ್ತುಗಳ ವಿತರಣೆಗೆ ಶೀಘ್ರ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ ಮಾತನಾಡಿ, ‘ರಾಜ್ಯ ಸರ್ಕಾರವು ಭೂ ಕಂದಾಯ ಮತ್ತು ಭೂ ಸುಧಾರಣಾ ಅಧಿನಿಯಮದಡಿ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಅಧಿಸೂಚನೆ ಮೂಲಕ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಆದೇಶಿಸಿದೆ. ಅದರ ಅಂಗವಾಗಿ ಕಡೂರು ತಾಲ್ಲೂಕಿನಲ್ಲಿ 131 ಕಂದಾಯ ಗ್ರಾಮ- ಉಪಗ್ರಾಮಗಳನ್ನು ಈಗಾಗಲೇ ಘೋಷಿಸಲಾಗಿದೆ. ಹೊಸದಾಗಿ 109 ಜನವಸತಿಗಳನ್ನು ಗುರುತಿಸಿದ್ದು, ಅಂತಿಮ ಅಧಿಸೂಚನೆಗೆ ಪ್ರಸ್ತಾವನೆ ಕಳುಹಿಸಿದೆ ಎಂದರು.

ಉಡುಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣೇನಹಳ್ಳಿ ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಿಸಿ, 89 ಜನರಿಗೆ ಹಕ್ಕುಪತ್ರ ವಿತರಿಸ ಲಾಗಿದೆ. ಬಾಕಿ ಮನೆಗಳ ಅಳತೆ ವಿಳಂಬವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಹಕ್ಕುಪತ್ರ ವಿತರಿಸಲಾಗುವುದು. 94 ‘ಡಿ’ ಅಡಿ ಅಧಿಕೃತ ದಾಖಲೆ ನೀಡುವುದು ಭೂ ಗ್ಯಾರಂಟಿಯ ಉದ್ದೇಶ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್, ಕಂದಾಯ ಇಲಾಖೆಯಿಂದ ಆನ್ಲೈನ್ ತಂತ್ರಾಂಶದ ಮೂಲಕ ಹಕ್ಕುಪತ್ರ ದಾಖಲೆಗಳನ್ನು ನೋಂದಣಿ ಮಾಡಲಾಗಿದೆ. ಇ–ಸ್ವತ್ತು ಪಡೆಯುವ ಸಂದರ್ಭದಲ್ಲಿ ಪಂಚತಂತ್ರ ತಂತ್ರಾಂಶದಲ್ಲಿ ನಮೂದಿಸಿ, ನಿಗದಿಯಾದ ಮ್ಯುಟೇಷನ್ ಶುಲ್ಕ ಮತ್ತು ಆಸ್ತಿ ತೆರಿಗೆ ಪಾವತಿಸಿದ ಬಳಿಕ ಅಧಿಕೃತ ಇ-ಸ್ವತ್ತು ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಇಲ್ಲಿ 109 ಜನರ ಪೈಕಿ 20 ಮಂದಿ ಮಾತ್ರ ನಿಗದಿತ ಶುಲ್ಕ ಪಾವತಿಸಿ ಹಕ್ಕುಪತ್ರ ಪಡೆಯುತ್ತಿದ್ದಾರೆ. ಬಾಕಿ ಇರುವವರೂ ಇದೇ ರೀತಿ ಶುಲ್ಕ ಪಾವತಿಸಿ, ತಮ್ಮ ಸ್ವತ್ತುಗಳನ್ನು ಅಧಿಕೃತಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ಶರತ್ ಕೃಷ್ಣಮೂರ್ತಿ, ದೊಣ್ಣೆಕೋರನಹಳ್ಳಿ ಉಮೇಶ್ ಮಾತನಾಡಿದರು. ಗ್ರಾಮಸ್ಥರಾದ ರಾಮಕೃಷ್ಣಪ್ಪ, ಯಗಟಿ ಗೋವಿಂದಪ್ಪ, ರಂಗಪ್ಪ, ಹನುಮಂತಪ್ಪ, ಫಲಾನುಭವಿಗಳಾದ ಅನ್ನಪೂರ್ಣಮ್ಮ, ದೇವೀರಮ್ಮ, ಸುಧಾ, ಲಕ್ಷ್ಮಮ್ಮ, ಗೌರಿಬಾಯಿ, ಯಗಟಿ ಕಂದಾಯ ಅಧಿಕಾರಿ ತಿಪ್ಪೇಶಪ್ಪ ಎಚ್., ಪಿಡಿಒ ಚಂದ್ರಶೇಖರ್ ಕೆ.ಬಿ., ಗ್ರಾಮ ಆಡಳಿತಾಧಿಕಾರಿ ಈರಣ್ಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-126-1778498332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.