ಕಡೂರು: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆಯ ಕೊರತೆಯಾಗಿದ್ದು, ದ್ವಿದಳ ಧಾನ್ಯಗಳ ಬಿತ್ತನೆಗೆ ಹಿನ್ನಡೆಯಾಗಿದೆ. ವಾಡಿಕೆಯಂತೆ ಮಾರ್ಚ್ ಆರಂಭದಿಂದ ಮೇ ತಿಂಗಳ ಅಂತ್ಯದವರೆಗೆ 79.9 ಮಿ.ಮೀ ಮಳೆಯಾಗಬೇಕಿದ್ದು, ಈವರೆಗೆ 42.7 ಮಿ.ಮೀ ಮಳೆಯಾಗಿ.

ಪೂರ್ವ ಮುಂಗಾರಿನಲ್ಲಿ ತಾಲ್ಲೂಕಿನಲ್ಲಿ 7,650 ಹೆಕ್ಟೇರ್ನಲ್ಲಿ ಹೆಸರು, ಅಲಸಂದೆ, ಉದ್ದು, ತೊಗರಿ, ಶೇಂಗಾ, ಸೂರ್ಯಕಾಂತಿ, ದ್ವಿದಳ ಧಾನ್ಯಗಳನ್ನು ಬೆಳೆಯುವ ಗುರಿ ಹೊಂದಿದ್ದರೂ ಮಳೆ ಕೊರತೆಯಿಂದ ಬಿತ್ತನೆ ಕುಸಿತ ಕಂಡಿದೆ. ಹೆಸರು 1,500 ಹೆಕ್ಟೇರ್, ಅಲಸಂದೆ 750, ತೊಗರಿ 400, ಉದ್ದು 300, ಮುಸುಕಿನ ಜೋಳ 1,500, ಶೇಂಗಾ 1,000, ಸೂರ್ಯಕಾಂತಿ 1,350 ಮತ್ತು 850 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬಿತ್ತುವ ಗುರಿ ಇದ್ದರೂ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಕೆಲವು ವರ್ಷಗಳವರೆಗೆ ರಾಗಿಯನ್ನೂ ಮೀರಿ ಬಿತ್ತನೆಯಾಗುತ್ತಿದ್ದ ಮೆಕ್ಕೆಜೋಳದ ಬಿತ್ತನೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಸದ್ಯ ತಾಲ್ಲೂಕಿನ ರೈತಸಂಪರ್ಕ ಕೇಂದ್ರಗಳಲ್ಲಿ ಹೆಸರು 22 ಕ್ವಿಂಟಲ್, ಉದ್ದು 12 ಕ್ವಿಂಟಲ್, ಅಲಸಂದೆ 7.2 ಕ್ವಿಂಟಲ್, ಸೂರ್ಯಕಾಂತಿ 6 ಕ್ವಿಂಟಲ್, ಮೆಕ್ಕೆಜೋಳ 126 ಕ್ವಿಂಟಲ್, ಶೇಂಗಾ 60 ಕ್ವಿಂಟಲ್ನಷ್ಟು ದಾಸ್ತಾನು ಲಭ್ಯ ಇದೆ. ದ್ವಿದಳ ಧಾನ್ಯಗಳಿಗೆ ಪರಿಶಿಷ್ಟ ಜಾತಿ- ಪಂಗಡಗಳಿಗೆ ಪ್ರತಿ ಕಿಲೋ ಬಿತ್ತನೆ ಬೀಜಕ್ಕೆ ₹37.50, ಸಾಮಾನ್ಯ ವರ್ಗಕ್ಕೆ ₹25 ಸಹಾಯಧನ ನಿಗದಿಯಾಗಿದೆ. ಸೂರ್ಯಕಾಂತಿ ಪರಿಶಿಷ್ಟ ವರ್ಗಕ್ಕೆ ₹120 ಹಾಗೂ ಸಾಮಾನ್ಯ ವರ್ಗಕ್ಕೆ ₹80 ಸಹಾಯಧನ, ಶೇಂಗಾ ಪರಿಶಿಷ್ಟ ವರ್ಗಕ್ಕೆ ₹30, ಸಾಮಾನ್ಯ ವರ್ಗಕ್ಕೆ ₹20 ಸಹಾಯಧನವಿದೆ.

ರಸಗೊಬ್ಬರಗಳಲ್ಲಿ ಯೂರಿಯಾ 759 ಟನ್, ಡಿಎಪಿ 363, ಎಂಒಪಿ 235, ಕಾಂಪ್ಲೆಕ್ಸ್ 1,923 ಮತ್ತು ಎಸ್ಎಸ್ಪಿ 115 ಟನ್ ದಾಸ್ತಾನು ಲಭ್ಯವಿದ್ದು ರೈತರಿಗೆ ದೊರೆಯಬಹುದಾದ ಸೌಲಭ್ಯ ಒದಗಿಸಲು ಕೃಷಿ ಇಲಾಖೆ ಸನ್ನದ್ಧವಾಗಿದೆ. ಆದರೆ, ಈವರೆಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗದಿರುವುದು ರೈತರು ಕಂಗಾಲಾಗುವಂತೆ ಮಾಡಿದೆ ಎನ್ನುತ್ತಾರೆ ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ (ಪ್ರಭಾರಿ) ಲೋಕಪ್ಪ.

‘ನಾವು ಭೂಮಿ ಹಸನು ಮಾಡಲು ಮಳೆಗಾಗಿ ಕಾಯುತ್ತಿದ್ದೇವೆ. ಉತ್ತಮ ಮಳೆಯಾದರೆ ಕೃಷಿ ಕೆಲಸ ಮಾಡಲು ರೈತರು ಉತ್ಸಾಹ ತೋರಬಹುದು. ಮಳೆಯೇ ಇಲ್ಲವಾದರೆ ನಮ್ಮ ಶ್ರಮವೂ ವ್ಯರ್ಥ, ಬೆಳೆಯೂ ನಷ್ಟವಾಗುತ್ತದೆ. ಸದ್ಯ ಆಶಾಭಾವನೆಯಿಂದ ಮಳೆಗಾಗಿ ಕಾಯುತ್ತಿದ್ದೇವೆ’ ಎನ್ನುತ್ತಾರೆ ಎಮ್ಮೆದೊಡ್ಡಿ ಭಾಗದ ಕೃಷಿಕ ಶಿವಕುಮಾರ್.

‘ಮಳೆಯ ವಾತಾವರಣ ಸೃಷ್ಟಿಯಾ ಗುವುದೇ ಎಂಬ ನಿರೀಕ್ಷೆಯಲ್ಲಿದ್ದೇವೆ. ನಿತ್ಯ ಅರಳಿಕಟ್ಟೆ ಕಾಯುವುದೇ ಕೆಲಸವಾಗಿದೆ’ ಎಂದು ದೊಡ್ಡಘಟ್ಟದ ಕೃಷಿಕ ಗೋವಿಂದಪ್ಪ ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-126-795611370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.