ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಗಟಿ ಕೆರೆ ದುರಸ್ತಿಗೆ ₹ 2.40 ಕೋಟಿ ಮಂಜೂರು: ಬೆಳ್ಳಿ ಪ್ರಕಾಶ್

₹ 5.25 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Last Updated 12 ಸೆಪ್ಟೆಂಬರ್ 2022, 13:51 IST
ಅಕ್ಷರ ಗಾತ್ರ

ಕಡೂರು: ಬರದ ಪ್ರದೇಶವೆಂದೇ ಹಣೆಪಟ್ಟಿ ಹೊತ್ತ ಕಡೂರು ತಾಲ್ಲೂಕಿನಲ್ಲಿ ನೀರಾವರಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಂತರ್ಜಲ ಅಭಿವೃದ್ಧಿ ನಿಟ್ಟಿನಲ್ಲಿ 20ಕ್ಕೂ ಹೆಚ್ಚು ಕಿಂಡಿ ಆಣೆಕಟ್ಟೆಗಳು ನಿರ್ಮಾಣವಾಗಿವೆ. ಯಗಟಿ ಕೆರೆ ದುರಸ್ತಿಗಾಗಿ ₹ 2.40 ಕೋಟಿ ಮಂಜೂರಾಗಿದೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿ, ಯಗಟಿ, ರಂಗಾಪುರ ಗ್ರಾಮಗಳಲ್ಲಿ ಭಾನುವಾರ ವಿವಿಧ ಯೋಜನೆಗಳ ಮೂಲಕ ರಸ್ತೆ ಸಂಪರ್ಕ ಕಲ್ಪಿಸಲು ಸುಮಾರು ₹ 5.25 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಸಕನಾಗಿ ಆಯ್ಕೆಯಾದಾಗ ಗ್ರಾಮೀಣ ರಸ್ತೆಗಳ ಸುಧಾರಣೆ ಮತ್ತು ಶಾಶ್ವತ ನೀರಾವರಿಗೆ ಆದ್ಯತೆ ನೀಡುವ ಆಶ್ವಾಸನೆಯಂತೆಯೇ ಶ್ರಮಿಸಿ, ಅದರಲ್ಲಿ ಯಶಸ್ವಿಯಾಗಿದ್ದೇನೆಂಬ ಆತ್ಮತೃಪ್ತಿಯಿದೆ. ಅಭಿವೃದ್ಧಿ ವಿಚಾರದಲ್ಲಿ ನನ್ನ ಶ್ರಮ ನಿರಂತರ ಎಂದರು.

ಕೆ. ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹೇಶ್ವರಮ್ಮ, ಯಗಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಚ್.ಎಂ. ರೇವಣ್ಣಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ. ದೇವಾನಂದ್, ಚಿಕ್ಕನಲ್ಲೂರು ನವೀನ್, ಟಿ.ಆರ್.ಲಕ್ಕಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ಚೌಳಹಿರಿಯೂರು ರವಿ, ಕೆ.ಯತಿರಾಜ್, ಶಿವರಾಜ್, ಮಲ್ಲಿದೇವಿಹಳ್ಳಿ ಸತೀಶ್, ಕಿರಣ್ ಪ್ರಭು, ತಾಲ್ಲೂಕು ಪಂಚಾಯಿತಿ ಇಒ ಡಾ.ಟಿ.ಎಂ. ದೇವರಾಜ್‌ ನಾಯ್ಕ, ಎಇಇಗಳಾದ ದಯಾನಂದ್, ಹರ್ಷ ಇದ್ದರು.

ಚಾಲನೆಗೊಂಡ ರಸ್ತೆ ಕಾಮಗಾರಿ

* ಹುಳಿಗೆರೆಯಿಂದ- ಮುದ್ದೇನಹಳ್ಳಿ- ಕೆ.ಬಿದರೆ-ಕಂಚುಗಲ್- ಶೆಟ್ಟಿಹಳ್ಳಿ– ತೆರಸಾಪುರ- ಬಿ.ವಡ್ಡರಹಟ್ಟಿ ಮಾರ್ಗವಾಗಿ ಸಿಂಗಟಗೆರೆ ಪಂಚನಹಳ್ಳಿ ರಸ್ತೆಗೆ ಸೇರುವ 5.50 ಕಿ.ಮೀ ರಸ್ತೆ- ₹ 2.50 ಕೋಟಿ ಅನುದಾನ

* ರಾಜ್ಯ ಹೆದ್ದಾರಿ 152ರ ಉಳಿಗೆರೆಯಿಂದ- ಗುಜ್ಜೇನಹಳ್ಳಿ-ಕೆ.ಬಿದರೆ- ಕಂಚುಗಲ್- ಶೆಟ್ಟಿಹಳ್ಳಿ- ಮುತ್ತಾಣಗಾರೆ- ತೆರಸಾಪುರ-ಜಿ. ವಡ್ಡರಹಟ್ಟಿ ಮಾರ್ಗವಾಗಿ ಸಿಂಗಟಗೆರೆ-ಪಂಚನಹಳ್ಳಿ ರಸ್ತೆ- ₹ 2 ಕೋಟಿ ಅನುದಾನ

* ಯಗಟಿ ಗ್ರಾಮದಲ್ಲಿ ಬಿವೈಎಸ್‌ಎಸ್ ರಸ್ತೆಯಿಂದ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದವರೆಗೆ ಮತ್ತು ಕೆಆರ್‌ಡಿಡಿಎಲ್ ಯೋಜನೆಯಡಿ ₹ 20 ಲಕ್ಷ ವೆಚ್ಚದ ಕಾಂಕ್ರೀಟ್‌ ರಸ್ತೆ ಹಾಗೂ ಯಗಟಿ ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ₹ 25 ಲಕ್ಷ ವೆಚ್ಚದ ಕಾಂಕ್ರೀಟ್‌ ರಸ್ತೆ ಕಾಮಗಾರಿ

* ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅನುದಾನದಲ್ಲಿ ₹ 30 ಲಕ್ಷ ವೆಚ್ಚದ ಕಾಂಕ್ರೀಟ್‌ ರಸ್ತೆ ಕಾಮಗಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT