ಕಡೂರು: ‘ತಾಲ್ಲೂಕಿನ ವೃತ್ತಿನಿರತ 134 ಕುಶಲಕರ್ಮಿಗಳಿಗೆ 2025-26ನೇ ಸಾಲಿನಲ್ಲಿ ಗ್ರಾಮೀಣ ಕೈಗಾರಿಕೆ ಇಲಾಖೆಯ ವತಿಯಿಂದ ಸುಧಾರಿತ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗಿದೆ’ ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಆಸಂದಿ ಟಿ. ಕಲ್ಲೇಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಉಚಿತ ಉಪಕರಣ ವಿತರಿಸಿ ಅವರು ಮಾತನಾಡಿದರು.

ಮರಗೆಲಸ, ಗಾರೆ ಕೆಲಸ ಮತ್ತಿತರ ಕುಶಲಕರ್ಮಿಗಳನ್ನು ಗುರುತಿಸಿ ಸುಮಾರು ₹10.72 ಲಕ್ಷ ವೆಚ್ಚದ ಸಲಕರಣೆಗಳನ್ನು ನೀಡಲಾಗಿದೆ. ಶಾಸಕ ಕೆ.ಎಸ್.ಆನಂದ್ ಅವರು 134 ಅರ್ಹ ಫಲಾನುಭವಿಗಳನ್ನು ಗುರುತಿಸಿದ್ದಾರೆ. ಕುಶಲಕರ್ಮಿಗಳು ಇದರ ಸದುಪಯೋಗ ಪಡೆದುಕೊಂಡು ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುವಂತಾಗಲಿ ಎಂದು ಹಾರೈಸಿದರು.

ಗ್ರಾಮೀಣ ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ಎನ್. ಚಂದ್ರಶೇಖರ್ ಮಾತನಾಡಿ, ಈ ಸಾಲಿನಲ್ಲಿ 134 ಫಲಾನುಭವಿಗಳನ್ನು ಗುರುತಿಸಿ ಉಪಕರಣಗಳ ಕಿಟ್ ವಿತರಿಸಿದ್ದು, ಪರಿಶಿಷ್ಟ ಜಾತಿಯ 21, ಪರಿಶಿಷ್ಟ ಪಂಗಡ 5, ಅಲ್ಪಸಂಖ್ಯಾತರಿಗೆ 18, ಸಾಮಾನ್ಯ ವರ್ಗದ 90 ಫಲಾನುಭವಿಗಳನ್ನು ಗುರುತಿಸಿ ಪರಿಕರ ನೀಡಲಾಗಿದೆ. ಯಾವುದೇ ಅಡಚಣೆ, ಆಕ್ಷೇಪಣೆ ಇಲ್ಲದಂತೆ ಆಯ್ಕೆ ನಡೆದಿದೆ ಎಂದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್ ಹಾಗೂ ಫಲಾನುಭವಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-126-1323895803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.