ಕಡೂರು: ತ್ಯಾಗ, ಮತ್ತು ಬಲಿದಾನದ ಮಹತ್ವ ಸಾರುವ ಬಕ್ರೀದ್ ಹಬ್ಬ ವನ್ನು ತಾಲ್ಲೂಕಿನಾದ್ಯಂತ ಶ್ರದ್ಧಾ, ಭಕ್ತಿಯಿಂದ ಗುರುವಾರ ಆಚರಿಸಲಾಯಿತು.

ಕಡೂರು ಪಟ್ಟಣದ ಲಬಾಬಿನ್ ಮಸೀದಿ, ನೂರ್ ಮಸೀದಿ, ಬಿಲಾಲ್ ಮಸೀದಿ, ಮದೀನಾ ಮತ್ತು ಈದ್ಗಾ ಮೊಹಲ್ಲಾದ ಮಸೀದಿಗಳು ಸೇರಿದಂತೆ ಎಲ್ಲ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು, ನಂತರ ಕೆ. ಹೊಸಳ್ಳಿಯ ಈದ್ಗಾ ಮೈದಾನದಲ್ಲಿ ಕಲೆತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಲ್ಲರೊಂದಿಗೆ ಸ್ನೇಹ, ಪ್ರೀತಿ, ವಿಶ್ವಾಸದೊಂದಿಗೆ ಬಾಳಬೇಕು ಎಂಬ ಸಂದೇಶ ಸಾರಲಾಯಿತು. ಬಳಿಕ ಕಬರಿಸ್ತಾನಕ್ಕೆ ತೆರಳಿ ಕುಟುಂಬದ ಹಿರಿಯರಿಗೆ ಗೌರವ ಸಲ್ಲಿಸಿ ವಾಪಸಾದ ಬಳಿಕ ‘ಕುರ್ಬಾನಿ’ ಅಂಗವಾಗಿ ಬಲಿ ನೀಡಲಾದ ಕುರಿ-ಮೇಕೆಯನ್ನು 3 ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ನೆಂಟರಿಷ್ಟರಿಗೆ, ಮತ್ತೊಂದು ಭಾಗವನ್ನು ಅಶಕ್ತ ಕುಟುಂಬಗಳಿಗೆ ಹಾಗೂ ಉಳಿದದ್ದನ್ನು ಕುಟುಂಬಕ್ಕೆ ಬಳಸಿಕೊಂಡು ಸಿಹಿ ಮತ್ತು ವಿಶೇಷ ಖಾದ್ಯಗಳನ್ನು ತಯಾರಿಸಿ, ಕುಟುಂಬದವರೆಲ್ಲರೂ ಸೇರಿ ಭೋಜನ ಮಾಡುವ ಮೂಲಕ ಹಬ್ಬ ಆಚರಿಸಲಾಯಿತು.

ಬೀರೂರಿನಲ್ಲಿ ಹಳೇಪೇಟೆಯ ಜಾಮಿಯಾ ಮಸೀದಿ ಅನುಯಾಯಿಗಳು ಬಿ.ಎಚ್. ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಂತರ ಶ್ರೀರಾಮಪುರಂನ ಅಂಜುಮನ್ ಮಸೀದಿ, ಶಾಂತಿನಗರದ ಮೆಕ್ಕಾ ಹಾಗೂ ಬಳ್ಳಾರಿಕ್ಯಾಂಪ್ನ ಮದೀನ ಮಸೀದಿಗಳ ಅನುಯಾಯಿಗಳು ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಕಲೆತು ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಬಕ್ರೀದ್ ಅಂಗವಾಗಿ ಕುರಾನ್ ಪಠಣ ನೆರವೇರಿಸಿ ಹಬ್ಬದ ಸಂದೇಶ ನೀಡಿದ ಭದ್ರಾವತಿಯ ಮೌಲಾನಾ ಶಹಾಬುದ್ದೀನ್, ‘ಇಸ್ಲಾಂ ಭ್ರಾತೃತ್ವ ಭಾವನೆ ಸಾರುತ್ತದೆಯೇ ಹೊರತು ಸರ್ವಾಧಿಕಾರಕ್ಕೆ ಮಾನ್ಯತೆ ಇಲ್ಲ. ಮುಸಲ್ಮಾನರು ಶ್ರದ್ಧೆಯಿಂದ ಕುರಾನ್ ಮಾರ್ಗದರ್ಶನವನ್ನು ಪಾಲಿಸಬೇಕು. ಜಗತ್ತಿನಲ್ಲಿ ಶಾಂತಿ ನೆಲೆಸಿ ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿರಿ’ ಎಂದು ಹಬ್ಬದ ಶುಭಾಷಯ ಕೋರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-126-1308500859

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.