ಕಡೂರು: ಬಿಳುವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಒಕ್ಕೊರಲ ಆಗ್ರಹದಂತೆ ಎರಡು ತಿಂಗಳ ಒಳಗೆ ವೇದಾಹಳ್ಳದಿಂದ ಬಿಳುವಾಲ ಕೆರೆಗೆ ನೀರು ಪೂರೈಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವುದಾಗಿ ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದರು.

‘ಶಾಸಕರ ನಡೆ- ಗ್ರಾಮ ಪಂಚಾಯಿತಿ ಕಡೆ’ ಕಾರ್ಯಕ್ರಮದ ಅಂಗವಾಗಿ ತಾಲ್ಲೂ ಕಿನ ಬಿಳುವಾಲ ಗ್ರಾಮದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಳುವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯವರು ಇಲ್ಲಿನ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು. ಗ್ರಾಮಸ್ಥರ ಆಗ್ರಹದಂತೆ ಕೈಗೆತ್ತಿಕೊಳ್ಳಲು ನಿರ್ಧರಿಸಿರುವ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆ ತುಂಬಿಸುವ ಕಾಮಗಾರಿಗೆ ಅಂದಾಜು ₹ 4ಕೋಟಿ ವೆಚ್ಚವಾಗಲಿದ್ದು, ಅನುದಾನದ ಕೊರತೆಯಾಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಬಿಳುವಾಲದ ಸ.ನಂ.34ರಲ್ಲಿ ಸ್ಮಶಾನ ಭೂಮಿ ಕಾಯ್ದಿರಿಸಬೇಕು ಎನ್ನುವ ಗ್ರಾಮಸ್ಥರ ಮನವಿಗೆ ಉತ್ತರಿಸಿದ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಸ.ನಂ.26ರಲ್ಲಿ ಎರಡು ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಲಾಗಿದೆ. ನೀವು ಬಳಸಲು ಕೇಳುತ್ತಿರುವ ಭೂಮಿ ಅಮೃತಮಹಲ್ ಕಾವಲಿಗೆ ಸೇರಿದ್ದು, ಅಧಿಕೃತವಾಗಿ ಘೋಷಿಸಿ ಕಾಯ್ದಿರಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಗ್ರಾಮಸ್ಥರು ಸ.ನಂ ನಮೂದಿಸಿ ಅರ್ಜಿ ಕೊಡಿ, ಅಮೃತಮಹಲ್ ಕಾವಲಿನಲ್ಲಿ ಸ್ಮಶಾನ ಬಳಕೆಗೆ ಅವಕಾಶ ಕೊಡಬಹುದೇ ಎಂದು ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿ ಆನಂದ್ ತಿಳಿಸಿದರು.

ಬಿಳುವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳುವಾಲ, ಕಲ್ಲಾಪುರ, ನಾಗಗೊಂಡನಹಳ್ಳಿ, ಆಲದಹಳ್ಳಿ, ಇಂದಿರಾನಗರದಲ್ಲಿ ಸುಮಾರು 400ಕ್ಕೂ ಹೆಚ್ಚು ಮನೆಗಳಿಗೆ ಇ-ಸ್ವತ್ತು ವಿತರಿಸಿಲ್ಲ. ಕಂದಾಯ ಇಲಾಖೆಯವರು ಶೀಘ್ರವಾಗಿ ಕ್ರಮ ವಹಿಸಿ ಎಂದು ಶಾಸಕ ಆನಂದ್ ಸೂಚಿಸಿದರು.

ಪ್ರತಿಕ್ರಿಯಿಸಿದ ತಹಶೀಲ್ದಾರ್, ಇಂದಿರಾನಗರ ಕಂದಾಯ ಉಪಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರಣ ಪ್ರಮಾಣ ಪತ್ರವಿಲ್ಲದೆ ಪೌತಿ ಖಾತೆ ಮಾಡಲು ಸರ್ಕಾರ ಈಗ ಅವಕಾಶ ಕಲ್ಪಿಸಿದೆ. ಇನ್ನು ಒಂದು ವಾರದ ಒಳಗೆ ಇಲ್ಲಿ ಬಾಕಿ ಇರುವ 600 ಪೌತಿಖಾತೆದಾರರಿಗೂ ನೋಟಿಸ್ ನೀಡಿ ಬದಲಾವಣೆಗೆ ಕ್ರಮ ವಹಿಸಲಾಗುವುದು. ಗ್ರಾಮಸ್ಥರು 2-ಇ ನೋಟಿಫಿಕೇಷನ್ಗೆ ಈಗ ಪ್ರಸ್ತಾವನೆ ಸಲ್ಲಿಸಿರುವ ಕಾರಣ ವಿಳಂಬವಾಗಿದೆ. ಉಪವಿಭಾಗಾಧಿಕಾರಿ ಅನುಮೋದನೆಗೆ ಕಳಿಸಲಾಗಿದೆ ಎಂದು ತಿಳಿಸಿದರು.

ನಾಗಗೊಂಡನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಬ್ಯಾಚ್ 1ರ ಕಾಮಗಾರಿಯಲ್ಲಿ ಒಂದು ಓವರ್ಹೆಡ್ ಟ್ಯಾಂಕ್ 6 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಅದನ್ನು ಗ್ರಾಮ ಪಂಚಾಯಿತಿಗೆ ವಹಿಸಗಿದೆ. ಆದರೆ, ಅದರಿಂದ ಇದುವರೆಗೂ ನೀರು ಪೂರೈಕೆ ಆಗಿಲ್ಲ. ಈ ಬಗ್ಗೆ ಏಕೆ ಕ್ರಮ ವಹಿಸುತ್ತಿಲ್ಲ ಎಂದು ಗ್ರಾಮಸ್ಥ ಹನುಮಂತಪ್ಪ ಪ್ರಶ್ನಿಸಿದರು.

ಜಲಜೀವನ್ ಮಿಷನ್ ಎಇಇ ಪ್ರಕಾಶ್ ಉತ್ತರಿಸಿ ಅಲ್ಲಿ ರೈಸಿಂಗ್ ಮೈನ್ನಲ್ಲಿ ಸಮಸ್ಯೆಯಾಗಿ ಕೆಳಗಿನ ಹಂತದಲ್ಲಿಯೇ ನೀರು ಸೋರಿಕೆಯಾಗುತ್ತಿದೆ. ಸ್ಥಳ ಪರಿಶೀಲಿಸಿದ್ದು, ಬಗೆಹರಿಸಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಹಲವು ಪಿಂಚಣಿದಾರ ರಿಂದ ದಾಖಲೆ ಕೋರಿದ್ದು, ಆದಾಯ ಪ್ರಮಾಣಪತ್ರ ಕೋರಲಾಗಿದೆ. ಆದಾಯ ₹ 32ಸಾವಿರ ಮಿತಿಯಲ್ಲಿ ಇರಬೇಕಿದೆ. ವಿಎ, ಆರ್ಐ ನಿಗದಿತ ಮಿತಿ ದಾಖಲಿಸಿದರೂ ಕಸಬಾ ಉಪ ತಹಶೀಲ್ದಾರ್ ₹ 45ಸಾವಿರಕ್ಕೆ ಹೆಚ್ಚಿಸುತ್ತಾರೆ. ಇದರಿಂದ 20ಕ್ಕೂ ಹೆಚ್ಚು ಜನರಿಗೆ ಪಿಂಚಣಿ ನಿಲ್ಲುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸಭೆಗೆ ಡಿ.ಟಿ ಮಲ್ಲಿಕಾರ್ಜುನರನ್ನು ಕರೆಸಿ, ವಿಎ, ಆರ್ಐ ನಮೂದಿಸಿದ್ದನ್ನು ಅವರು ಹೇಗೆ ತಿದ್ದುಪಡಿ ಮಾಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಆನಂದ್, ಜನರಿಗೆ ನೆರವಾಗುವ ಕೆಲಸಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಪ್ರವೀಣ್ ಸಿ.ಆರ್., ಅಕ್ಷರದಾಸೋಹ ಸಹಾಯಕ ನಿರ್ದೇಶಕ ದೇವರಾಜ್, ಸಿಡಿಪಿಒ ಶಿವಪ್ರಸಾದ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಪ್ತಕೋಟಿ ಧನಂಜಯ, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-126-2055500406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.