ಕಡೂರು: ಬೀರೂರು ಪಟ್ಟಣದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಪುರಸಭೆಯ ಅಧಿಕಾರಿ ಅಥವಾ ಸಿಬ್ಬಂದಿಗೆ ಮೀಸಲಾಗಿದ್ದ ವಸತಿಗೃಹಗಳು ವರ್ಷಗಳಿಂದ ಪಾಳುಬಿದ್ದಿವೆ. ಪಕ್ಕದಲ್ಲಿಯೇ ಹಲವು ಕುಟುಂಬಗಳು ವಾಸವಿದ್ದು, ಈ ಕಟ್ಟಡದ ದುಃಸ್ಥಿತಿಯಿಂದಾಗಿ ಇದು ಹುಳುಗಳು ಓಡಾಡುವ ತಾಣವಾಗಿ ಮಾರ್ಪಟ್ಟು ಜನರು ಭಯದಿಂದ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಕಟ್ಟಡದಿಂದ ಸ್ವಲ್ಪದೂರದಲ್ಲಿರುವ, ಕಂದಾಯ ಇಲಾಖೆಗೆ ಸೇರಿದ ಹಿಂದೆ ರೆವಿನ್ಯೂ ಇನ್ಸ್ಪೆಕ್ಟರ್ ಕಚೇರಿಯಾಗಿದ್ದ ಕಟ್ಟಡವು ಕೂಡ ಬೀರೂರಿನಲ್ಲಿ ನಾಡಕಚೇರಿ ಆರಂಭಗೊಂಡಾಗಿನಿಂದ (ಸುಮಾರು 15 ವರ್ಷಗಳು) ಪಾಳು ಬಿದ್ದಿದೆ. ಇಲ್ಲಿದ್ದ ಹಲವು ದಾಖಲೆಗಳು ಗೆದ್ದಲು ತಿಂದು ಮಣ್ಣಾಗಿ ಹೋಗಿದೆ. ಕಟ್ಟಡವು ಬೀಳುವ ಸ್ಥಿತಿಗೆ ತಲುಪಿದ್ದು, ಕಂದಾಯ ಇಲಾಖೆಯು ಈ ಕಟ್ಟಡವನ್ನು ರಕ್ಷಿಸಲು ಮುಂದಾಗುವ ಜತೆಗೆ ಸ್ವಚ್ಛತೆ ಕಾಪಾಡಿ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳಬೇಕು.

– ಭಾರತಿ, ಲಕ್ಷ್ಮಮ್ಮ, ಶೇಖರ್, ರವಿಕುಮಾರ್, ಶಶಿ, ಪುಷ್ಪಲತಾ, ನಾಗರಾಜ್, ಜಯಮ್ಮ, ಬೀರೂರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-126-2050884116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.