ಕಡೂರು: ‘ತಾಲ್ಲೂಕಿನ ಯಳಗೊಂಡನಹಳ್ಳಿ, ಯಳ್ಳಂಬಳಸೆ, ವಿಠಲಾಪುರ, ಚಿಕ್ಕನಾಯ್ಕನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರು ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಆಗ್ರಹಿಸಿರುವುದನ್ನು ಸ್ಥಳ ಪರಿಶೀಲನೆ ಮೂಲಕ ಅವಲೋಕಿಸಿ, ಸಮಸ್ಯೆ ಬಗೆಹರಿಸಲಾಗುವುದು’ ಎಂದು ಮೆಸ್ಕಾಂ ಕಡೂರು ಉಪವಿಭಾಗ ಕಾರ್ಯಪಾಲಕ ಎಂಜಿನಿಯರ್ ರವಿಕಿರಣ್ ಭರವಸೆ ನೀಡಿದರು.

ಸೋಮವಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದ ರೈತರಿಗೆ ಮಂಗಳವಾರ ಬರುವಂತೆ ತಿಳಿಸಲಾಗಿತ್ತು. ಅದರಂತೆ ಮಂಗಳವಾರ ಕಚೇರಿಗೆ ಬಂದ ರೈತರನ್ನು ಭೇಟಿಯಾದ ಅವರು, ರೈತರೊಂದಿಗೆ ಚರ್ಚಿಸಿ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮತ್ತು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸುವುದಾಗಿ ತಿಳಿಸಿದರು.

ರೈತರ ಪರವಾಗಿ ಸುಪ್ರೀತ್ ಯಳ್ಳಂಬಳಸೆ ಮಾತನಾಡಿ, ‘2 ತಿಂಗಳಿನಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಸರ್ಕಾರದ ಆದೇಶದಂತೆ ಕೃಷಿಗೆ 7 ಗಂಟೆ ವಿದ್ಯುತ್ ನೀಡಬೇಕು. ಆದರೆ 2ರಿಂದ 3 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ. ಕೇಳಿದರೆ ಎಲ್ಸಿ ಪಡೆಯಲಾಗಿದೆ ಎನ್ನುತ್ತಾರೆ. ಕಾರ್ಯ ಮುಗಿದ ಬಳಿಕ ಮತ್ತೆ ವಿದ್ಯುತ್ ಸರಬರಾಜು ಮಾಡುವುದಿಲ್ಲ. ಲೈನ್ಮ್ಯಾನ್ಳು ಯಳ್ಳಂಬಳಸೆ ಮತ್ತು ವೈ.ಮಲ್ಲಾಪುರ ಭಾಗದ ಉಸ್ತುವಾರಿಯಾಗಿದ್ದು, ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ನಿಮ್ಮ ಕಣ್ಣಾಮುಚ್ಚಾಲೆಗೆ ತೋಟಗಳು ಒಣಗುತ್ತಿದ್ದು, ರೈತರು ವಿಷ ಕಡಯುವ ಸ್ಥಿತಿ ಎದುರಾಗುತ್ತಿದೆ. ಮೆಸ್ಕಾಂನವರು ಒಂದೋ ರೈತರಿಗೆ ವಿದ್ಯುತ್ ಪೂರೈಸಿ ಅಥವಾ ವಿಷಕೊಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಇಇ ತಿರುಪತಿ ನಾಯಕ್, ‘ಲೈನ್ ಮ್ಯಾನ್ಗಳಿಂದ ಸಮಸ್ಯೆ ಉಂಟಾಗಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. 7 ಗಂಟೆ ಆಗದಿದ್ದರೂ 5ರಿಂದ 6 ಗಂಟೆಯಾದರೂ ವಿದ್ಯುತ್ ಪೂರೈಸಲು ಯತ್ನಿಸುತ್ತಿದ್ದೇವೆ. ಪ್ರಕೃತಿ ವಿಕೋಪದ ಸಂದರ್ಭ ಹೊರತುಪಡಿಸಿ, ನಾಳೆಯಿಂದಲೇ ನಿಮ್ಮ ಬೇಡಿಕೆ ಈಡೇರಿಸುತ್ತೇವೆ’ ಎಂದು ಆಶ್ವಾಸನೆ ನೀಡಿದರು.

ಕೊಟ್ಟ ಭರವಸೆಯಂತೆ ಮೆಸ್ಕಾಂ ಕ್ರಮ ವಹಿಸದಿದ್ದರೆ ನಿಮ್ಮ ಸಿಬ್ಬಂದಿಯನ್ನು ಸ್ಥಳೀಯ ದೇವಾಲಯ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಕೂಡಿ ಹಾಕಲಾಗುವುದು ಎಂದು ರೈತರು ಎಚ್ಚರಿಸಿದರು.

ಯಳಗೊಂಡನಹಳ್ಳಿ, ಯಳ್ಳಂಬಳಸೆ, ವಿಠಲಾಪುರ, ಚಿಕ್ಕನಾಯ್ಕನಹಳ್ಳಿ ಭಾಗದ ರೈತರಾದ ಮಿಲ್ಟ್ರಿ ರಮೇಶ್, ಮಂಜಪ್ಪ, ಚಂದ್ರಶೇಖರ್, ಮಧು, ಹಾಫೀಜ್, ದಸ್ತಗೀರ್ ಸಾಬ್, ನವೀನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-126-978220753

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.