ಕಡೂರು: ತಾಲ್ಲೂಕಿನ ಯಗಟಿ ಹೋಬಳಿಯ ಗುಡ್ಡೇಹಳ್ಳಿ ಗ್ರಾಮದಲ್ಲಿ ಶನಿವಾರ ಆಗ್ನಿ ಆಕಸ್ಮಿಕದಲ್ಲಿ ದಾಕ್ಷಾಯಣಮ್ಮ ಎಂಬುವರ ಮನೆ ಹಾನಿಗೀಡಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವಘಡ ಸಂಭವಿಸಿದೆ.

ದಾಕ್ಷಾಯಣಮ್ಮ ಅವರು ಬೇರೆ ಊರಿಗೆ ಕೆಲಸಕ್ಕೆ ತೆರಳಿದ್ದ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡದ್ದನ್ನು ಗಮನಿಸಿದ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಮನೆಯ ಮಾಡು ಸುಟ್ಟು ಮನೆಯ ಒಳಗಿನ ಬಹಳಷ್ಟು ಪದಾರ್ಥಗಳು ಹಾಗೂ ಮನೆಯ ದುರಸ್ತಿಗೆಂದು ಸಂಗ್ರಹಿಸಿದ್ದ ಮರಮುಟ್ಟುಗಳೂ ನಾಶವಾಗಿವೆ. ಹಾನಿಯ ಮೊತ್ತ ತಿಳಿದು ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.