ಕಡೂರು: ತಾಲ್ಲೂಕಿನ ಮದಗದ ಕೆರೆ ಮತ್ತು ಅಯ್ಯನ ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಮಳೆಗಾಲ ಸಮೀಪಿಸಿದರೂ ಮದಗದ ಕೆರೆ ಕಾಲುವೆಗಳ ದುರಸ್ತಿ ಹಂತದಲ್ಲಿದ್ದರೆ, ಅಯ್ಯನ ಕೆರೆಯ ತೂಬಿನ ಗೇಟ್ ಮುರಿದು ಹೋಗಿದ್ದು ಶೀಘ್ರ ದುರಸ್ತಿ ಆಗದಿದ್ದರೆ ನೀರಿನ ಸಂಗ್ರಹದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಅಭಿವೃದ್ಧಿ ಕಾಮಗಾರಿಗಾಗಿ ಮದಗದ ಕೆರೆ ಖಾಲಿ ಮಾಡಿದ್ದು, ಕೆರೆಯಲ್ಲಿ ಸ್ವಲ್ಪವೂ ನೀರಿನ ಸಂಗ್ರಹವಿಲ್ಲ. ಕೆರೆಯಿಂದ ಹರಿದ ನೀರು ಚಿಕ್ಕಂಗಳ, ಬುಕ್ಕಸಾಗರ, ದೇವನಕೆರೆ ಮೊದಲಾದ ಸರಣಿ ಕೆರೆಗಳಲ್ಲಿ ಸ್ವಲ್ಪ ಸಂಗ್ರಹವಾಗಿದೆ.

ಮಳೆಗಾಲ ಆರಂಭವಾಗುವ ಮುನ್ನ ಕಾಲುವೆಗಳು ದುರಸ್ತಿಯಾದರೆ ಸರಣಿ ಕೆರೆಗಳಿಗೆ ನೀರು ಹರಿಯುವಲ್ಲಿ ಅಡಚಣೆ ಇರಲಾರದು. ಒಂದು ವೇಳೆ ಬಿರುಸಿನ ಮಳೆಯಾಗಿ ಕೆರೆ ಬೇಗ ತುಂಬಿ ಕಾಲುವೆಗಳಲ್ಲಿ ನೀರು ಹರಿದರೆ ದುರಸ್ತಿಗಾಗಿ ಸರ್ಕಾರ ಮಾಡಿದ ವೆಚ್ಚ ನಷ್ಟದ ಜತೆಗೆ ಕೆಲಸವೂ ಮಣ್ಣು ಪಾಲಾಗುವ ಸಾಧ್ಯತೆ ಇದೆ. ಕೆರೆಯ ಜಲಮೂಲ ವಲಯದಲ್ಲಿ ಕೆಲವು ಕಡೆ ಮುಂಗಾರು ಪೂರ್ವ ಮಳೆ ಸುರಿದಿದ್ದರೂ ಕೆರೆಗೆ ನೀರು ಬಂದಿಲ್ಲ. ಕಾಲುವೆಗಳ ಕೆಲಸಕ್ಕೂ ಅಡ್ಡಿ ಆಗಿಲ್ಲ. ಇವೆಲ್ಲವನ್ನು ಗಮನದಲ್ಲಿ ಇರಿಸಿ ಸಣ್ಣ ನೀರಾವರಿ ಇಲಾಖೆಯು ಕೆರೆಯ ಕೆಲಸವನ್ನು ಬೇಗ ಮುಗಿಸಬೇಕು ಎಂಬ ಒತ್ತಾಯ ರೈತರದ್ದಾಗಿದೆ.

ಸಖರಾಯಪಟ್ಟಣದ ಸುತ್ತಮುತ್ತಲ ರೈತರ ಜೀವನಾಡಿಯಾದ ಅಯ್ಯನ ಕೆರೆಯ ತೂಬು ದುರಸ್ತಿ ವಿಳಂಬ ಆಗುತ್ತಿರುವುದು ರೈತರಲ್ಲಿ ಚಿಂತೆ ಮೂಡಿಸಿದೆ. ಮಳೆಗಾಲ ಆರಂಭವಾಗುತ್ತಿದ್ದು ಅಲ್ಪಸ್ವಲ್ಪ ನೀರು ಕೆರೆಗೆ ಬರಲು ಆರಂಭಿಸಿದೆ. ಆದರೆ ಕೆರೆಯ ತೂಬಿನ ಗೇಟ್ ದುರಸ್ತಿ ಆಗುತ್ತಿಲ್ಲ. ಈ ಕೆರೆಯು ಹೆಚ್ಚಿನ ಸರಣಿ ಕೆರೆಗಳನ್ನು ಹೊಂದಿಲ್ಲದ ಕಾರಣ ಅಪಾರ ಪ್ರಮಾಣದ ನೀರು ಹಾನಿಯಾಗುವ ಸಾಧ್ಯತೆ ಇದ್ದು, ಜನರ ಆತಂಕ ದೂರ ಮಾಡಲು ಸಣ್ಣ ನೀರಾವರಿ ಇಲಾಖೆ ಅತಿ ಬೇಗ ಕಾರ್ಯೋನ್ಮುಖವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಈ ಕುರಿತು ಸಣ್ಣ ನೀರಾವರಿ ಇಲಾಖೆಯ ಎಇಇ ದಕ್ಷಿಣಾಮೂರ್ತಿ ಪ್ರತಿಕ್ರಿಯಿಸಿ, ‘ಮೈಸೂರಿನಿಂದ ತಂತ್ರಜ್ಞರು ಬಂದು ಪರಿಶೀಲಿಸಿ ಅಳತೆ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಐದಾರು ದಿನಗಳಲ್ಲಿ ಬಂದು ಸರಿ ಪಡಿಸುವ ಭರವಸೆ ನೀಡಿದ್ದಾರೆ. ನಮ್ಮ ಪ್ರಯತ್ನ ಮುಂದುವರಿದಿದೆ. ಇಲಾಖೆಗೂ ಕೆರೆಯ ಬಗ್ಗೆ ರೈತರಷ್ಟೇ ಕಾಳಜಿ ಇದ್ದು ಶೀಘ್ರದಲ್ಲಿಯೇ ತೂಬು ದುರಸ್ತಿ ಮಾಡಿಸಲಾಗುವುದು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-126-1101537512

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.