ಕಡೂರು: ಜೈನ ತೀರ್ಥಂಕರ ಭಗವಾನ್ ವರ್ಧಮಾನ ಮಹಾವೀರರ 2625ನೇ ಜಯಂತಿಯನ್ನು ಪಟ್ಟಣದಲ್ಲಿ ಆಚರಿಸಲಾಯಿತು.

ಜೈನ್ ಟೆಂಪಲ್ ರಸ್ತೆಯಲ್ಲಿರುವ ಜೈನ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ ಮಹಾವೀರರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಪಂಚಕಲ್ಯಾಣ ಅರ್ಚನೆ ನೆರವೇರಿಸಿದ ನಂತರ ಜೈನ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸಮಾಜದ ಯುವಕರು ಮತ್ತು ಮಕ್ಕಳು ಭಗವಾನ್ ಮಹಾವೀರರ ಬಗ್ಗೆ ಹಾಡು ಗಳನ್ನು ಹೇಳುತ್ತ ಘೋಷಣೆ ಕೂಗಿದರು.

ಜೈನ ದೇವಾಲಯದ ಮೂರ್ತಿ ಪೂಜಕ ಸಮಿತಿ ಅಧ್ಯಕ್ಷ ಮಹಾವೀರ್ ಸುರಾನ, ‘ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರರ 2625ನೇ ಜನ್ಮ ದಿನವನ್ನು ಸಮಾಜದ ವತಿಯಿಂದ ಆಚರಿಸಲಾಗುತ್ತಿದೆ. ಅಹಿಂಸೆ ಮತ್ತು ಸತ್ಯದ ಸಂದೇಶ ಸಾರಿದ ಮಹಾವೀರರ ಗೌರವಾರ್ಥ ಈ ದಿನ ಉಪವಾಸ ಮತ್ತು ದಾನ ಮಾಡುವುದು ವಾಡಿಕೆ’ ಎಂದರು.

ಕಡೂರಿನ ಜೈನ ಸಮಾಜದವರು ಒಟ್ಟಿಗೆ ಸೇರಿ ಪೂಜೆ ನಡೆಸಿದರು. ಮೆರವಣಿಗೆಯಲ್ಲಿ ಅಮೃತ ಲಾಲ್ ಮೆಹ್ತಾ, ಲಾಲ್ಚಂದ್ ಡಾಗ, ಮಹೇಂದ್ರ, ನೀತೂದೇವಿ ಮಹೇಂದ್ರ, ತರುಣ್, ಮುರುಳಿ ಕೊಠಾರಿ, ಮೋಹಿತ್ ಡಾಗ, ದಂಡಾವತಿ ಕುಟುಂಬ, ಲಕ್ಷ್ಮೀಶ ಪಿ. ಶಿರಹಟ್ಟಿ, ಮಹಿಳೆಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-126-1807494368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.