ಕಡೂರು: ತಾಲ್ಲೂಕಿನ ಮತಿಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಎಚ್. ಕುಶಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಬಿ.ಆರ್. ರಾಜಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಿ.ಎಚ್. ಕುಶುಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ಸಹಕಾರ ಉಪನೋಂದಣಾಧಿಕಾರಿ ಕಚೇರಿಯ ಅಧಿಕಾರಿ ಶಶಿಕಾಂತ್ ಅವಿರೋಧ ಆಯ್ಕೆ ಘೋಷಿಸಿದರು.

ಅಭಿನಂದನಾ ಸಭೆಯಲ್ಲಿ ಮಾತನಾ ಡಿದ ಸಿ.ಎಚ್.ಕುಶಕುಮಾರ್, ಮುಂದಿನ ದಿನಗಳಲ್ಲಿ ಸಂಘದ ಸಭೆ ಸಮಾರಂಭಕ್ಕೆ ಸಂಘದ ಕಚೇರಿಯ ಮೇಲ್ಭಾಗದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸುವ ಗುರಿ ಇದೆ. ಷೇರುದಾರ ರೈತರಿಗೆ ಅಗತ್ಯವಾದ ಅಭರಣ ಸಾಲ, ಗೃಹ ಸಾಲ ಸೇರಿದಂತೆ ವಾಹನಗಳ ಮೇಲಿನ ಸಾಲವನ್ನು ನೀಡುವ ಮೂಲಕ ಅರ್ಥಿಕ ನೆರವು ನೀಡಲು ಶ್ರಮಿಸುತ್ತೇನೆ ಎಂದರು.

ಸಂಘದ ಹಿರಿಯ ನಿರ್ದೇಶಕ ಸಿ.ಪಿ.ಪ್ರಕಾಶ್, ಷೇರುದಾರ ರೈತರ ಹಿತಕಾಪಾಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತುಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಿರ್ದೇಶಕ ಮಂಡಳಿಯ ಸಹಕಾರ ನಿರಂತರವಾಗಿರಲಿದೆ ಎಂದರು.

ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜಪ್ಪ, ಸಂಘದ ಉಪಾಧ್ಯಕ್ಷೆ ಗಂಗಮ್ಮ, ನಿರ್ದೇಶಕರಾದ ಕೆ.ಎಂ. ಈಶ್ವರಪ್ಪ, ಎಸ್. ನಟರಾಜ್, ಕೆ.ಎಸ್. ಸುರೇಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್, ಜಯಮ್ಮ, ಲಕ್ಷ್ಮಿಬಾಯಿ, ಮುಖಂಡರಾದ ಕೆ.ಬಿ. ಬಸವರಾಜಪ್ಪ, ಸಿದ್ದಪ್ಪ, ಸಂಘದ ಕಾರ್ಯದರ್ಶಿ ಮಧುಸೂದನ್, ನಂಜುಂಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-126-421897644

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.