ಕಡೂರು: ಕಡೂರಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ಮತ್ತು ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಎನ್ಎಚ್ಎಂ ಯೋಜನೆಯಡಿ ಬ್ಲಾಕ್ ಮಟ್ಟದ ಪ್ರಯೋಗಾಲಯ ಕಟ್ಟಡ ನಿರ್ಮಾಣಕ್ಕೆ ಶನಿವಾರ ಮಧ್ಯಾಹ್ನ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತಲೂ ಉತ್ತಮ ಸೇವೆ ಲಭಿಸುತ್ತಿರುವುದು ಸಂತಸದ ವಿಷಯವೇ ಆಗಿದೆ. ಈಗ ₹40 ಲಕ್ಷ ವೆಚ್ಚದಲ್ಲಿ ರಕ್ತ ಪರೀಕ್ಷಾ ಕೇಂದ್ರಕ್ಕೆ ಕಟ್ಟಡ ನಿರ್ಮಾಣವಾಗುತ್ತಿದ್ದು, ಬಡ ಜನರಿಗೆ ವರದಾನವಾಗಲಿದೆ. ಕಡೂರಿಗೆ ಈ ಹಿಂದೆಯೇ ತಾಯಿ-ಮಕ್ಕಳ ಆಸ್ಪತ್ರೆಯು ಮಂಜೂರಾಗಿದ್ದರೂ ಜಾಗ ಗುರುತಿಸಿಕೊಡುವಲ್ಲಿ ವಿಳಂಬವಾದ ಕಾರಣ ವಾಪಸ್ ಹೋಗಿತ್ತು. ಈಗ ಗಾಣದಾಳು ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ 5 ಎಕರೆ ಭೂಮಿ ಮಂಜೂರು ಮಾಡಿಸಿದ್ದು, ಇಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣವಾಗಲಿದೆ. ಆದರೆ, ಕೇಂದ್ರ ಸರ್ಕಾರದ ಮಾನದಂಡದಂತೆ ಸಾರ್ವಜನಿಕ ಆಸ್ಪತ್ರೆಯಲ್ಲಿ ತಿಂಗಳಿಗೆ ಕನಿಷ್ಠ 100 ಮಕ್ಕಳ ಜನನ ಆಗಬೇಕು. ಸಾಕಷ್ಟು ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದು, ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವಂತೆ ಮನವೊಲಿಸಲು ವೈದ್ಯರು ಮತ್ತು ಸಿಬ್ಬಂದಿ ಮುಂದಾಗಬೇಕು. ಮಾನದಂಡ ಪೂರೈಸಿದರೆ ಸರ್ಕಾರದ ವತಿಯಿಂದ ಹಣ ಮಂಜೂರು ಮಾಡಿಸಲು ಮುಂದಾಗುತ್ತೇನೆ. ಕಡೂರಿನಲ್ಲಿ 8 ಹಾಸಿಗೆಗಳ ಡಯಾಲಿಸಿಸ್ ಕೇಂದ್ರವು ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದ್ದು, ಬೀರೂರಿನಲ್ಲಿ ಕನಿಷ್ಠ 4 ಹಾಸಿಗೆಗಳ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಆರೋಗ್ಯ ಸಚಿವರ ಗಮನ ಸೆಳೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ದತ್ತಾತ್ರಿ ಮಾಹಿತಿ ನೀಡಿ, ಬಿಪಿಎಚ್ಯು (ಬ್ಲಾಕ್ ಪಬ್ಲಿಕ್ ಹೆಲ್ತ್ ಯುನಿಟ್) ಅಡಿಯಲ್ಲಿ ವಿವಿಧ ರಾಷ್ಟ್ರೀಯ ಆರೋಗ್ಯ ಸೇವೆಗಳ ಪ್ರಯೋಗಾಲಯ ಸ್ಥಾಪಿಸುವ ಮೂಲಕ ವೈದ್ಯರು ಮತ್ತು ರೋಗಿಗಳಿಗೆ ಸಮಯ ಉಳಿತಾಯ, ಏಕಗವಾಕ್ಷಿ ವ್ಯವಸ್ಥೆ ಮೂಲಕ ರಕ್ತ ಹಾಗೂ ಇತರೆ ಮಾದರಿಗಳ ತ್ವರಿತ ಪರೀಕ್ಷೆ ಸೌಲಭ್ಯ ಲಭಿಸಿ, ಜಿಲ್ಲಾ ಕೇಂದ್ರಗಳಿಗೆ ತೆರಳುವ ಪ್ರಮೇಯ ತಪ್ಪಲಿದೆ. ವೈದ್ಯರು ಕೂಡ ಇಂತಹುದೇ ರೋಗ ಹಾಗೂ ಇದೇ ಚಿಕಿತ್ಸೆ ಎಂದು ಸುಲಭವಾಗಿ ಕಂಡು ಹಿಡಿಯಲು ನೆರವಾಗಲಿದೆ. ಕ್ಷಯ, ಮಲೇರಿಯಾ, ಡೆಂಗಿಯಂತಹ ಕಾಯಿಲೆಗಳಿಗೂ ಸೂಕ್ತ ವೈದ್ಯಕೀಯ ಸೇವೆ ದೊರಕುವ ನಿಟ್ಟಿನಲ್ಲಿ ಪ್ರಯೋಗಾಲಯ ಕರ್ತವ್ಯ ನಿರ್ವಹಿಸುತ್ತದೆ. ಇಲ್ಲಿ ಪ್ರಯೋಗಾಲಯ ಸ್ಥಾಪನೆ ಮೂಲಕ ತಾಲ್ಲೂಕಿನ ಪಿಎಚ್ಸಿ ಮತ್ತು ಸಿಎಚ್ಸಿಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ ಸಾರ್ವಜನಿಕರಿಗೆ ನೆರವಾಗಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚಂದಾ, ಡಾ. ಗುರುಮೂರ್ತಿ, ಡಾ. ಕಿರಣ್, ಡಾ. ವಿನಯ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಆಸಂದಿ ಕಲ್ಲೇಶ್, ಭಾರತಿ, ಮ್ಯಾಟ್ರನ್ ಸರಸ್ವತಿ, ಲ್ಯಾಬ್ ಟೆಕ್ನಿಷಿಯನ್ ರವಿ ನಾಯ್ಕ, ಜಗದೀಶ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-126-494238936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.