ಕಡೂರು: ಕಡೂರು ಮತ್ತು ಮೂಡಿಗೆರೆ ತಾಲ್ಲೂಕುಗಳಲ್ಲಿ ನಾಲ್ಕು ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನಿನ ಹಕ್ಕು ನೀಡದೇ, ಆ ಜಾಗವನ್ನು ಅರಣ್ಯ ಭೂಮಿ ಎಂದು ಘೋಷಿಸಿ, ನೋಟೀಸ್ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಇದನ್ನು ವಿರೋಧಿಸಿ ಸಂತ್ರಸ್ತ ರೈತರಿಗೆ ನ್ಯಾಯಾಂಗದ ಮೂಲಕವೇ ನ್ಯಾಯ ಒದಗಿಸುವ ಪ್ರಯತ್ನಕ್ಕೆ ಮುಂದಾಗಿರುವುದಾಗಿ ವೈ.ಎಸ್.ವಿ. ದತ್ತ ತಿಳಿಸಿದರು.

ಮೂಡಿಗೆರೆಯಲ್ಲಿ ಶನಿವಾರ ಏರ್ಪಡಿಸಲಾದ ‘ನಮ್ಮ ಭೂಮಿ-ನಮ್ಮ ಹಕ್ಕು’ ರೈತ ಸಮಾವೇಶಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಅವರು ಇಲ್ಲಿ ಮಾತನಾಡಿದರು.

ಬಡ ರೈತರು 20-30 ವರ್ಷಗಳಿಂದ ಜೀವ ಬಿಗಿ ಹಿಡಿದುಕೊಂಡು ತಮಗೆ ಸಾಗುವಳಿ ದೊರೆತೀತೇನೋ ಎಂಬ ಆಸೆಕಣ್ಣುಗಳಿಂದ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಅವರನ್ನು ಭೂಗಳ್ಳರಂತೆ ಬಿಂಬಿಸಿ, ಅವರು ಉಳುಮೆ ಮಾಡಿದ ಜಮೀನನ್ನು ಕಿತ್ತುಕೊಳ್ಳಲು ಸರ್ಕಾರವೇ ಮುಂದಾಗಿರುವುದು ವಿಪರ್ಯಾಸ. ರೈತರ ಹಿತ ಕಾಯುವ ಸಲುವಾಗಿ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದೇವೆ. ಸಾಗುವಳಿ ಚೀಟಿ ಪಡೆದ ಪ್ರತಿ ರೈತರಿಂದ ಹೈಕೋರ್ಟ್ ವಕೀಲರ ತಂಡದ ಮೂಲಕ ವಕಾಲತ್ತು ಹಾಕಿಸಲು ಮುಂದಾಗಿದ್ದೇವೆ’ ಎಂದರು.

‘ಕಡೂರು ಕ್ಷೇತ್ರದಲ್ಲಿ 2010ರಿಂದ ಈಚೆಗೆ 2,300 ಬಗರ್ಹುಕುಂ ಸಾಗುವಳಿದಾರರು ಸಾಗುವಳಿ ಚೀಟಿ ಪಡೆದಿದ್ದಾರೆ. ಕೋರ್ಟ್ಗೆ ಅಲೆಯಲು, ವಕೀಲರ ಶುಲ್ಕ ಭರಿಸಲು ಅವರಿಗೆ ಸಾಧ್ಯವಿಲ್ಲ. ಹಾಗಾಗಿ ಸಮಾನ ಮನಸ್ಕರು ಸೇರಿ ಕೋರ್ಟ್ ಹಾಗೂ ವಕೀಲರ ವೆಚ್ಚ ಭರಿಸಲು ನಿರ್ಧರಿಸಿದ್ದೇವೆ. ನ್ಯಾಯಾಂಗವೇ ನಮಗೆ ಅಂತಿಮ ಆಸರೆ’ ಎಂದು ವಿವರಿಸಿದರು.

ಸಮಾವೇಶದಿಂದ ಮರಳಿದ ಬಳಿಕ ಮತ್ತೆ ರೈತರೆಲ್ಲ ಒಗ್ಗೂಡಿ ಸ್ಥಳೀಯ ಶಾಸಕ ಕೆ.ಎಸ್. ಆನಂದ್ ಅವರಲ್ಲಿ, ‘ರೈತರ ಪರವಾಗಿ ಸರ್ಕಾರದ ಗಮನ ಸೆಳೆಯಿರಿ’ ಎಂದು ಒತ್ತಾಯಿಸುತ್ತೇವೆ. ಈಗಾಗಲೇ ಆನಂದ್ ಅವರೊಂದಿಗೆ ಚರ್ಚಿಸಿದ್ದು, ಅವರೂ ಸಹಕಾರದ ಭರವಸೆ ನೀಡಿದ್ದಾರೆ ಎಂದರು.

ವೈ.ಎಸ್.ವಿ. ದತ್ತ ನೇತೃತ್ವದಲ್ಲಿ ರೈತರು ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಮೂಡಿಗೆರೆಯ ಸಮಾವೇಶಕ್ಕೆ ತೆರಳಿದರು.

ಕಾಂಗ್ರೆಸ್ ಮುಖಂಡ ಯರದಕೆರೆ ಎಂ. ರಾಜಪ್ಪ, ಹಾಲು ಒಕ್ಕೂಟ ನಿರ್ದೇಶಕ ಬಿದರೆ ಜಗದೀಶ್, ಬಿ.ಟಿ. ಗಂಗಾಧರ ನಾಯ್ಕ್, ಡಿ. ಪ್ರಶಾಂತ್, ಪ್ರೇಮ್ಕುಮಾರ್, ಪಂಚನಹಳ್ಳಿ ಪಾಪಣ್ಣ, ಬಿ.ಆರ್. ಮೋಹನ್ಕುಮಾರ್, ಕೃಷ್ಣಾನಾಯ್ಕ, ಸುಜಾತಾ ಹಲಸಿನ ಮರದಹಟ್ಟಿ, ರಾಜಮ್ಮ, ಚಂದ್ರಮ್ಮ, ಕೃಷ್ಣಮೂರ್ತಿ, ಚನ್ನವೀರಪ್ಪ, ಆಲಘಟ್ಟ ಕುಮಾರನಾಯ್ಕ, ಸತೀಶ್ನಾಯ್ಕ, ಶ್ರೀನಿವಾಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-126-1227224040

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.