ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು: ದರ್ಗಾ ಸಮಿತಿಯಿಂದ ಪುರಸಭಾಧ್ಯಕ್ಷರಿಗೆ ಗೌರವ

Published : 31 ಆಗಸ್ಟ್ 2024, 13:23 IST
Last Updated : 31 ಆಗಸ್ಟ್ 2024, 13:23 IST
ಫಾಲೋ ಮಾಡಿ
Comments

ಕಡೂರು: ಪಟ್ಟಣದ ಹಜ್ರತ್ ಜರೀನಾ ಬೀಬೀ ದರ್ಗಾ ಸಮಿತಿ ವತಿಯಿಂದ ಪುರಸಭೆಯ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರನ್ನು ಶನಿವಾರ ಗೌರವಿಸಲಾಯಿತು‌.

ಸಮಿತಿ ಅಧ್ಯಕ್ಷ ಇಮ್ರಾನ್ ಖಾನ್ ಮಾತನಾಡಿ, ‘ಮುಸ್ಲಿಂ ಸಮುದಾಯದೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡಿರುವ ಭಂಡಾರಿ ಶ್ರೀನಿವಾಸ್ ಅವರು, ನಾಲ್ಕನೇ ಬಾರಿ ಪುರಸಭೆ ಅಧ್ಯಕ್ಷರಾಗಿರುವುದು ಅವರ ಸ್ವಚ್ಛ ರಾಜಕಾರಣಕ್ಕೆ ಸಿಕ್ಕ ಗೌರವವಾಗಿದೆ. ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಇವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಮುಂದೆಯೂ ಅವರಿಂದ ಸಮಾಜದ ಕಾರ್ಯಗಳಲ್ಲಿ ಸಹಕಾರ ಕೋರುತ್ತೇನೆ’ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ಭಂಡಾರಿ ಶ್ರೀನಿವಾಸ್, ‘30 ವರ್ಷದ ರಾಜಕೀಯ ಜೀವನದಲ್ಲಿ ಸರ್ವ ಸಮುದಾಯಗಳನ್ನೂ ಸಮಾನವಾಗಿ ಕಂಡಿದ್ದೇನೆ. ಮುಸ್ಲಿಂ ಸಮುದಾಯದ ಯಾವುದೇ ಕಾರ್ಯಗಳಾಗಲಿ ಅದಕ್ಕೆ ನನ್ನ ಇತಿಮಿತಿಯಲ್ಲಿ ಸಹಕಾರ ನೀಡಿದ್ದೇನೆ. ಮುಂದೆಯೂ ನಿರಂತರ ಸಹಕಾರ ನೀಡುತ್ತೇನೆ’ ಎಂದರು.

ದರ್ಗಾ ಸಮಿತಿ ನಿಯೋಜಿತ ಅಧ್ಯಕ್ಷ ನವಾಜ್ ಖಾನ್, ಕಾರ್ಯದರ್ಶಿ ಅನ್ಸರ್ ಖಾನ್, ಉಪಾಧ್ಯಕ್ಷ ಸಯ್ಯದ್ ಯಾಸೀನ್, ಅಫ್ರೋಜ್, ಫೈರೋಜ್ ಖಾನ್, ಸಮಿತಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT