ಕಡೂರು: ‘ಖಾಸಗಿ ಜನವಸತಿ ಪ್ರದೇಶಗಳನ್ನು ಗ್ರಾಮಠಾಣಾ ವ್ಯಾಪ್ತಿಗೆ ಸೇರಿಸಲು, ಅಗತ್ಯವಾದ ಜಂಟಿ ಸರ್ವೆ ನಡೆಸಲು ಉಡುಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಆಡಳಿತಾಧಿಕಾರಿ ಕ್ರಮ ವಹಿಸಬೇಕು’ ಎಂದು ಶಾಸಕ ಕೆ.ಎಸ್. ಆನಂದ್ ಸೂಚಿಸಿದರು.

ತಾಲ್ಲೂಕಿನ ಉಡುಗೆರೆ ಗ್ರಾಮದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮದಲ್ಲಿನ ಸರ್ವೆ 187, 188, 190ರಂತಹ ಪ್ರಮುಖ ಸರ್ವೆ ನಂ. ಪ್ರದೇಶದಲ್ಲಿ 160ಕ್ಕೂ ಹೆಚ್ಚು ಮನೆಗಳಿವೆ. ಅಲ್ಲಿ ವಾಸಿಸುತ್ತಿರುವ ಆಸ್ತಿಗಳ ಮಾಲೀಕರಿಗೆ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಬೇಕಿತ್ತು. ಆದರೆ, ಅವುಗಳ ಜಂಟಿ ಸರ್ವೆ ನಡೆಸಿ ಪಟ್ಟಿಗೆ ಸೇರಿಸಲು ಕ್ರಮ ವಹಿಸದಿರುವ ಔಚಿತ್ಯವೇನು? ಎಂದು ಪ್ರಶ್ನಿಸಿದದರು.

ಅಧಿಕಾರಿಗಳು ಸ್ವತ್ತಿನ ಮಾಲೀಕತ್ವ ನಿರ್ಧರಿಸುವ ಕ್ರಮಗಳನ್ನು ಕೈಗೊಂಡು, ಇ-ಸ್ವತ್ತು ವಿತರಣೆ ಸಾಧ್ಯವಾಗಬಹುದಾದ ಪ್ರದೇಶಗಳನ್ನು ಕೈ ಬಿಟ್ಟಿರುವುದು ಸಾಧುವಲ್ಲ. ಸರ್ಕಾರವೇ ಜನರಿಗೆ ಇ-ಸ್ವತ್ತು ವಿತರಣೆಗೆ ಅವಕಾಶವಾಗುವ ಕ್ರಮಗಳನ್ನು ಜಾರಿ ಮಾಡಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಪಿಡಿಒ ಮತ್ತು ವಿಎಒ ವಿರುದ್ಧ ಅಸಮಾಧಾನ |ವ್ಯಕ್ತಪಡಿಸಿದ ಶಾಸಕರು, ಅಧಿಕಾರಿಗಳು ಮುತುವರ್ಜಿ ವಹಿಸಿ ಗ್ರಾಮಠಾಣಾ ಪ್ರದೇಶಕ್ಕೆ ಒಳಪಡಿಸುವ ಮನೆಗಳ ಪ್ರಸ್ತಾವನೆಯನ್ನು ಒಂದೆರಡು ದಿನದಲ್ಲಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಕೈ ಬಿಟ್ಟಿರುವ ಖಾಸಗಿ ಪ್ರದೇಶಗಳ ಸರ್ವೆ ನಂಬರ್ಗಳಲ್ಲಿ ಕ್ರಮ ವಹಿಸಿ ಪಟ್ಟಿ ತಯಾರಿಸಿ ಎಂದು ನಿರ್ದೇಶಿಸಿದರು.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗಿದೆ. ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಗಮನಕೊಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗುಡ್ಡೇಹಳ್ಳಿ ಗ್ರಾಮದ ಮಹಿಳೆಯರು ಸಭೆಯಲ್ಲಿ ದೂರಿದರು.

ಗುಡ್ಡೇಹಳ್ಳಿ ಗ್ರಾಮದಲ್ಲಿರುವ ನೀರಿನ ಘಟಕ ನಿರ್ವಹಣೆ ಮಾಡುವ ಏಜೆನ್ಸಿಯವರ ಅವಧಿ ಮುಕ್ತಾಯ ಗೊಂಡಿದೆ. ಅದನ್ನು ಇಲಾಖೆಗೆ ಹಸ್ತಾಂತರಿಸುವಂತೆ ಹಾಗೂ ನಿರ್ವಹಣೆಯಲ್ಲಿ ಲೋಪವಾಗಿರುವ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಒಂದೆರಡು ದಿವಸದಲ್ಲಿ ಟಾಸ್ಕ್ಫೋರ್ಸ್ ಮೂಲಕ ಪೈಪ್ಲೈನ್ ಕಾಮಗಾರಿ ನಿರ್ವಹಿಸಿ, ಸಮಸ್ಯೆ ಬಗೆಹರಿಸಿ ಕೊಡಲಾಗುತ್ತದೆ ಎಂದು ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಕೆ.ಪ್ರಕಾಶ್ ಭರವಸೆ ನೀಡಿದರು.

ಉಡುಗೆರೆ ಗ್ರಾಮದ ಪ್ರದೀಪ್ ಗ್ರಾಮದಲ್ಲಿ ವೋಲ್ಟೇಜ್ ಸಮಸ್ಯೆ ಕಾಡುತ್ತಿದೆ. ವಿದ್ಯುತ್ ಕಂಬಗಳು ಶಿಥಿಲಗೊಂಡಿವೆ, ಹೊಸದಾಗಿ ಕಂಬಗಳ ಅಳವಡಿಕೆಸಬೇಕು ಎಂದರು.

ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾ.ಪಂ ಇಒ ಸಿ.ಆರ್. ಪ್ರವೀಣ್, ಗ್ರಾ.ಪಂ. ಆಡಳಿತಾಧಿಕಾರಿ ಎಂ.ಎನ್. ಜಗದೀಶ್, ಕಂದಾಯ ನಿರೀಕ್ಷಕ ತಿಪ್ಪೇಶ್, ಪಿಡಿಒ ಚಂದ್ರಶೇಖರ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ದೇವರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-126-1137305245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.