ಕಡೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿರುವ ರಾಗಿ ಖರೀದಿ ಪ್ರಕ್ರಿಯೆ ಶುಕ್ರವಾರ ಮುಕ್ತಾಯಗೊಳ್ಳಲಿದೆ ಎಂದು ಖರೀದಿ ಕೇಂದ್ರದ ಅಧಿಕಾರಿ ಮತ್ತು ಕೆಎಫ್ಸಿಎಸ್ಸಿ ಗೋದಾಮು ವ್ಯವಸ್ಥಾಪಕ ಡಿ. ವೆಂಕಟೇಶ್ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಕಡೂರು ಎಪಿಎಂಸಿಯಲ್ಲಿ 2, ಬೀರೂರು ಎಪಿಎಂಸಿಯಲ್ಲಿ 1 ಮತ್ತು ಪಂಚನಹಳ್ಳಿ ಎಪಿಎಂಸಿಯಲ್ಲಿ 1 ಖರೀದಿ ಕೇಂದ್ರವನ್ನು ಕಳೆದ ಫೆಬ್ರುವರಿ ತಿಂಗಳಿನಲ್ಲಿ ಆರಂಭಿಸಲಾಗಿತ್ತು. 13,476 ರೈತರು ನೋಂದಾಯಿಸಿಕೊಂಡು 3.52 ಲಕ್ಷ ಕ್ವಿಂಟಲ್ ರಾಗಿ ಖರೀದಿ ಗುರಿ ಹೊಂದಲಾಗಿತ್ತು. ಮೇ 12ರವರೆಗೆ 12,296 ರೈತರು 3.10 ಲಕ್ಷ ಕ್ವಿಂಟಲ್ ರಾಗಿಯನ್ನು ಬಿಟ್ಟಿದ್ದು, ಮಾರ್ಚ್ 7ರವರೆಗೆ ಖರೀದಿ ಮಾಡಲಾದ ರಾಗಿ ಬೆಳೆಗೆ ಹಣ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಕಡೂರಿನ ಕೇಂದ್ರ 1ರಲ್ಲಿ ನೋಂದಾಯಿಸಿಕೊಂಡ 4,652 ರೈತರ ಪೈಕಿ 3,957 ರೈತರು 103,128 ಕ್ವಿಂಟಲ್, ಕೇಂದ್ರ 2ರಲ್ಲಿ ನೋಂದಾಯಿಸಿಕೊಂಡ 3,365 ರೈತರಲ್ಲಿ 3,193 ರೈತರು 78,884 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಿದ್ದಾರೆ. ಬೀರೂರಿನ ಕೇಂದ್ರದಲ್ಲಿ 1,123 ರೈತರು ನೋಂದಾಯಿಸಿಕೊಂಡು ಅವರಲ್ಲಿ 1,067 ರೈತರು 26,595 ಕ್ವಿಂಟಲ್ ಹಾಗೂ ಪಂಚನಹಳ್ಳಿಯಲ್ಲಿ 4,336 ನೋಂದಾಯಿಸಿದ ರೈತರಲ್ಲಿ 4,079 ರೈತರು 1,01,834 ಕ್ವಿಂಟಲ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದ್ದು ಮಂಗಳವಾರದವರೆಗೆ ಶೇ 88ರಷ್ಟು ಗುರಿ ಸಾಧಿಸಲಾಗಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-126-1244098685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.