ಕಡೂರು: ಶೈಕ್ಷಣಿಕ ವರ್ಷದ ಮೊದಲ ದಿನವಾದ ಸೋಮವಾರ ಸಂಭ್ರಮದಿಂದ ಶಾಲೆಗೆ ಬಂದ ಮಕ್ಕಳಿಗೆ ಅದ್ಧೂರಿಯ ಸ್ವಾಗತ ನೀಡಿ ಶಿಕ್ಷಕರು, ಅಧಿಕಾರಿಗಳು, ಎಸ್ಡಿಎಂಸಿ ಸದಸ್ಯರು ಬರಮಾಡಿಕೊಂಡರು.

ಕಡೂರು- ಬೀರೂರು ಶೈಕ್ಷಣಿಕ ವಲಯ ವ್ಯಾಪ್ತಿಯ ಶಾಲೆಗಳಲ್ಲಿ ಆವರಣವನ್ನು ವರ್ಣ ರಂಜಿತ ರಂಗೋಲಿಗಳ ಚಿತ್ತಾರದೊಂದಿಗೆ, ಶಾಲೆಯ ಕೊಠಡಿ ಮತ್ತು ಪ್ರವೇಶದ್ವಾರಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಯ ಆವರಣದಲ್ಲಿ ಮಕ್ಕಳಿಗೆ ಪುಷ್ಪವೃಷ್ಟಿ ಮೂಲಕ ಸ್ವಾಗತಿಸಿದರು.

ಕಡೂರು ಶೈಕ್ಷಣಿಕ ವಲಯದ ಶಾಲೆಗಳಲ್ಲಿ ಮೊದಲ ದಿನ ಶೇ 75ರಷ್ಟು ಹಾಜರಾತಿ ಇತ್ತು. ಮಧ್ಯಾಹ್ನದ ಬಿಸಿಯೂಟಕ್ಕೆ ಬಹುತೇಕ ಶಾಲೆಗಳಲ್ಲಿ ಪಾಯಸ, ಚಿತ್ರಾನ್ನ ಹಾಗೂ ಅನ್ನ- ಸಾಂಬಾರ್ ಉಣಬಡಿಸಲಾಯಿತು. ಮಕ್ಕಳ ಜೊತೆಯಲ್ಲಿ ಶಿಕ್ಷಕರೂ ಊಟ ಸವಿದರು. ತರಗತಿಗಳಿಗೆ ಹಾಜರಾದ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು.

ಬೀರೂರು ಪಟ್ಟಣದ ಪಿಎಂಶ್ರೀ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬುರ್ಹನುದ್ದೀನ್ ಚೋಪ್ದಾರ್, ಡಯಟ್ ಉಪನ್ಯಾಸಕರು, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಸ್ವಾಗತಿಸಿದರು.

ಶಾಲೆಗಳಲ್ಲಿ ಆಗಿರುವ ಸಿದ್ಧತೆ ಪರಿಶೀಲಿಸಲು ಡಯಟ್ ಉಪನ್ಯಾಸಕರಾದ ಬಾಗೀಬಾಯಿ, ಸಿದ್ದರಾಜು ನಾಯ್ಕ, ಮಂಜಾನಾಯ್ಕ, ಬಿಆರ್ಸಿ ಶೇಖರಪ್ಪ, ಇಸಿಒ ಉಮೇಶ್, ಸಂಪನ್ಮೂಲ ಅಧಿಕಾರಿಗಳು ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು ಪ್ರತಿ ಅಧಿಕಾರಿಗೆ 8 ಶಾಲೆಗಳ ಉಸ್ತುವಾರಿ ವಹಿಸಿ 4 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಡೂರು ಶೈಕ್ಷಣಿಕ ವಲಯದ ಕಲ್ಲೇಲಿಂಗನಹಳ್ಳಿ ಶಾಲೆಯಲ್ಲಿ ಎಲ್ಕೆಜಿಯಿಂದ 5ನೇ ತರಗತಿವರೆಗಿನ 50 ಮಕ್ಕಳು ಹಾಜರಾಗಿದ್ದು, ಆರು ಟ್ರ್ಯಾಕ್ಟರ್ಗಳಲ್ಲಿ ಮಕ್ಕಳು ಮತ್ತು ಪೋಷಕರನ್ನು ಕೂರಿಸಿ ಮೆರವಣಿಗೆ ನಡೆಸಿ ಸಿಂಗಟಗೆರೆಯ ಪ್ರಸನ್ನ ಕಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಬಳಿಕ ಶಾಲೆಯವರೆಗೆ ಮೆರವಣಿಗೆ ನಡೆಸಿ, ಅಕ್ಷರಾಭ್ಯಾಸ ಮಾಡಿಸಲಾಯಿತು.

ಎಸ್ಡಿಎಂಸಿ ಅಧ್ಯಕ್ಷ ರವಿಕುಮಾರ್, ಮುಖ್ಯಶಿಕ್ಷಕಿ ಮಂಜುಳಾ, ಸಹಶಿಕ್ಷಕ ಪ್ರಾಣೇಶ್ ಮಾತನಾಡಿದರು.

ಕಡೂರು ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಬಲೂನ್ ಹಾಗೂ ತೋರಣದಿಂದ ಸಿಂಗರಿಸಲಾಗಿತ್ತು. ಪಿಎಂಶ್ರೀ ಶಾಲೆಯಲ್ಲೂ ಶಾಲಾರಂಭವನ್ನು ಹಬ್ಬದ ರೀತಿ ಆಚರಿಸಿ ಮಕ್ಕಳನ್ನು ಸ್ವಾಗತಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ತಿಮ್ಮಯ್ಯ, ಅಧಿಕಾರಿಗಳು ಪೋಷಕರು, ಶಿಕ್ಷಕರು, ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-126-1467469042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.