ಕಡೂರು: ಪಟ್ಟಣದ ಕೋಟೆ ಬಡಾವಣೆಯ ಶ್ರೀಶಂಕರ ಮಠದಲ್ಲಿ ಭಾನುವಾರ ಶ್ರೀರಾಮನವಮಿಯ ಪ್ರಯುಕ್ತ ಶ್ರೀರಾಮ ಪಟ್ಟಾಭಿಷೇಕ ನಡೆಯಿತು.

ಮಹೋತ್ಸವದ ಪ್ರಯುಕ್ತ ಶನಿವಾರ ಸೀತಾ, ಲಕ್ಷ್ಮಣ, ಹನುಮಂತ ಸಮೇತ ರಾಮಚಂದ್ರ ಸ್ವಾಮಿಯವರ ಉತ್ಸವ ಮೂರ್ತಿಗೆ ಪಂಚಾಮೃತ, ಪಂಚಸೂಕ್ತ ಪೂರ್ವಕ ನದಿ ಜಲಾಭಿಷೇಕ, ಸೀತಾರಾಮ ಕಲ್ಯಾಣೋತ್ಸವ ನಡೆಸಲಾಗಿತ್ತು.

ಭಾನುವಾರ ಪುಣ್ಯ ಜಲಾಭಿಷೇಕ, ಶ್ರೀರಾಮ ತಾರಕ ಹೋಮ, ರಾಮಾಯಣ ಪಾರಾಯಣ, ಹೋಮ ಪೂರ್ಣಾಹುತಿ, ಅಷ್ಟಾವಧಾನ ಸೇವೆ, ತಾಲ್ಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಯಗಟಿಯ ಪುರೋಹಿತ ನಾಗಭೂಷಣ ಶಾಸ್ತ್ರಿ ದಂಪತಿ ಮತ್ತು ಸಮಾಜದ ಹಿರಿಯ ಎನ್.ಡಿ.ಕೃಷ್ಣ ಅವರಿಗೆ ಗೌರವ ಸಮರ್ಪಣೆ ನಡೆಸಲಾಯಿತು. ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಅನ್ನಸಂತರ್ಪಣೆ, ಸಂಜೆ ಕೋಟೆ ಬಡಾವಣೆಯ ಬೀದಿಗಳಲ್ಲಿ ಮಂಗಳವಾದ್ಯಗಳೊಡನೆ ಪಟ್ಟಾಭಿರಾಮರ ಉತ್ಸವ, ಮಹಾಮಂಗಳಾರತಿ, ರಾಷ್ಟ್ರಾಶೀರ್ವಾದ, ವನಭೋಜನ ಜರುಗಿತು.

ಬುಧವಾರದಿಂದ (ಮಾರ್ಚ್ 25) ಆರಂಭಗೊಂಡ ಕಾರ್ಯಕ್ರಮಗಳಲ್ಲಿ ಪ್ರತಿದಿನ ಸೂರ್ಯ ನಮಸ್ಕಾರ, ನವಗ್ರಹ ಜಪ, ರಾಮಾಯಣ ಪಾರಾಯಣ, ಮಂಗಳಾರತಿ, ವಸಂತ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ತಾಲ್ಲೂಕಿನ ವಿವಿಧ ತಂಡಗಳಿಂದ ಭಜನೆ ನಡೆಸಲಾಯಿತು.

ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್, ಉಪಾಧ್ಯಕ್ಷರಾದ ಗಿರೀಶ್, ಭಾಗ್ಯ ವಿಶ್ವನಾಥ್, ಎಚ್.ಎನ್. ಶಿವಶಂಕರ್, ದ್ವಾರಕಾನಾಥ್, ಪ್ರಧಾನ ಕಾರ್ಯದರ್ಶಿ ಫಣಿರಾಜ್, ಅಭಿಲಾಷ್ (ಕೋಟೆ ಭರತ್), ರಾಘವೇಂದ್ರ, ಶಿವಣ್ಣ, ರೋಹಿಣಿ ಹರಿಪ್ರಸಾದ, ದಾಶರಥಿ, ಚಂದ್ರಮೌಳಿ, ರಾಜೇಶ್ವರಿ, ರಾಮಚಂದ್ರಭಟ್, ಮಾಧವಿ, ಅಕ್ಷತಾ, ಇಂದಿರಾ ಮತ್ತು ಬ್ರಾಹ್ಮಣ ಸಮಾಜದ ಬಂಧುಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಎನ್.ಡಿ. ಕೃಷ್ಣ ತಮ್ಮ ನಿವಾಸವನ್ನು ತಾಲ್ಲೂಕು ಬ್ರಾಹ್ಮಣ ಸಮಾಜಕ್ಕೆ ದಾನ ನೀಡುವುದಾಗಿ ಘೋಷಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-126-1028022333

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.