ಕಡೂರು: ‘ಕ್ಷೇತ್ರದ ಪರಿಶಿಷ್ಟ ಜನಾಂಗದವರು ವಾಸಿಸುವ ತಾಂಡಾಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಯ ಸ್ಪರ್ಶ ನೀಡಲಾಗುತ್ತಿದೆ’ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಪಂಚನಹಳ್ಳಿ ಸಮೀಪದ ನಿಡುವಳ್ಳಿ ತಾಂಡಾದಲ್ಲಿ ₹2 ಕೋಟಿ ಮತ್ತು ಎಸ್. ಮಾದಾಪುರ ಸಮೀಪದ ದೇವರಹಳ್ಳಿ ತಾಂಡಾದಲ್ಲಿ ₹50ಲಕ್ಷ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಮೂಲಕ ಪರಿಶಿಷ್ಟ ಕಾಲೊನಿ ಮತ್ತು ತಾಂಡಾಗಳ ಅಭಿವೃದ್ಧಿಗೆ ‘ಪ್ರಗತಿ ಕಾಲೊನಿ ಯೋಜನೆ’ಯಲ್ಲಿ ಹಣ ಬಿಡುಗಡೆ ಮಾಡಿಸಿದ್ದೇನೆ. ಕೆಆರ್ಐಡಿಎಲ್ ಮೂಲಕ ಕಾಮಗಾರಿ ನಡೆಯಲಿದೆ. ಕ್ಷೇತ್ರದ ಪ್ರತಿಯೊಂದು ಕುಗ್ರಾಮಕ್ಕೂ ಏನಾದರೂ ಒಂದು ಅಭಿವೃದ್ಧಿ ಕಾಮಗಾರಿ ಮಾಡುವ ಹಂಬಲವಿದ್ದು, ಪರಿಶಿಷ್ಟ ವರ್ಗಗಳ ಜೀವನಮಟ್ಟ ಸುಧಾರಣೆಯಾಗಬೇಕು ಎನ್ನುವ ಆಶಯವಿದೆ. ನಿಡುವಳ್ಳಿ ತಾಂಡಾದಲ್ಲಿ ನಿರ್ಮಾಣವಾಗಲಿರುವ ರಸ್ತೆಯು ಕಡೂರು ಕ್ಷೇತ್ರ ಮಾತ್ರವಲ್ಲದೆ ಪಕ್ಕದ ಹೊಸದುರ್ಗದ ತಂಡಗ ಭಾಗಕ್ಕೂ ಸಂಪರ್ಕ ಸೇತುವಾಗಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ ಹೆಮ್ಮೆ ಮೂಡಿದೆ’ ಎಂದರು.

ಕ್ಷೇತ್ರದಲ್ಲಿ 130 ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಮತ್ತು 109 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆಯಾಗಿದೆ. 17 ತಾಂಡಾಗಳು ಕಂದಾಯ ಗ್ರಾಮಗಳಾಗಲಿವೆ. ಹಟ್ಟಿ, ಗೊಲ್ಲರಹಟ್ಟಿ, ಬೋವಿ ಕಾಲೊನಿ, ತಾಂಡಾಗಳು ಅಧಿಕೃತ ಕಂದಾಯ ಗ್ರಾಮಗಳಾಗಿ ಘೋಷಣೆಯಾಗುವ ಮೂಲಕ ಇಲ್ಲಿ ವಾಸಿಸುವ ಜನರ ಬದುಕಿಗೆ ಹೊಸ ಆಯಾಮ ಮತ್ತು ಅವರ ಮನೆಗಳಿಗೆ ಹಕ್ಕುಪತ್ರ ಲಭಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಇಂದಿರಾ ಕ್ಯಾಂಟೀನ್ ಗುಣಮಟ್ಟ ಉಸ್ತುವಾರಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಪಂಚನಹಳ್ಳಿ ಪ್ರಸನ್ನ ಮಾತನಾಡಿ, ‘ಶಾಸಕರು ಗಡಿಭಾಗದ ಪಂಚನಹಳ್ಳಿ ವಲಯಕ್ಕೆ ವಿಶೇಷ ಒತ್ತು ನೀಡಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ತಿಮ್ಲಾಪುರದ ಬಳಿ ಪಂಚನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಕಟ್ಟಡ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಿಂಗಟಗೆರೆ-ಪಂಚನಹಳ್ಳಿ ರಸ್ತೆ ನಿರ್ಮಾಣ, ತಾಂಡಾಗಳ ಅಭಿವೃದ್ಧಿ, ನಮ್ಮದೇ ವಲಯದ ಕೆ. ಬಸವನಹಳ್ಳಿಯಲ್ಲಿ ಎಂಯುಎಸ್ಎಸ್ ಸ್ಥಾಪನೆಗೆ ಕ್ರಮ ಹೀಗೆ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ಹಣ ತಂದಿದ್ದಾರೆ. ಅವರ ನಿರಂತರ ಶ್ರಮದಿಂದ ಮುಂದಿನ ದಿನಗಳಲ್ಲಿ ನಮ್ಮ ಭಾಗದ ಕೆರೆಗಳಿಗೂ ಭದ್ರಾ ನೀರು ತಲುಪಲಿದೆ ಎನ್ನುವ’ ಆಶಯ ವ್ಯಕ್ತಪಡಿಸಿದರು.

ದೇವರಾಜ್, ಎಂ. ಕೋಡಿಹಳ್ಳಿ ಶ್ರೀನಿವಾಸ್ ನಾಯ್ಕ್, ಸಿದ್ದರಾಮಣ್ಣ, ಶೇಖರಪ್ಪ, ಉಪ್ಪಿನಹಳ್ಳಿ ತಮ್ಮಯ್ಯ, ಕೆಆರ್ಐಡಿಎಲ್ ಎಇಇ ವಿ.ಎನ್. ಆಶ್ವಿನಿ, ಎಂಜಿನಿಯರ್ ಗಿರೀಶ್, ದೇವರಹಳ್ಳಿ ಲೋಹಿತ್, ರಾಜಣ್ಣ, ಪೂಜಾರ್ ರಾಮಣ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-126-400887371

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.