ಕಡೂರು: ‘ಗ್ರಾಮೀಣ ಪ್ರದೇಶಗಳ ರೈತರು ಕೃಷಿಗಾಗಿ ಕೊಳವೆಬಾವಿಯನ್ನೇ ಅವಲಂಬಿಸಿದ್ದು, ಅವರನ್ನು ಕಾಡುತ್ತಿರುವ ವೋಲ್ಟೇಜ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಂಯುಎಸ್ಎಸ್ ಘಟಕಗಳ ಸ್ಥಾಪನೆ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ತಾಲ್ಲೂಕಿನ ಯಗಟಿ ಹೋಬಳಿಯ ಕೆ. ಬಸವನಹಳ್ಳಿಯಲ್ಲಿ ಸೋಮವಾರ 110/11ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕುಂಕಾನಾಡು ಭಾಗದ ಜನರ ಬಹುದಿನಗಳ ಕನಸು ಇಂದು ನನಸಾಗುತ್ತಿದೆ. ಇಂಧನ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೆ.ಜೆ. ಜಾರ್ಜ್ ಅವರ ಸಹಕಾರದಿಂದ 4ನೇ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಅನುಮೋದನೆ ದೊರೆತಿದೆ. ‘ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗುತ್ತದೆ’ ಎಂದು ವಿರೋಧ ಪಕ್ಷದವರು ಮಾಡುವ ಆಪಾದನೆಗಳಿಗೆ ಇಂತಹ ಕಾರ್ಯಕ್ರಮಗಳೇ ಉತ್ತರ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕೊರತೆ ಆಗಿಲ್ಲ ಎನ್ನುವುದಕ್ಕೆ ವಸತಿ ಶಾಲೆಗಳ ಸ್ಥಾಪನೆ, ವಿದ್ಯುತ್ ಉಪಕೇಂದ್ರಗಳಿಗೆ ಮಂಜೂರಾತಿ, ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳೂ ಸೇರಿ ವಿವಿಧ ರಸ್ತೆಗಳ ನಿರ್ಮಾಣ ಮುಂತಾದ ಹಲವು ಜನಪರ ಕಾರ್ಯಗಳು ನಿರಂತರ ನಡೆಯುತ್ತಿವೆ ಎಂದು ಹೇಳಿದರು.

ಕ್ಷೇತ್ರದ ಚೌಳಹಿರಿಯೂರು, ಯಳಗೊಂಡನಹಳ್ಳಿ ಎಂಯುಎಸ್ಎಸ್ಗಳಿಗೆ ಭೂಮಿಪೂಜೆ ಮುಂದಿನ ವಾರ ನಡೆಯಲಿದೆ. ಜಿಗಣೇಹಳ್ಳಿ ಎಂಯುಎಸ್ಎಸ್ಗೆ ಯೋಜನಾ ವರದಿ ಸಿದ್ಧವಾಗುತ್ತಿದೆ. 14 ತಿಂಗಳ ಒಳಗೆ ಘಟಕ ಕಾರ್ಯಾರಂಭ ಮಾಡಲಿದೆ. ಇಡೀ ಕ್ಷೇತ್ರದ ವಿದ್ಯುತ್ ಸಮಸ್ಯೆ ಬಗೆಹರಿಸಲು ಶಾಶ್ವತ ಯೋಜನೆ ರೂಪಿಸುವ ಸಲುವಾಗಿ ಪ್ರಯತ್ನ ನಡೆಯುತ್ತಿದೆ. ನಮ್ಮಲ್ಲಿನ ರಿಸೀವಿಂಗ್ ಸ್ಟೇಷನ್ ಸದ್ಯ 220/110 ಕೆ.ವಿ ಸಾಮರ್ಥ್ಯ ಹೊಂದಿದೆ. ಅದನ್ನು 400 ಕೆ.ವಿ.ಗೆ ಹೆಚ್ಚಿಸಲು ಸದನದಲ್ಲಿ ಪ್ರಸ್ತಾಪ ಮಾಡಿದ್ದು, ₹260 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಜಾರಿಯಾದರೆ ಕಡೂರು ಕ್ಷೇತ್ರ ಇನ್ನು 30 ವರ್ಷ ವಿದ್ಯುತ್ ಸಂಬಂಧಿ ಸಮಸ್ಯೆ ಎದುರಿಸುವುದಿಲ್ಲ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಗಣ್ಯರಾದ ಓಂಕಾರಮೂರ್ತಿ ಹಾಗೂ ಜಗದೀಶ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಎಂ.ಎಚ್. ತಿಮ್ಮಯ್ಯ, ಮುಖಂಡರಾದ ದಿನೇಶ್ ತಿಮ್ಲಾಪುರ, ಗೋವಿಂದಪ್ಪ, ಆಲದಹಳ್ಳಿ ಆನಂದ್, ವಡೇರಹಳ್ಳಿ ಗಿರೀಶ್, ಶಿವಕುಮಾರ್, ಕುಮಾರಪ್ಪ, ಗೋವಿಂದಪ್ಪ, ಮೆಸ್ಕಾಂ ಚಿಕ್ಕಮಗಳೂರು ಅಧೀಕ್ಷಕ ಎಂಜಿನಿಯರ್ ಮಂಜುನಾಥ್, ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್. ಅಶ್ವಿನಿ, ಇಇ ರವಿಕಿರಣ್, ಎಂಜಿನಿಯರ್ಗಳಾದ ಕುಮಾರಸ್ವಾಮಿ, ತಿರುಪತಿ ನಾಯ್ಕ್, ಅಧಿಕಾರಿಗಳು, ಗ್ರಾಮಸ್ಥರುಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-126-207743876

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.