ಕಳಸ: ಫಾರಂ ನಂಬರ್ 53ರಲ್ಲಿ ಭೂಮಿಯ ಹಕ್ಕು ರದ್ದಾಗಿರುವ ಬಗ್ಗೆ ಕಾನೂನು ಹೋರಾಟ ರೂಪಿಸಲು ಪಟ್ಟಣದಲ್ಲಿ ಕಳಸ ರೈತ ಹಿತರಕ್ಷಣಾ ವೇದಿಕೆಯಿಂದ ಭಾನುವಾರ ನಡೆದ ರೈತರ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು.

ಎರಡು ದಶಕಗಳಿಂದ ಫಾರಂ ನಂಬರ್ 53ರಲ್ಲಿ ನೂರಾರು ರೈತರಿಗೆ ಭೂಮಿಯ ಹಕ್ಕು ನೀಡಲಾಗಿತ್ತು. ಇದನ್ನು ಕಾನೂನು ಬದ್ಧವಾಗಿ ಆಯಾ ಕಾಲದ ಶಾಸಕರ ನೇತೃತ್ವದ ಸಮಿತಿ ಶಿಫಾರಸಿನ ಮೇಲೆಯೇ ಮಾಡಲಾಗಿದೆ. ಹೀಗೆ ಕಾನೂನು ಬದ್ಧವಾಗಿಯೇ ಮಂಜೂ ರಾದ ಭೂಮಿಯ ಹಕ್ಕನ್ನು ಏಕಾಏಕಿ ರದ್ದುಪಡಿಸಿರುವುದು ಸರಿಯಲ್ಲ ಎಂದು ಮುಖಂಡರು ಸಭೆಯಲ್ಲಿ ಹೇಳಿದರು.

ದಶಕದಿಂದ ಈ ಭೂಮಿಯಲ್ಲಿ ಕಾಫಿ, ಅಡಿಕೆ, ಮೆಣಸು ಬೆಳೆಸಿದ್ದ ರೈತರಿಗೆ ಫಸಲು ಕೈಗೆ ಬರುವ ಸಂದರ್ಭದಲ್ಲಿ ಭೂಮಿ ಬಿಡಲು ಆದೆಶ ಮಾಡಲಾಗುತ್ತಿದೆ. ಈ ಬಗ್ಗೆ ಪಕ್ಷಾತೀತ ಹೋರಾಟ ಅನಿವಾರ್ಯ ಎಂದೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಜ್ಯದಲ್ಲಿ ಇಂತಹ ಸಾವಿರಾರು ಹಕ್ಕುಪತ್ರಗಳನ್ನು ನೀಡಲಾಗಿದೆ. ಕಡೂರು, ಮೂಡಿಗೆರೆ, ಕಳಸ ತಾಲ್ಲೂಕಿನಲ್ಲಿ ಮಾತ್ರ ಹಕ್ಕುಪತ್ರ ರದ್ದು ಮಾಡಲಾಗಿದೆ. ಈ ಬಗ್ಗೆ ಹೈಕೋರ್ಟ್ನಲ್ಲಿ ದಾವೆ ಹೂಡಲು ಅವಕಾಶ ಇದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾನೂನು ತಜ್ಞ, ಹಿರಿಯ ಬೆಳೆಗಾರ ಲಕ್ಷ್ಮಣ ಕುಮಾರ್ ಹೇಳಿದರು.

ಮುಖಂಡ ಮಂಜಪ್ಪಯ್ಯ ಮಾತನಾಡಿ, ಕಳಸ ತಾಲ್ಲೂಕಿನ ರೈತರಿಗೆ ಮಂಜೂರಾದ ಹಕ್ಕುಪತ್ರಗಳನ್ನು ರದ್ದು ಮಾಡಲಾಗಿದೆ. ಈ ಹಕ್ಕುಪತ್ರಗಳ ಆಧಾರದಲ್ಲಿ ಬ್ಯಾಂಕುಗಳು ಲಕ್ಷಗಟ್ಟಲೆ ಸಾಲ ಕೂಡ ಕೊಟ್ಟಿವೆ. ಆದ್ದರಿಂದ ಕಾನೂನು ಹೋರಾಟದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.

ಕಾಂಗ್ರೆಸ್ ಮುಖಂಡ ಕೆ.ಆರ್. ಪ್ರಭಾಕರ್ ಮಾತನಾಡಿ, ರೈತರ ಉಳಿವಿಗೆ ತುರ್ತು ಕ್ರಮ ಆಗಲೇಬೇಕು ಎಂದರು. ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಭೂಮಿ ಹಕ್ಕು ಕಳೆದುಕೊಂಡ ಕೆಲವು ರೈತರಿಗೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಸಿಕ್ಕಿದೆ ಎಂಬುದು ಸಮಾಧಾನದ ಸಂಗತಿ. ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಕೂಡ ಕೆಲವು ರೈತರಿಗೆ ತಡೆಯಾಜ್ಞೆ ಸಿಕ್ಕಿದೆ ಎಂದರು.

ವಕೀಲ ಅನಂತೇಶ್ ಮಾತನಾಡಿ, ಕೃಷಿಕರಿಂದ ಸಣ್ಣಪುಟ್ಟ ತಪ್ಪು ಆಗಿದೆ. ಆದರೆ ಎಲ್ಲ ಮಾಹಿತಿ ಇದ್ದ ಅಧಿಕಾರಿಗಳು ಯಾಕೆ ತಪ್ಪು ಮಾಡಿದರು ಎಂಬುದು ಯಕ್ಷಪ್ರಶ್ನೆ. ಭೂ ಕಂದಾಯ ಕಾಯ್ದೆಗೆ ಸರಿಯಾದ ತಿದ್ದುಪಡಿ ಮಾಡದೆ ಇರುವುದರಿಂದ ಬಹಳಷ್ಟು ಗೊಂದಲ ಆಗುತ್ತಿದೆ ಎಂದರು.

ಮುಖಂಡರಾದ ಕೆ.ಸಿ. ಧರಣೇಂದ್ರ, ವೆಂಕಟಸುಬ್ಬಯ್ಯ, ಕಲ್ಲಾನೆ ನರೇಂದ್ರ, ರಂಗನಾಥ್ ಭಾಗವಹಿಸಿದ್ದರು. ಹಕ್ಕುಪತ್ರ ರದ್ದಾದ ಎಲ್ಲ ರೈತರು ಕೂಡ ಕಾನೂನಿನ ಮೊರೆ ಹೋಗಲು ಅಗತ್ಯ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-126-521701194

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.