ಕಳಸ: ಎರಡು ತಿಂಗಳ ಹಿಂದಷ್ಟೇ ಪಟ್ಟಣದ ಅಡುಗೆ ಅನಿಲ ವಿತರಕರು ಮನೆಮನೆಗೂ ಸಿಲಿಂಡರ್ಗಳನ್ನು ಪೂರೈಸುತ್ತಿದ್ದರು. ಆದರೆ, ಈಗ ಬೆಳ್ಳಂಬೆಳಿಗ್ಗೆಯೇ ಹೊರಟು ಗಂಟೆಗಳ ಕಾಲ ಸರತಿಯಲ್ಲಿ ನಿಂತು ಸಿಲಿಂಡರ್ ಪಡೆವ ಅನಿವಾರ್ಯ ತಾಲ್ಲೂಕಿನ ಜನರಿಗೆ ಎದುರಾಗಿದೆ.

ತಾಲ್ಲೂಕಿನ ಜನರಿಗೆ ಅನಿಲ ಪೂರೈಸುವ ಎರಡು ಏಜೆನ್ಸಿಗಳು ಇವೆ. ಈ ಪೈಕಿ ಎಚ್ಪಿ ಸಂಸ್ಥೆಯು ಸೀಮಿತ ಬಳಕೆದಾರರನ್ನು ಹೊಂದಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ತಾಲ್ಲೂಕಿನಲ್ಲಿ ಇಂಡೇನ್ ಸಂಸ್ಥೆಯ ಸಿಲಿಂಡರ್ ಪೂರೈಸುತ್ತಿದ್ದು, 7000ಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

ನಿರೀಕ್ಷಿಸಿದಷ್ಟು ಸಿಲಿಂಡರ್ಗಳ ಪೂರೈಕೆ ಆಗದೆ ಕಳಸ ತಾಲ್ಲೂಕಿನ ಬಳಕೆದಾರರಲ್ಲಿ ಕಳವಳ ಉಂಟಾಗಿದೆ. ಪರಿಣಾಮ ಕೆಲವೆಡೆ ಸಾಂಪ್ರದಾಯಿಕ ಸೌದೆ ಒಲೆ ಹೊತ್ತಿಸುವ ಕೆಲಸ ಶುರು ಆಗಿದೆ.

ನಮಗೆ ತಿಂಗಳಿಗೆ 12 ಲೋಡ್ ಸಿಲಿಂಡರ್ ಬೇಕಾಗುತ್ತದೆ. ಕಳೆದ ತಿಂಗಳು 4 ಲೋಡ್ ಮಾತ್ರ ಬಂದಿವೆ. ಮೊದಲು ಕಾಯ್ದಿರಿಸಿದವರಿಗೆ ಆದ್ಯತೆ ಮೇರೆಗೆ ಕೊಡುತ್ತಿದ್ದೇವೆ. ವಾಣಿಜ್ಯ ಸಿಲಿಂಡರ್ ಬೇಡಿಕೆ ತೀವ್ರವಾಗಿದ್ದು, ಪೂರೈಕೆ ಕಡಿಮೆ ಆಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಳಸದ ಸಿಬ್ಬಂದಿ ತಿಪ್ಪೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಲಿಂಡರ್ ಪಡೆಯಲು ಮೊದಲಿಗೆ ಕೈಮರದ ಕಚೇರಿ ಬಳಿ ಸಾಲಲ್ಲಿ ನಿಲ್ಲಬೇಕು. ಆನಂತರ ಅಲ್ಲಿಂದ ಅನುಮೋದನೆ ಪಡೆದು ಅರಮನೆಮಕ್ಕಿಯ ಬಸ್ ನಿಲ್ದಾಣದಲ್ಲಿ ಇರುವ ಗೋದಾಮಿನಲ್ಲಿ ಸಿಲಿಂಡರ್ ಪಡೆಯಬೇಕು. ಲಾರಿ ಬಂದ ಬಗ್ಗೆ ಮಾಹಿತಿ ಇದ್ದವರಿಗೆ ಮಾತ್ರ ಸಕಾಲಕ್ಕೆ ಸಿಲಿಂಡರ್ ಸಿಗುತ್ತಿದೆ. ಉಳಿದವರಿಗೆ ಸಿಲಿಂಡರ್ ಸಿಗುತ್ತಿಲ್ಲ ಎಂದು ಬಳಕೆದಾರರು ದೂರುತ್ತಾರೆ.

‘ನಮ್ಮ ಊರಿನಲ್ಲಿ ಸಾಕಷ್ಟು ಸೌದೆ ಸಿಗುತ್ತದೆ. ಆದರೆ ಕೆಲ ವರ್ಷಗಳ ಹಿಂದೆ ಸರ್ಕಾರವೇ ಅಡುಗೆ ಅನಿಲದ ಸ್ಟೌ ಉಚಿತವಾಗಿ ಕೊಟ್ಟು ಅನಿಲ ಬಳಕೆ ಹೆಚ್ಚಿಸಿದರು. ಮೂಲೆಗುಂಪಾಗಿದ್ದ ಸೌದೆ ಒಲೆಯನ್ನು ಈಗ ಮತ್ತೆ ಹೊತ್ತಿಸಲು ಆಗದೆ ಜನರು ಪರದಾಡುತ್ತಿದ್ದಾರೆ’ ಎಂದು ಬಳಕೆದಾರ ವಿನ್ಸೆಂಟ್ ಅಭಿಪ್ರಾಯಪಟ್ಟರು.

ದೂರದ ಕುದುರೆಮುಖ, ಸುಂಕಸಾಲೆ, ದುರ್ಗದಹಳ್ಳಿ, ಹೆಮ್ಮಕ್ಕಿಯಿಂದ ಕಳಸಕ್ಕೆ ಬಂದು ಸಿಲಿಂಡರ್ ಸಿಗದೆ ಹಿಂದಿರುಗುವ ಬಳಕೆದಾರರ ಸಂಖ್ಯೆ ದೊಡ್ಡದಾಗಿದೆ. ಈ ಹಿನ್ನೆಲೆಯಲ್ಲಿ ಕಳಸ ತಾಲ್ಲೂಕಿನ ಬಳಕೆದಾರರಿಗೆ ಅಗತ್ಯ ಇರುವಷ್ಟು ಅಡುಗೆ ಅನಿಲ ಪೂರೈಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-126-1846322363

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.