ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ, ಹೊರನಾಡಿನಲ್ಲಿ ನವರಾತ್ರಿ ಸಡಗರ ಆರಂಭ

Last Updated 26 ಸೆಪ್ಟೆಂಬರ್ 2022, 16:12 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನಾದ್ಯಂತ ಸೋಮವಾರ ನವರಾತ್ರಿ ಸಡಗರ ಆರಂಭವಾಗಿದೆ.

ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಪಂಚದುರ್ಗಾ ಹೋಮ ನಡೆಯಿತು. ದೇವಿಗೆ ಹಂಸಾರೂಢಾ ಸರಸ್ವತಿ ಅಲಂಕಾರ ಮಾಡಲಾಗಿತ್ತು.

ಕಳಸದ ದುರ್ಗಾ ಮಂಟಪದಲ್ಲಿ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪನೆಗೂ ಮೊದಲು ಕಳಸೇಸ್ವರ ಸ್ವಾಮಿಗೆ ಶತರುದ್ರಾಭಿಷೇಕ, ಗಿರಿಜೆಗೆ ಸಾನ್ನಿಧ್ಯ ಕಲಾಶಾಭಿಷೇಕ ನೆರವೇರಿತು. ಗಣಹೋಮದ ನಂತರ ದುರ್ಗಾ ವಿಗ್ರಮ ಪ್ರತಿಷ್ಠಾಪನೆ, ಸಪ್ತಶತಿ ಪಾರಾಯಣ ನಡೆಯಿತು. ಭೀಮೇಶ್ವರ ಜೋಷಿ ದಂಪತಿ ಇದ್ದರು.

ಕೋವಿಡ್ ಕಾರಣಕ್ಕೆ 2 ವರ್ಷ ಮಂಕಾಗಿದ್ದ ದುರ್ಗಾ ಆರಾಧನೆ ಈ ಬಾರಿ ವೈಭವದಿಂದ ನಡೆಯುತ್ತಿದೆ. ದುರ್ಗಾ ಮಂಟಪ, ಮಂಜನಕಟ್ಟೆ ಮತ್ತು ಆಸುಪಾಸಿನಲ್ಲಿ ಮಾಡಿರುವ ವಿದ್ಯುತ್ ಅಲಂಕಾರ ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT