ಕಳಸ: ಇಲ್ಲಿನ ಹೊಸದೇವರ ಚಾವಡಿಯಲ್ಲಿ ಮೂರುದಿನಗಳ ಕಾಲ ನಡೆದ ಗ್ರಾಮ ದೇವರುಗಳ ಆರಾಧನೆ ಮತ್ತು ನೇಮೋತ್ಸವ ಬುಧವಾರ ಬೆಳಿಗ್ಗೆ ಮುಕ್ತಾಯವಾಗಿತು.

ಗ್ರಾಮ ದೇವರ ಭಂಡಾರವನ್ನು ಕಳೆದ ವಾರ ಶ್ಯಾನುಭೋಗರ ಭಂಡಾರದ ಮನೆಯಿಂದ ಹೊಸದೇವರ ಚಾವಡಿಗೆ ಮೆರವಣಿಗೆಯಲ್ಲಿ ಒಯ್ಯಲಾಗಿತ್ತು. ಅರಮನೆಮಕ್ಕಿಯಲ್ಲಿ ಮಾರಿಕಾಂಬಾ ಮಹಾಪೂಜೆ, ಗ್ರಾಮ ದೇವರ ದರ್ಶನ ನಡೆದಿತ್ತು.

ಆನಂತರ ಹೊಸ ದೇವರ ಚಾವಡಿಯಲ್ಲಿ ಪಂಜುರ್ಲಿ ದೈವದ ಪ್ರತಿಷ್ಠೆ, ರಾತ್ರಿ ರಕ್ತೇಶ್ವರಿ, ವಿಷ್ಣುಮೂರ್ತಿ, ಅರಮನೆ ಜಟಿಗ, ರಾಜದೈವದ ನೇಮ, ಉಯ್ಯಾಲೆ ಸೇವೆ, ಹೇಳಿಕೆ– ಕೇಳಿಕೆ ನಡೆದಿತ್ತು.

ಎರಡನೇ ದಿನ ಧೂಮಾವತಿ ದೈವ, ಸೂರ್ಲುಮನೆ ಚೌಡಿ, ಮನಪಂಜುರ್ಲಿ, ಜಟಿಗ ದೈವದ ನೇಮ, ಉಯ್ಯಾಲೆ ಸೇವೆ, ಹೇಳಿಕೆ– ಕೇಳಿಕೆ ನಡೆಯಿತು.

ಮೂರನೇ ದಿನ ಅಡಕೋಡು ಚೌಡಿ, ನಂದಿಕೋಣ, ಬೇಟೆಗಾರ, ವೀರ ಹನುಮಂತ ಮತ್ತು ಪಂಜುರ್ಲಿ ದೈವದ ನೇಮ ಮತ್ತು ಹೇಳಿಕೆ– ಕೇಳಿಕೆ ಜರುಗಿತು. ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಭಕ್ತಸಮೂಹ ನೇಮೋತ್ಸವದ ಎಲ್ಲ ವಿಧಿಗೆ ಸಾಕ್ಷಿಯಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-126-606305978

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.