ಸೋಮವಾರ, ಡಿಸೆಂಬರ್ 5, 2022
21 °C

ಬೆಂಗಳೂರು ಕೃಷಿ ಮೇಳದಲ್ಲಿನಸಿರಿ ಜೇನಿನ ಪರಿಮಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ಇಲ್ಲಿನ ಹಳುವಳ್ಳಿ ಸಮೀಪದ ವಲ್ಲಿಕುಡಿಗೆಯ ಜೇನು ಕೃಷಿ ತಜ್ಞ ಚಂದ್ರಶೇಖರ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾಗವಹಿಸಿ ‘ನಸಿರಿ’ ಜೇನಿನ ಮಹತ್ವದ ಬಗ್ಗೆ ಆಸಕ್ತರಿಗೆ ಮಾಹಿತಿ ನೀಡಿದರು.

‘ಚುಚ್ಚದ ಜೇನು’ ಎಂದೇ ಹೆಸರಾದ ನಸಿರಿ ಜೇನನ್ನು ಹೇಗೆ ಸಲಹಬೇಕು ಎಂಬ ತಂತ್ರಗಳನ್ನು ಮತ್ತು ಅದರ ತುಪ್ಪಕ್ಕೆ ಇರುವ ಭಾರಿ ಬೇಡಿಕೆ ಬಗ್ಗೆಯೂ ಚಂದ್ರಶೇಖರ್ ಮಾಹಿತಿ ನೀಡಿದರು.

ಮೇಳದಲ್ಲಿ ಅನೇಕ ಕೃಷಿಕರು ಆಸಕ್ತಿಯಿಂದ ಚಂದ್ರಶೇಖರ್ ಅವರಿಂದ ಜೇನು ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ತಾವೇ ರಚಿಸಿದ ಅನೇಕ ಬಗೆಯ ಜೇನುಗೂಡುಗಳ ಮಾದರಿಗಳನ್ನು ಕೂಡ ಚಂದ್ರಶೇಖರ್ ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.