ಕಳಸ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಪಡಿತರ ಪಡೆಯಲು ಜನರು ಪಡಿಪಾಟಲು ಪಡುತ್ತಿದ್ದಾರೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿ ಪಡೆಯಲು ಜನರು ಸಾಲುಗಳಲ್ಲಿ ಇಡೀ ದಿನ ನಿಂತರೂ ಅಕ್ಕಿ ಪಡೆಯಲು ಆಗುತ್ತಿಲ್ಲ. ಈ ತಿಂಗಳ 31ರೊಳಗೆ ಅಕ್ಕಿ ಪಡೆದುಕೊಳ್ಳದಿದ್ದರೆ ಅಕ್ಕಿ ಕೈತಪ್ಪಿ ಹೋಗುತ್ತದೆ. ಆದರೆ, ಬಿಪಿಲ್ ಕಾರ್ಡುದಾರರು ಹೆಬ್ಬೆಟ್ಟು ಕೊಡಲು ಹೋದಾಗ ಸರ್ವರ್ ಸಮಸ್ಯೆ ಆಗುತ್ತಿದೆ. ಇದರಿಂದ ಇಡೀ ದಿನ ಸರತಿಯಲ್ಲಿ ನಿಂತರೂ ಅಕ್ಕಿ ಸಿಗದೆ ಜನರು ನಿರಾಸೆಯಿಂದ ಮನೆಗೆ ಮರಳುವಂತಾಗಿದೆ.

‘ಸರ್ವರ್ ಸಮಸ್ಯೆಯಿಂದಾಗಿ ಮೂರು ದಿನಗಳಿಂದ ನಮಗೆ ಪಡಿತರ ಪಡೆಯಲು ಆಗುತ್ತಿಲ್ಲ. ತೋಟದ ಕೆಲಸಕ್ಕೆ ರಜೆ ಮಾಡಿ ರೇಷನ್ ಪಡೆಯಲು ಬರುತ್ತೇವೆ. ಬಿಸಿಲಲ್ಲಿ ಇಡೀದಿನ ಕಾದರೂ ಅಕ್ಕಿ ಸಿಗುತ್ತಿಲ್ಲ’ ಎಂದು ಜನರು ಬೇಸರ ಹೊರಹಾಕಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-126-201096946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.