ಕಳಸ: ಅನಾರೋಗ್ಯದ ಸಂಕಷ್ಟಗಳ ನಡುವೆಯೂ ಕಲಿಕೆ ಮೇಲಿನ ಆಸೆ ಕೈಬಿಡದೆ ಶೇ 90 ಅಂಕಗಳೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಮರಸಣಿಗೆ ಮೂಲದ ಶುಭಶ್ರೀ ಎಲ್ಲರ ಗಮನ ಸೆಳೆದಿದ್ದಾಳೆ.

ಕಳೆದ ತಿಂಗಳು ಕೆಪಿಎಸ್ ಶಾಲೆಯಲ್ಲಿ ನಡೆದ ಪರೀಕ್ಷೆಗಳ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಶುಭಶ್ರೀಯನ್ನು ಆಕೆಯ ತಂದೆ ಗಣೇಶ್ ಪ್ರತಿದಿನ ಹೊತ್ತುಕೊಂಡೇ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಬಳಿಕ ಮನೆಗೆ ಕರೆತರುತ್ತಿದ್ದರು. ಈಗ ಆಕೆ ಉತ್ತಮ ಅಂಕಗಳೊಂದಿಗೆತೇರ್ಗಡೆ ಹೊಂದಿರುವುದು ಗಮನಾರ್ಹ.

ಚೌಡಿಬೈಲು ಪ್ರದೇಶದ ಗಣೇಶ್–ಪುಷ್ಪಾ ದಂಪತಿಯ ಪುತ್ರಿಯಾದ ಶುಭಶ್ರೀಗೆ ಏಳನೇ ತರಗತಿಯಲ್ಲಿದ್ದಾಗಲೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಚಿಕಿತ್ಸೆಗಾಗಿ ಸುಮಾರು ₹15 ಲಕ್ಷ ವೆಚ್ಚ ಮಾಡಿದ್ದು, ಆದರೂ ಆರೋಗ್ಯ ಸುಧಾರಣೆ ಆಗಿಲ್ಲ.

ಈ ನಡುವೆ ತಂದೆ ಗಣೇಶ್ ಮರದಿಂದ ಬಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕೂಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕುಟುಂಬದ ನಿರ್ವಹಣೆಯನ್ನು ತಾಯಿ ಪುಷ್ಪಾ ಹೊತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಶುಭಶ್ರೀ ವಿದ್ಯಾಭ್ಯಾಸ ಮುಂದುವರಿಸಲು ಸಂಕಲ್ಪ ಮಾಡಿಕೊಂಡಿದ್ದಾಳೆ.

ಉನ್ನತ ಶಿಕ್ಷಣದತ್ತ ಗಮನ ಹರಿಸಿರುವ ಆಕೆ, ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದು ಸಿ.ಎ. ಆಗುವ ಗುರಿ ಹೊಂದಿದ್ದಾಳೆ. ಆದರೆ, ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಂದ ಕಾಲೇಜಿಗೆ ತೆರಳುವುದು ಸವಾಲಾಗಿದೆ.

‘ನನ್ನ ಆರೋಗ್ಯ ಸಂಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದ್ದರೂ, ಬದುಕಿನ ಭರವಸೆ ಕಳೆದುಕೊಂಡಿಲ್ಲ. ಪ್ರತಿದಿನ ಅಪ್ಪನೇ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಕಾಲೇಜಿಗೆ ಸೇರಿದರೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು? ನನಗೆ ದೈನಂದಿನ ಅಗತ್ಯಗಳಿಗೂ ಸಹಾಯ ಬೇಕಾಗುತ್ತದೆ. ಆದ್ದರಿಂದ ಮನೆಯಲ್ಲೇ ಓದಲು ಸಾಧ್ಯವಿದೆಯೇ ಎಂಬುದನ್ನು ಯೋಚಿಸುತ್ತಿದ್ದೇನೆ’ ಎಂದು ಶುಭಶ್ರೀ ಹೇಳುತ್ತಾಳೆ.

ಈ ಬಾಲಕಿಯ ವಿದ್ಯಾಭ್ಯಾಸ ಹಾಗೂ ಚಿಕಿತ್ಸೆಗೆ ಸಹಾಯ ಮಾಡಲು ಬಯಸುವವರು 9480096240 ಅನ್ನು ಸಂಪರ್ಕಿಸಬಹುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-126-373176893

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.