ಕಳಸ: ಇಲ್ಲಿನ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿ ಎಡದಾಳು ದಿನೇಶ್ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರಾಗಿ ರಂಗನಾಥ್, ರವೀಂದ್ರ ಶೆಟ್ಟಿ, ಸುಧೀರ್, ಸುಮನಾ ಜಯರಾಜ್, ಪೂರ್ಣಿಮಾ ಅಶೋಕ್, ರಿಜ್ವಾನ್, ಶರಾವತಿ ರವಿರಾಜ್, ಸರಸ್ವತಿ ಜಗನ್ನಾಥ್, ಭಾರತಿ ಆಯ್ಕೆಯಾದರು.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಒಂದು ನಿರ್ದೇಶಕ ಸ್ಥಾನವನ್ನು ಮೋಹನ್ ಗೆದ್ದುಕೊಂಡರು. ಪ್ರತಿಸ್ಪರ್ಧಿ ಮಂಜುನಾಥ್ ಅವರನ್ನು 214 ಮತಗಳಿಂದ ಸೋಲಿಸಿದರು. ಮೋಹನ್ ಅವರಿಗೆ 552 ಮತಗಳು, ಮಂಜುನಾಥ್ ಅವರಿಗೆ 338 ಮತಗಳು ಬಿದ್ದವು. ಸೋಮಯ್ಯ ಅವರಿಗೆ 95 ಮತಗಳು ದಕ್ಕಿದವು.

ಹೊಸ ಸಮಿತಿಯ ಪದಗ್ರಹಣ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ‘ಕಳಸೇಶ್ವರ ಗ್ರಾಮ ಅರಣ್ಯ ಸಮಿತಿ 24 ವರ್ಷಗಳಿಂದ ಅಧ್ಯಕ್ಷ ರುದ್ರಯ್ಯ ಆಚಾರ್ ನೇತೃತ್ವದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಸ್ತುತ್ಯರ್ಹ ಕೆಲಸ ಮಾಡಿದೆ’ ಎಂದರು.

ವಲಯ ಅರಣ್ಯಾಧಿಕಾರಿ ನಿಶ್ಚಿತ್ ಮಾತನಾಡಿ, ಕಳಸೇಶ್ವರ ಗ್ರಾಮ ಅರಣ್ಯ ಸಮಿತಿ ಉತ್ತಮ ಕಾರ್ಯನಿರ್ವಹಣೆ ತೋರುತ್ತಿದ್ದು, ಹೊಸ ಸದಸ್ಯರು ಸಮಿತಿಯ ನಿಬಂಧನೆಗಳನ್ನು ಅರಿತು ಕೆಲಸ ಮಾಡಬೇಕು ಎಂದರು.

ಸಮಿತಿಯ ಸದಸ್ಯ ಕಾರ್ಯದರ್ಶಿ ಹರೀಶ್ ಮಾತನಾಡಿ, ಗ್ರಾಮ ಅರಣ್ಯ ಸಮಿತಿಯಲ್ಲಿ 5 ವರ್ಷಗಳಲ್ಲಿ ₹60 ಲಕ್ಷಕ್ಕೂ ಹೆಚ್ಚು ಹಣ ಉಳಿಸಲಾಗಿದೆ. ಅದನ್ನು ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದರು.

ಸನ್ಮಾನ ಸ್ವೀಕರಿಸಿದ ನಿರ್ಗಮಿತ ಅಧ್ಯಕ್ಷ ರುದ್ರಯ್ಯ ಆಚಾರ್ ಮಾತನಾಡಿ, 24 ವರ್ಷಗಳಲ್ಲಿ ಅರಣ್ಯ ಇಲಾಖೆ ಸಹಕಾರದಿಂದಾಗಿ ಸಮಾಜಮುಖಿಯಾಗಿ ಕೆಲಸ ಮಾಡಿದ ತೃಪ್ತಿ ಇದೆ. ಸಮಿತಿ ವತಿಯಿಂದ ಕಳಸ ಕೆಪಿಎಸ್ ಶಾಲೆಗೆ ಡೆಸ್ಕ್ ಕೊಟ್ಟಿರುವುದು, ಬಲಿಗೆಗೆ ಶಾಲಾ ಬಸ್ ಸೇವೆ ಒದಗಿಸುತ್ತಿರುವುದು ಸ್ಮರಣೀಯ ಎಂದರು.

ನಿರ್ಗಮಿತ ನಿರ್ದೇಶಕರಾದ ಗಣೇಶ್ ಭಟ್, ವಿಜಯಾ, ಬಾಲಕೃಷ್ಣ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ನಾಗರಾಜ್, ಚುನಾವಣಾಧಿಕಾರಿ ಪ್ರಕಾಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-126-2005099559

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.