ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿಕಾಂಬಾ, ಮೌನೇಶ್ವರ ರಥೋತ್ಸವ

Last Updated 17 ನವೆಂಬರ್ 2022, 4:05 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನ ಜಾವೂರು ಗ್ರಾಮದಲ್ಲಿ ಮೌನೇಶ್ವರ ಸ್ವಾಮಿ, ಕಾಳಿಕಾಂಬಾ ದೇವಿ ಕೆಂಡದಾರ್ಚನೆ ಮತ್ತು ರಥೋತ್ಸವ ಬುಧವಾರ ಜರುಗಿತು.

ಮೌನೇಶ್ವರ ಸ್ವಾಮಿ, ಗ್ರಾಮ ದೇವತೆ ಕಿರಾಳಮ್ಮ ದೇವಿ, ಆಂಜನೇಯ ಸ್ವಾಮಿ, ಕಾಳಿಕಾಂಬಾ ದೇವಿ ದೇವಾಲಯವನ್ನು ಕದಳಿ, ಮಾವು, ಹೂವುಗಳಿಂದ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಉತ್ಸವ ಮೂರ್ತಿಗಳನ್ನು ಹೂವಿನಿಂದ ಶೃಂಗರಿಸಲಾಗಿತ್ತು. ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಉತ್ಸವದಲ್ಲಿ ಜಾನಪದ ಕಲಾ ತಂಡಗಳು, ಮಂಗಳವಾದ್ಯಗಳು ಗಮನಸೆಳೆದವು. ದೇವರ ಉತ್ಸವ ಮೂರ್ತಿ ಹೊತ್ತ ಭಕ್ತರು, ಹರಕೆ ಹೊತ್ತವರು, ಕಾಳಿಕಾಂಬಾ ದೇವಾಲಯದ ಮುಂಭಾಗದಲ್ಲಿ ಕೆಂಡದ ಗುಂಡಿಯನ್ನು ಹಾಯ್ದರು. ಬಳಿಕ ಮೌನೇಶ್ವರ ಸ್ವಾಮಿ, ಕಾಳಿಕಾಂಬಾ ದೇವರ ಮೂರ್ತಿ ಪ್ರತಿಷ್ಠಾಪಿಸಿ, ರಥೋತ್ಸವ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT