ಚಿಕ್ಕಮಗಳೂರು: ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಎಂದು ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.

ಆದಿಶಕ್ತಿ ನಗರದಲ್ಲಿ ಜಿಲ್ಲಾ ಕನ್ನಡ ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಆದಿಶಕ್ತಿ ನಗರದ ಘಟಕ ಸ್ಥಾಪನೆ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾಷೆಯನ್ನು ಭದ್ರವಾಗಿಸಲು ಸ್ವಯಂ ಪ್ರೇರಿತರಾಗಿ ಜನ ಭಾಗವಹಿಸಬೇಕು. ಕನ್ನಡ ಸಂಘಟನೆಗಳ ಜತೆಗೆ ಚಲನಚಿತ್ರ ನಟ ಹೆಸರಿನಲ್ಲಿ ಕನ್ನಡ ಸಂಘಟನೆಗಳಿವೆ. ನಾಡು ಕಟ್ಟುವ ಕಾಯಕದಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.

ಸಂತರು, ದಾರ್ಶನಿಕರು, ಲೇಖಕರು ಕನ್ನಡ ಭಾಷೆಯ ಘನತೆಯನ್ನು ಕೀರ್ತನೆ, ವಚನ ಹಾಗೂ ಸಾಹಿತ್ಯದ ಮೂಲಕ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ರಾಜ್ಯೋತ್ಸವ ಎಂದರೆ ನವೆಂಬರ್ನಲ್ಲಿ ಆಡಂಬರವಾಗಿ ಆಚರಿಸಿ ಸುಮ್ಮನಾಗುವುದಲ್ಲ. ಪ್ರತಿಯೊಬ್ಬರ ದೈನಂದಿನ ವ್ಯವಹಾರ, ವಹಿವಾಟು ಹಾಗೂ ಮನೆ– ಮನಗಳಲ್ಲಿ ನಿತ್ಯವು ಬಳಸುವಂತಾಗಬೇಕು. ಇದರಿಂದ ಬಾಲ್ಯದಿಂದಲೇ ಮಕ್ಕಳಿಗೆ ಎದೆಯಾಳದಲ್ಲಿ ಕನ್ನಡ ಸೊಗಡು ಬೇರೂರಲಿದೆ ಎಂದರು.

ನಾಡಿನ ಭಾಷೆ, ಜಲ, ನೆಲದ ವಿಚಾರದಲ್ಲಿ ಧಕ್ಕೆಯಾದರೆ ಸೇನೆ ಎಂದಿಗೂ ಕೈಕಟ್ಟಿ ಕೂರುವುದಿಲ್ಲ. ಕಾನೂನು ಹೋರಾಟಗಳಿಗೆ ಸದಾ ಸಿದ್ಧವಿರಲಿದೆ. ಆದಿನಗರದ ನೂತನ ಘಟಕವು ಭಾಷೆಯ ಘನತೆ ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಆ

ಆದಿನಗರ ಬಡಾವಣೆ ಘಟಕದ ಅಧ್ಯಕ್ಷರಾಗಿ ಶರತ್, ಫಯಾಜ್ (ಉಪಾಧ್ಯಕ್ಷ), ಶೇಖರ್ (ಕಾರ್ಯದ ರ್ಶಿ), ಉಮೇಶ್, ಸಾದಿಕ್ ಸೇರಿ 20 ಪದಾಧಿಕಾರಿಗಳನ್ನು ಇವೇ ವೇಳೆ ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ, ದಿನಗರದ ಕನ್ನಡ ಸೇನೆ ಅಧ್ಯಕ್ಷ ಶರತ್, ಆಟೊ ಘಟಕದ ಅಧ್ಯಕ್ಷ ಜಯಪ್ರಕಾಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಚೈತ್ರಗೌಡ, ಮುಖಂಡರಾದ ಸುನೀಲ್, ಜಗದೀಶ್, ಸತೀಶ್, ಅನ್ವರ್, ಪವನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.