ಚಿಕ್ಕಮಗಳೂರು: ರಾಜ್ಯ ಬಜೆಟ್ನಲ್ಲಿ ಜಿಲ್ಲೆಗೆ ಕೊಂಚ ಸಮಾಧಾನ ತರಿಸಿದ್ದರೂ ಕಾಡಾನೆ ಸಮಸ್ಯೆ, ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಸ್ತಾಪವಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಲು ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿಯಿಂದ ಕೈಮರದ ತನಕ ರೋಪ್–ವೇ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಪಿಪಿಪಿ(ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಈ ಯೋಜನೆ ಅನುಷ್ಠಾನ ಮಾಡುವ ಪ್ರಸ್ತಾಪ ಮಾಡಲಾಗಿದೆ.

ಈ ಹಿಂದೆ ಹಲವು ಬಾರಿ ಈ ಯೋಜನೆ ಪ್ರಸ್ತಾಪವಾಗಿದ್ದು, ತಜ್ಞರಿಂದ ಒಮ್ಮೆ ಸರ್ವೆ ಕೂಡ ನಡೆದಿದೆ. ಈ ಯೋಜನೆಗೆ ಪರಿಸರ ವಾದಿಗಳಿಂದ ತೀವ್ರ ವಿರೋಧ ಕೂಡ ಇದ್ದು, ಇದರ ನಡುವೆ ಈ ಯೋಜನೆ ಅನುಷ್ಠಾನ ಸಾಧ್ಯವೇ ಎಂಬ ಅನುಮಾನ ಜಿಲ್ಲೆಯ ಜನರಲ್ಲಿದೆ.

ತುಮಕೂರು ಮತ್ತು ಚಿಕ್ಕಮಗಳೂರಿನಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥವನ್ನು ₹12 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವುದಾಗಿ ಬಜೆಟ್ನಲ್ಲಿ ಪ್ರಸ್ತಾಪವಾಗಿದೆ. ತಲಾ ₹12 ಕೋಟಿ ಅಥವಾ ತಲಾ ₹6 ಕೋಟಿ ಎಂಬ ವಿವರಣೆ ಇಲ್ಲ.

ಕಡೂರು ತಾಲ್ಲೂಕಿನಲ್ಲಿ 25 ಕೆರೆಗಳಿಗೆ ನೀರು ತುಂಬಿಸುವ ಹಾಗೂ ನಾಲೆ ಆಧುನೀಕರಣ ಯೋಜನೆ, ಅಜ್ಜಂಪುರ ತಾಲ್ಲೂಕಿನ 19 ಕೆರೆಗಳಿಗೆ ನೀರು ತುಂಬಿಸಲು ಏತ ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಮದಗದ ಕೆರೆಯಿಂದ 25 ಕೆರೆಗಳಿಗೆ ನೀರು ತಂಬಿಸುವ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ 19 ಕೆರೆಗಳನ್ನು ತುಂಬಿಸುವ ಯೋಜನೆ ಕೂಡ ಈಗಾಗಲೇ ಚಾಲ್ತಿಯಲ್ಲಿವೆ.

ಈ ಯೋಜನೆಯ ಮುಂದುವರಿದ ಭಾಗವೋ ಅಥವಾ ಹೊಸ ಯೋಜನೆಯೇ ಎಂಬ ಸ್ಪಷ್ಟತೆ ಇಲ್ಲ. ಕಳೆದ ವರ್ಷ ಶೇ 33ರಷ್ಟು ಅನುದಾನ, ಈ ವರ್ಷ ಶೇ 33ರಷ್ಟು ಮತ್ತು ಮುಂದಿನ ವರ್ಷ ಶೇ 33ರಷ್ಟು ಅನುದಾನ ನೀಡಲಾಗುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಕೆರೆಗಳ ಏರಿ ಮತ್ತು ಚಾನೆಲ್ ಪುನಶ್ಚೇತನ ಕಾಮಗಾರಿ ಎಂದು ಉಲ್ಲೇಖಿಸಲಾಗಿದೆ. ಇದು ಸಣ್ಣ ನೀರಾವರಿ ಇಲಾಖೆ ಮೂಲಕ ಅನುಷ್ಠಾನಗೊಳ್ಳುವ ಹೊಸ ಯೋಜನೆಯಾಗಿದೆ. ರಾಜ್ಯದ 112 ಕಾಮಗಾರಿಗಳಿಗೆ ₹1,950 ಮೊತ್ತದ ಯೋಜನೆ ಪ್ರಸ್ತಾಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವ ಕಾಮಗಾರಿ, ಎಷ್ಟು ಅನುದಾನ ಎಂಬುದು ಇನ್ನೂ ಗೊತ್ತಾಗಬೇಕಿದೆ.

ಕಾರ್ಮಿಕ ಇಲಾಖೆಯಿಂದ ಕಡೂರಿನಲ್ಲಿ ಶ್ರಮಿಕ ವಸತಿ ಶಾಲೆ, ತರೀಕೆರೆಯಲ್ಲಿ ಬಸ್ ಡಿಪೊ ತೆರೆಯುವ ಪ್ರಸ್ತಾಪವಿದೆ. ಮೀನು ಆಹಾರ ಸೇವನೆ ಉತ್ತೇಜಿಸಲು ಮತ್ತು ಗುಣಮಟ್ಟದ ಮೀನು ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಚಿಕ್ಕಮಗಳೂರಿನಲ್ಲಿ ಮತ್ಸ್ಯ ದರ್ಶನಿ ತೆರೆಯಲಾಗುವುದು. ಚಿಕ್ಕಮಗಳೂರಿನಲ್ಲಿ ಇಎಸ್ಐ ಚಿಕಿತ್ಸಾಲಯ ಉನ್ನತೀಕರಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಚಿಕ್ಕಮಗಳೂರು–ಬೇಲೂರು–ಹಾಸನ ರೈಲು ಮಾರ್ಗಕ್ಕೆ ಶೇ 50ರಷ್ಟು ಅನುದಾನ ಮತ್ತು ಭೂಸ್ವಾಧೀನಕ್ಕೆ ಪೂರ್ಣ ಪ್ರಮಾಣದ ಅನುದಾನವನ್ನು ಸರ್ಕಾರ ಭರಿಸುತ್ತಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶ ಇರುವ ಜಿಲ್ಲೆಯ ಪ್ರವಾಸಿ ತಾಣಗಳ ರಸ್ತೆ ಸೇರಿ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪವಿಲ್ಲ ಎಂಬುದು ಜಿಲ್ಲೆಯ ಜನರಲ್ಲಿ ಬೇಸರ ತರಿಸಿದೆ.

ಕಾಡನೆ ಸಮಸ್ಯೆಗೆ ಇಲ್ಲ ಪ್ಯಾಕೇಜ್

ಮಲೆನಾಡಿನ ಜ್ವಲಂತ ಸಮಸ್ಯೆಯಾದ ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟಲು ಜಿಲ್ಲೆಗೆ ಪ್ರತ್ಯೇಕವಾಗಿ ಪ್ಯಾಕೇಜ್ ನೀಡಿಲ್ಲ. ಇಡೀ ರಾಜ್ಯದಲ್ಲಿ ಮಾನವ–ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ಮುಂದಿನ ಐದು ವರ್ಷಗಳಿಗೆ ₹1500 ಕೋಟಿ ವೆಚ್ಚ ಮಾಡಲಾಗುವುದು.

ಪ್ರಸಕ್ತ ಸಾಲಿಗೆ ₹269 ಕೋಟಿ ಮೀಸಲಿಡಲಾಗಿದೆ ಎಂದು ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ತನೂಡಿ ಬಳಿ ಆನೆ ಶಿಬಿರ ತೆರೆಯುವ ಯೋಜನೆ ಸರ್ಕಾರದ ಮುಂದಿದ್ದು ಬಜೆಟ್ನಲ್ಲಿ ಅನುದಾನ ದೊರಕುವ ನಿರೀಕ್ಷೆ ಇತ್ತು.

ಇದರ ಬಗ್ಗೆ ಈ ವರ್ಷವೂ ಪ್ರಸ್ತಾಪ ಇಲ್ಲ. ಇನ್ನು ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ಹಳದಿ ಎಲೆ ಕೊಳೆ ರೋಗ ತೆಂಗು ಬೆಳೆಗೆ ಕಂಟಕವಾಗಿರುವ ಕಪ್ಪುತಲೆ ಹುಳು ಹಾಗೂ ಬಿಳಿನೊಣಗಳ ನಿಯಂತ್ರಣಕ್ಕೆ ವಿಶ್ವ ವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಸಮುದಾಯ ಆಧಾರಿತ ರೋಗ ಮತ್ತು ಕೀಟ ನಿಯಂತ್ರಣ ಕಾರ್ಯಗಳನ್ನು ₹10 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಇದು ರಾಜ್ಯ ಮಟ್ಟದಲ್ಲಿ ಪ್ರಕಟವಾಗಿರುವ ಯೋಜನೆಯಾಗಿದ್ದು ಜಿಲ್ಲೆಗೆ ಎಷ್ಟು ಅನುದಾನ ದೊರಕಲಿದೆ ಎಂಬ ವಿವರ ಇಲ್ಲ. 2025–26ನೇ ಸಾಲಿನ ಬಜೆಟ್ನಲ್ಲೂ ಮಲೆನಾಡು ಭಾಗದ ಅಡಕೆ ಬೆಳೆಗೆ ತಗುಲಿರುವ ಎಲೆಚುಕ್ಕಿ ರೋಗ ನಿಯಂತ್ರಿಸಲು ₹65 ಕೋಟಿ ಮೀಸಲಿಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.