ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಳಿಗೆ ಸಹಿಸದೆ ಬಿಜೆಪಿ ಹುನ್ನಾರ: ಕಾಂಗ್ರೆಸ್ ನಾಯಕಿ ಬಿ.ಸಿ.ಗೀತಾ ಕಿಡಿ

Published : 21 ಆಗಸ್ಟ್ 2024, 13:34 IST
Last Updated : 21 ಆಗಸ್ಟ್ 2024, 13:34 IST
ಫಾಲೋ ಮಾಡಿ
Comments

ಬಾಳೆಹೊನ್ನೂರು: ಕಾಂಗ್ರೆಸ್ ಜನಪರ ಯೋಜನೆಗಳ ಮೂಲಕ ಮನೆಮಾತಾಗಿದ್ದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಿಂಬಾಗಿಲ ಮೂಲಕ ರಾಜ್ಯಪಾಲರನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಬಿ.ಸಿ.ಗೀತಾ ಆರೋಪಿಸಿದರು.

ಪಟ್ಟಣದ ಜೇಸಿ ವೃತ್ತದಲ್ಲಿ ಹೋಬಳಿ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಎಂದಿಗೂ ವೈಯಕ್ತಿಕ ಬದುಕಿನಲ್ಲಿ ಭ್ರಷ್ಟಾಚಾರ ನಡೆಸಿದವರಲ್ಲ. ಅವರು ಇಂತಹ ಆಪಾದನೆಗಳಿಗೆ ಹೆದರಿ ಎಂದೂ ರಾಜೀನಾಮೆ ನೀಡುವುದಿಲ್ಲ. ವಿರೋಧ ಪಕ್ಷಗಳಿಗೆ ಜನಪರ ಆಡಳಿತ ಕಂಡು ಹೊಟ್ಟೆಉರಿಯುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿವೆ’ ಎಂದು ಆಪಾದಿಸಿದರು.

ಜೇಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಕ್ಷೇತ್ರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಸಿ.ಸಂತೋಷ್ ಕುಮಾರ್, ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ, ಸದಸ್ಯರಾದ ಬಿ.ಕೆ.ಮಧುಸೂದನ, ಇಬ್ರಾಹಿಂ ಶಾಫಿ, ಜಾನ್ ವಿಲ್ಪ್ರೇಡ್ ಡಿಸೋಜ, ಎಂ.ಎಸ್.ಅರುಣೇಶ್, ಬೆಂಗಳೂರಿನ ಕಾಫಿ ಗಿರೀಶ್, ಹಿರಿಯಣ್ಣ, ತಾಲ್ಲೂಕು ಅಧ್ಯಕ್ಷ ಗೇರ್ ಬೈಲ್ ನಟರಾಜ, ಪ್ರವೀಣ್ ಗೇರ್ ಬೈಲ್, ಇಪ್ತಿಖಾರ್ ಆದಿಲ್, ಗೌತಮ್ ಕಾನ್ಕೆರೆ, ನವೀನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT