ಕಡೂರು: ಕನ್ನಡ ಸಾಹಿತ್ಯ ಲೋಕದಲ್ಲಿ ವಚನ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವಿದೆ ಎಂದು ಸಿಂಗಟಗೆರೆ ಕಲ್ಲೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ವಿ. ಮಂಜುನಾಥ ಹೇಳಿದರು.

ತಾಲ್ಲೂಕಿನ ಸಿಂಗಟಗೆರೆ ಕಲ್ಲೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ದಯವೇ ಧರ್ಮದ ಮೂಲವಯ್ಯಾ ಎಂದು ಹೇಳಿ ಸಮಾಜದಲ್ಲಿ ಮಾನವೀಯತೆ ಬೀಜ ಬಿತ್ತುವ ಮೂಲಕ ವಿಶ್ವಗುರುವಾದವರು ಬಸವಣ್ಣನವರು. ಅಂತಹ ಮಹಾನ್ ಚೇತನಗಳು ಹುಟ್ಟಿದ ಕನ್ನಡ ನಾಡು ಪರಭಾಷಿಕರ ಹಾವಳಿಯಲ್ಲಿ ನಲುಗಿತ್ತು. ಸಾವಿರಾರು ಜನರ ಹೋರಾಟ, ತ್ಯಾಗ ಬಲಿದಾನದ ಫಲವಾಗಿ ಕನ್ನಡ ನಾಡು ಏಕೀಕರಣಗೊಂಡು ಕರ್ನಾಟಕ ಉದಯವಾಯಿತು ಎಂದರು.

ಕಡೂರು ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ. ದೇವಾನಂದ್ ಉದ್ಘಾಟಿಸಿದರು. ಪ್ರಾಂಶುಪಾಲ ಎಸ್. ಕುಬೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಸಿಂಗಟಗೆರೆ ಹೋಬಳಿ ಘಟಕದ ಅಧ್ಯಕ್ಷೆ ಶಪೀತ ಬೇಗಂ, ಸಿಂಗಟಗೆರೆ ಗ್ರಾಮ ಪಂಚಾಯಿತಿ ಸಾಹಿತ್ಯ ಪರಿಷತ್ ಅಧ್ಯಕ್ಷೆ ಗೀತಾ ಗಿರೀಶ್ ಆರಾಧ್ಯ, ಸಿಂಗಟಗೆರೆ ಹೋಬಳಿ ಘಟಕದ ಮಹಿಳಾ ಅಧ್ಯಕ್ಷೆ ಲಲಿತಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಉದಯಕುಮಾರ್, ಬಾಬು, ಸುಧಾ, ರೂಪ, ಧರಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.