ಜಯಪುರ (ಬಾಳೆಹೊನ್ನೂರು): ಕನ್ನಡಿಗರು ಕನ್ನಡ ಭಾಷೆ ಬಳಸಲು ಹಿಂಜರಿಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಈ ಸ್ಥಿತಿ ಇಲ್ಲದಾಗಿ ಪ್ರತಿ ಮನೆ–ಮನದಲ್ಲಿ ಕನ್ನಡ ಭಾಷೆ ಮೊಳಗಬೇಕು. ಆಗ ಮಾತ್ರ ಕನ್ನಡ ಶ್ರೀಮಂತವಾಗಲಿದೆ ಎಂದು ಜಯಪುರ ಬಿಜಿಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಗಾಯತ್ರಿ ನಾಗಭೂಷಣ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಮೇಗುಂದಾ ಹೋಬಳಿ ಘಟಕ ಹಾಗೂ ಭೈರೇದೇವರು ಗ್ರಾಮದ ವೈಭವ ಸ್ವಸಹಾಯ ಸಂಘದ ಆಶ್ರಯದಲ್ಲಿ ಬೈರೇದೇವರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನುಡಿ ನಿತ್ಯೋತ್ಸವ ಹಾಗೂ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸವಾಲುಗಳನ್ನು ಮಹಿಳೆ ಆತ್ಮವಿಶ್ವಾಸದಿಂದ ಎದುರಿಸಬೇಕು. ಯಾವ ಸಂದರ್ಭದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.
ಹರಿಕಥೆ ವಿದ್ವಾಂಸ ಜಾಳ್ಮಾರ ಸುಬ್ಬರಾವ್, ನಿವೃತ್ತ ಶಿಕ್ಷಕಿ ಹರಳಾನೆ ಪ್ರೇಮಾವತಿ ಶ್ರೀಕಂಠ ಭಟ್ಟ, ಹೊರಸಿಗೆ ಲಕ್ಷ್ಮಮ್ಮ ಮಲ್ಲೇಗೌಡ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ ಮೇಗುಂದಾ ಹೋಬಳಿ ಘಟಕದ ಅಧ್ಯಕ್ಷ ರಾಜೇಶ್ ಚಿಮ್ಮನಕುಡಿಗೆ, ಗುಡ್ಡೆತೋಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ್ ಜಾಳ್ಮರ, ನಟರಾಜ್ ಗುಡ್ಡೇತೋಟ, ವಿಜಯರಂಗ ಕೋಟೆತೋಟ, ವಿವೇಕಾನಂದ ಗುಡ್ಡೆತೋಟ, ಅನ್ನಪೂರ್ಣಾ ರತ್ನಾಕರ, ಆಶಾ ಪ್ರಕಾಶ್, ಡಿ.ಎನ್.ಕೇಶವಮೂರ್ತಿ, ರಂಗನಾಥ್ ಕೊಗ್ರೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟದ ಅಧ್ಯಕ್ಷ ಸುರೇಂದ್ರ, ದಿವ್ಯಾ ಪ್ರಶಾಂತ್, ಭವಾನಿ ರಘುಪತಿ ಹೆಬ್ಬಾರ್, ಬಿ.ಎಸ್.ಶ್ರೀಕಂಠ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.