ರವಿಕುಮಾರ್ ಶೆಟ್ಟಿಹಡ್ಲು

ಕೊಪ್ಪ: ಉರಿ ಬಿಸಿಲಿನ ಧಗೆ ಏರುತ್ತಿರುವ ಹೊತ್ತಿನಲ್ಲೇ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ನಡೆಯುತ್ತಿದೆ.

ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಯಂಬಳ್ಳಿ, ಹಿರೇಗದ್ದೆ ಪಂಚಾಯಿತಿ ವ್ಯಾಪ್ತಿಯ ನವಗ್ರಾಮ, ಮರೀತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್.ಕೆ.ರಸ್ತೆ, ಕುಂಬ್ರಿಉಬ್ಬು ಗ್ರಾಮಕ್ಕೆ ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಇನ್ನು 15 ದಿನಗಳಲ್ಲಿ ಮಳೆ ಬಾರದಿದ್ದರೆ ನೀರಿಗೆ ಸಮಸ್ಯೆಯಾಗುವ ಸಂಭವ ಹೆಚ್ಚಿದೆ.

ಇನ್ನೂ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬಾವಿ, ಕೆರೆ, ಹಳ್ಳದಲ್ಲಿ ನೀರು ಬರಿದಾಗುತ್ತಿದ್ದು, ನದಿಯಲ್ಲಿ ಸಂಪೂರ್ಣ ಇಳಿಮುಖ ಕಂಡಿದೆ.

ಇತ್ತೀಚೆಗೆ ಕೊಳವೆ ಬಾವಿ ನೀರನ್ನು ಹೆಚ್ಚಾಗಿ ಅವಲಂಬಿಸಲಾಗಿದೆ. ತಾಲ್ಲೂಕಿನಲ್ಲಿ ಸಾಕಷ್ಟು ಕೊಳವೆ ಬಾವಿ ಕೊರೆದಿದ್ದರಿಂದ ಅಂತರ್ಜಲ ಮಟ್ಟವೂ ತಗ್ಗಿದೆ. ಎರಡು ವರ್ಷದಿಂದ ಜೆಜೆಎಂ(ಜಲಜೀವನ ಮಿಷನ್ ಯೋಜನೆ) ಅಡಿ ಕೊರೆದ ಕೊಳವೆ ಬಾವಿಯಲ್ಲಿ ಕೂಡ ನೀರು ಬತ್ತುತ್ತಿದೆ. ಆದ್ದರಿಂದ ತುಂಗಾ ನದಿಯಂತಹ ನದಿ ಮೂಲವನ್ನು ನೀರು ಪೂರೈಕೆಗಾಗಿ ಅವಲಂಬಿಸಲಾಗಿದೆ.

ತಾಲ್ಲೂಕಿನ ಒಟ್ಟು 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ನೀರಿನ ಅಭಾವ ಇದೆ. ಇತ್ತೀಚೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಗ್ರಾಮಗಳ ಮಾಹಿತಿ ಪಡೆಯಲಾಗಿದೆ. 15ನೇ ಹಣಕಾಸು, ಸ್ವಂತ ಸಂಪನ್ಮೂಲ ಬಳಸಿ ಪರಿಸ್ಥಿತಿ ನಿಭಾಯಿಸಲು ಸೂಚಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-126-1408282915

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.