ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಹಾರ ಪದ್ಧತಿಯಿಂದ ಆರೋಗ್ಯ ರಕ್ಷಣೆ’

Last Updated 8 ಫೆಬ್ರುವರಿ 2023, 7:17 IST
ಅಕ್ಷರ ಗಾತ್ರ

ಕೊಪ್ಪ: ‘ನಾವು ಸೇವಿಸುವ ಆಹಾರ ಹಿತಮಿತವಾಗಿ, ಕಾಲಕ್ಕೆ ಅನುಗುಣವಾಗಿ ಇದ್ದರೆ ಆಹಾರ ಪದ್ಧತಿ ಮೂಲಕವೇ ನಮ್ಮ ಆರೋಗ್ಯದ ರಕ್ಷಣೆ ಮಾಡಿಕೊಳ್ಳಬಹುದು’ ಎಂದು ಹರಿಹರಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಿ.ಆರ್.ಅಂಬರೀಶ್ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ, ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಆಶ್ರಯದೊಂದಿಗೆ ಶಾರದಾ ವಿದ್ಯಾಮಂದಿರದಲ್ಲಿ ಈಚೆಗೆ ‘ಆರೂರು ರವಿ ಸ್ಮಾರಕ ದತ್ತಿ’, ‘ಲೋಕಸೇವಾ ನಿರತ ಎಂ.ಎಸ್.ದ್ಯಾವೇಗೌಡ ಸ್ಮಾರಕ ದತ್ತಿ’ ಅಡಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಬಾರು ಬಟ್ಟಲಿನಲ್ಲಿರುವ ಅರಿಸಿನ, ಶುಂಠಿ, ಕಾಳುಮೆಣಸು, ಓಮ, ಮೆಂತೆ, ಕೊತ್ತಂಬರಿ, ಏಲಕ್ಕಿ ಇನ್ನಿತರ ವಸ್ತುಗಳು, ಹಿತ್ತಲಿನಲ್ಲಿರುವ ವೀಳ್ಯದೆಲೆ ಸಾಂಬಾರ ಬಳ್ಳಿ, ಹರಿವೆ, ಬಸಳೆ ಹಾಗೂ ಹೂದೋಟದಲ್ಲಿರುವ ಗುಲಾಬಿ, ದಾಸವಾಳ, ಮಂದಾರ, ಪಾರಿಜಾತ ಮುಂತಾದವುಗಳಿಂದ, ಜತೆಗೆ ನಾವು ಪ್ರತಿನಿತ್ಯ ಅನುಸರಿಸುವ ನಮ್ಮ ನಿತ್ಯಕರ್ಮಗಳಿಂದ ಆಹಾರ– ವಿಹಾರಗಳಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ ಅವರು ನೀತಿ ಕಥೆಯ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ತಿಳಿಸಿ, ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಶಾರದಾ ವಿದ್ಯಾ ಮಂದಿರದ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಶಿವಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತಿ ದಾನಿಗಳನ್ನು ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT