ಕೊಪ್ಪ: ಮಾತೋಶ್ರೀ ಸುಭದ್ರಮ್ಮ ಮಂಜುನಾಥ ಭಟ್ ಸಂಸ್ಮರಣೆ ಅಂಗವಾಗಿ ಕೊಪ್ಪ ಮಂಜುನಾಥ್ ಭಟ್ ಪ್ರತಿಷ್ಠಾನದ ವತಿಯಿಂದ ‘ಮಲೆನಾಡ ಮಡಿಲಲ್ಲಿ ಕನ್ನಡೋತ್ಸವ-2026’ ಕಾರ್ಯಕ್ರಮವು ಮೇ 10ರಂದು ಬೆಳಿಗ್ಗೆ 10ರಿಂದ ಹುಲ್ಲುಮಕ್ಕಿಯ ವೀರಾಂಜನೇಯ ದೇವಸ್ಥಾನ ಆವರಣದಲ್ಲಿ ನಡೆಯಲಿದೆ ಎಂದು ಮಂಜುನಾಥ್ ಭಟ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ರೂಪಕಲಾ ಕೆ.ಎಂ. ತಿಳಿಸಿದ್ದಾರೆ.

ಸಾಹಿತಿ ಪ್ರಭಾಕರ ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳಾದ ಮಂಗಳ ಎಂ.ನಾಡಿಗ್, ಶಾರದಾ ಉಳುವೆ, ನ.ಸುರೇಶ್ ಕಲ್ಕೆರೆ, ತೈರೊಳ್ಳಿ ಮಂಜುನಾಥ ಉಡುಪ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿ ಹಾಗೂ ಪ್ರಸಾರದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತ್ಯ, ಸಮಾಜಸೇವೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಎಲೆಯ ಮರೆಯ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ‘ಒತ್ತಡದ ಜೀವನದಲ್ಲಿ ಮಹಿಳೆಯರ ಆರೋಗ್ಯ ಸಮಸ್ಯೆ ಮತ್ತು ಪರಿಹಾರ’ ವಿಷಯದ ಕುರಿತು ಆದರ್ಶ ಆಸ್ಪತ್ರೆಯ ಡಾ. ಅನಿತ ಎನ್.ರಾವ್ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-126-284550214

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.