ಕೊಪ್ಪ: ‘ಜಾತಿಯ ಹೆಸರಿನಲ್ಲಿ ಮೇಲು–ಕೀಳು ಎಂಬ ಭೇದ ಭಾವ ತೋರುವುದನ್ನು ನಿಲ್ಲಿಸಿ. ಹಿಂದೂಗಳೆಲ್ಲ ಒಂದು ಎಂದು ಒಗ್ಗಟ್ಟಿನಿಂದ ಬದುಕಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್) ಪ್ರಚಾರಕ ಅರುಣ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸವಿನಮನೆಯಲ್ಲಿ ಭಾರತೀ ಪ್ರತಿಷ್ಠಾನ ಆಯೋಜಿಸಿದ್ದ ಸಮರಸತಾ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನಮ್ಮಲ್ಲಿ ಈಗಲೂ ಮೇಲು-ಕೀಳು ಎಂಬ ಭಾವನೆಯಿದ್ದರೆ ದೇಶ ಪ್ರಗತಿಯಾಗುವುದಿಲ್ಲ’ ಎಂದು ಹೇಳಿದರು.

ದೇವಸ್ಥಾನ, ಧಾರ್ಮಿಕ ಕೇಂದ್ರ, ಇನ್ನಿತರ ಸ್ಥಳಗಳಲ್ಲಿ ಅಸ್ಪೃಶ್ಯರಂತೆ ಕಂಡ ಕಾರಣದಿಂದ ದೇಶ ಹಲವು ವರ್ಷಗಳ ಕಾಲ ಗುಲಾಮರಾಗಿರುವ ಪರಿಸ್ಥಿತಿ ನಿರ್ಮಾಣವಾಯಿತು. ವಿದೇಶಿಗರ ಆಕ್ರಮಣದಿಂದ ಗುಡಿ, ಮಂದಿರಗಳನ್ನು ಕಳೆದುಕೊಂಡೆವು. ದೇಶ ಭೌಗೋಳಿಕ ಪ್ರದೇಶ ಕಳೆಕೊಂಡಿತು. ಹಲವರು ಮಾತಾಂತರಕ್ಕೆ ಒಳಗಾದರು ಎಂದರು.

ಯಲಹಂಕದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಅಭಯಾನಂದಾಜೀ ಅಶೀರ್ವಚನ ನೀಡಿ, ಜಾತಿ ಎಂಬ ಪದಗಳನ್ನು ನಾವುಗಳು ಹುಟ್ಟು ಹಾಕಿದ ಪದ. ಸಮಾಜದಲ್ಲಿ ಎಲ್ಲರೂ ಒಂದು ಎಂಬ ಭಾವ ಬರಬೇಕು. ಇಂತಹ ಕಾರ್ಯಕ್ರಮದಿಂದ ಜಾತಿ ಹೊಗಲಾಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಉದ್ಯಮಿ ಲಕ್ಷ್ಮಣ್ ನಿರಾಣಿ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಾಸ್ತಮ್ಮ ದೇವಿಯ 16ನೇ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕಲಾ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಠ-ಮಂದಿರಗಳಿಗೆ ಉಚಿತವಾಗಿ ತರಕಾರಿ ಸರಬರಾಜು ಮಾಡುವ ಗೋವಿಂದರಾಜು, ಮಾಜಿ ಸೈನಿಕ ಶುಕುರ್ ಅಹಮ್ಮದ್, ಓಟ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಕೆ.ಎಸ್.ಸನ್ಮಿತಾ ಅವರನ್ನು ಗೌರವಿಸಲಾಯಿತು.

ಇಂಚರ ಮತ್ತು ಸನ್ಮಿತಾ ಪ್ರಾರ್ಥಿಸಿದರು. ವಾರ್ಷಿಕ ವರದಿಯನ್ನು ಇಂಚರ ವಾಚಿಸಿದರು. ಚೈತನ್ಯ ನಿರೂಪಣೆ ಮಾಡಿದರು. ಭಾರತಿ ಪ್ರತಿಷ್ಠಾನದ ನಿರ್ವಾಹಕ ಟ್ರಸ್ಟಿ ಎಚ್.ಎಸ್.ಶ್ರೀನಿವಾಸ ಮೂರ್ತಿ, ಮಾಸ್ತಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಸ್.ಕೃಷ್ಣ, ಭಾರತೀ ಪ್ರತಿಷ್ಠಾನದ ಜಗದೀಶ್ ಕಾರಂತ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-126-1508336400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.