ಜಯಪುರ (ಬಾಳೆಹೊನ್ನೂರು): ಘನತೆಯ ಬದುಕು, ಸಮತೆ ಮತ್ತು ಸಮಾನತೆಯ ಬಾಳ್ವೆ ಸರ್ವರಿಗೂ ಸಿಗಬೇಕು. ದ್ವೇಷ ಬಿಟ್ಟು ದೇಶ ಕಟ್ಟುವ, ನಾವೆಲ್ಲಾ ಒಂದೇ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ‘ಸರ್ವ ಸಮಾಜೋತ್ಸವ’ ಎಂಬ ಪಕ್ಷಾತೀತ ಕಾರ್ಯಕ್ರಮವನ್ನು ಮೇ 3ರಂದು ಮದ್ಯಾಹ್ನ 3 ಗಂಟೆಗೆ ಕೊಪ್ಪದಲ್ಲಿ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳ್ಳಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಕರಾವಳಿ ಜನಪರ ಒಕ್ಕೂಟದ ಅಡಿಯಲ್ಲಿ ಒಳ್ಳೆಯದನ್ನು ಹೇಳುವ, ಗುರುತಿಸುವ ರಾಜಕೀಯ ರಹಿತ ಕಾರ್ಯಕ್ರಮ. ಇದು ಯಾರ ವಿರುದ್ಧವೂ ಅಲ್ಲ. ಯಾರ ಪರವೂ ಅಲ್ಲ. ಎಲ್ಲರೂ ಭಾಗವಹಿಸಬೇಕು ಎಂಬ ಉದ್ದೇಶದಿಂದ ಕ್ಷೇತ್ರದ 250 ಮನೆಗಳಲ್ಲಿ ಕರಪತ್ರ ಬಿಡುಗಡೆ ಮಾಡಲಾಗುತ್ತದೆ. ಹತ್ತು ಪ್ರಮುಖ ಲೇಖಕರು ಬರೆದ ಪುಸ್ತ ಕಗಳ ಜನಾರ್ಪಣೆಯಾಗಲಿದೆ ಎಂದರು.

ಮನಸ್ಸುಗಳನ್ನು ಕಟ್ಟಬೇಕು. ಹೃದಯ ಬೆಸೆಯಬೇಕು. ಅದೇ ಸದೃಢ ಭಾರತ ನಿರ್ಮಾಣದ ಶಕ್ತಿಯಾಗಿದೆ. ಧರ್ಮ ಹೇಳುವ ಸತ್ಯ, ಸಮಾನತೆ, ಸಹಬಾಳ್ವೆ ಜೀವನ ನಡೆಸಬೇಕು ಎಂಬುದು ಇಡೀ ಸಮಾಜೋತ್ಸವದ ಸಾರಾಂಶ. ಪ್ರದರ್ಶನ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ, ಸನ್ಮಾನ, ವಿಚಾರ ಅಭಿವ್ಯಕ್ತಿ, ಸಹಭೋಜನ ಹಮ್ಮಿಕೊಳ್ಳಲಾಗಿದ್ದು 5ಸಾವಿರ ಜನ ಸೇರುವ ನೀರಿಕ್ಷೆಯಿದೆ. ಸಮಾರೋಪದಲ್ಲಿ ಹಕ್ಕೊ ತ್ತಾಯ ಮಂಡಿಸಲಾಗುವುದು ಎಂದರು.

ಹೊಸೂರು ಎಚ್.ಕೆ.ಸುರೇಶ್ ಮಾತ ನಾಡಿ, ಜನರಿಗಾಗಿ ಮಾಡುವ ಒಳ್ಳೆಯ ಕೆಲಸ ಮನಸಿನಲ್ಲಿ ಉಳಿಯುತ್ತದೆ. ಒಳ್ಳೆಯ ಆಶಯ, ಧ್ಯೇಯದೊಂದಿಗೆ ಸಾಗಿದಲ್ಲಿ ಯಶಸ್ವಿ ಸಮಾಜ ನಿರ್ಮಾಣ ಸಾಧ್ಯ. ಮೇ 3ರಂದು ಮದ್ಯಾಹ್ನ 3 ಗಂಟೆಗೆ ಕೊಪ್ಪದ ವೀರಭದ್ರಸ್ವಾಮಿ ದೇವಸ್ಥಾನದಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದವರೆಗೆ ಸದ್ಭಾವನಾ ಮೆರವಣಿಗೆ ನಡೆಯಲಿದೆ ಎಂದರು.

ಸರ್ವ ಸಮಾಜೋತ್ಸವದ ಪ್ರಚಾರ ಕರಪತ್ರ ಬಿಡುಗಡೆ ಮಾಡಲಾಯಿತು.

ಸರ್ವ ಸಮಾಜೋತ್ಸವದ ಅಧ್ಯಕ್ಷ ಅಸಗೋಡು ನಾಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ವಕೀಲ ಸುಭಾಷ್, ಹುಮಾಯಿನ್ ಕಬೀರ್, ಐರಿನ್, ಖಾದರ್, ಕಿಬ್ಳಿ ರಂಗಪ್ಪಗೌಡ, ಪ್ರವೀಣ್ ಜಾಳ್ಮಾರ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ, ಬೆಂಡೆಹಕ್ಲು ನಾರಾಯಣ, ರಾಮುಕೌಳಿ, ನವೀನ್ ಕರುವಾನೆ, ನಾಗಭೂಷಣ್, ಅತ್ತಿಕುಳಿ ಸುಂದರೇಶ್, ಕಿಬ್ಳಿ ಪ್ರಸನ್ನಕುಮಾರ್, ಚಾರ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-126-1474466698

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.