ಕೊಪ್ಪ: ಚಾವಲ್ಮನೆ ಗ್ರಾಮ ಪಂಚಾಯಿತಿ ಮಟ್ಟದ ಸ್ವ-ಸಹಾಯ ಸಂಘಗಳ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಶನಿವಾರ ಒಕ್ಕೂಟದ ಅಧ್ಯಕ್ಷೆ ಅನಿತಾ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ನವೀನ್, ‘ಚಾವಲ್ಮನೆ ಒಕ್ಕೂಟದಲ್ಲಿ ಒಟ್ಟು 45 ಸ್ವ–ಸಹಾಯ ಸಂಘಗಳಿದ್ದು, ಎಲ್ಲ ವರ್ಗದ ಸಂಘಗಳಿವೆ. ಸ್ವ–ಸಹಾಯ ಸಂಘದ ಸದಸ್ಯರ ಕುರಿತು, ಖರ್ಚು ವೆಚ್ಚಗಳ ಮಾಹಿತಿಯನ್ನು ತಮ್ಮ ಮುಂದೆ ಇಡಲಿದ್ದು, ತಾವುಗಳು ಚರ್ಚಿಸುವ ಮೂಲಕ ಕಾರ್ಯಕ್ರಮಕ್ಕೆ ಅರ್ಥ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ವ್ಯವಸ್ಥಾಪಕ ಮಂಜೇಗೌಡ ಮಾತನಾಡಿ, ಸ್ವ–ಸಹಾಯ ಸಂಘಗಳಿಗೆ ಬರುವ ಅನುದಾನ, ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವಿಮಾ ಸೌಲಭ್ಯದ ಬಗ್ಗೆ ತಿಳಿಸಿದರು. ‘ಸಂಜೀವಿನಿ ಯೋಜನೆಯ ಎಲ್ಲ ಸಾಲ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಸ್ವ–ಉದ್ಯೋಗ ಮಾಡಬೇಕು. ಒಕ್ಕೂಟಕ್ಕೆ ₹5,95,450 ಲಾಭಾಂಶ ಬಂದಿದ್ದು, ಇನ್ನು ಹೆಚ್ಚಿನ ಲಾಭಾಂಶ ಮುಂದಿನ ದಿನಗಳಲ್ಲಿ ಪಡೆಯುವ ಆಶಾಭಾವನೆ ಹೊಂದಿರುವುದಾಗಿ’ ತಿಳಿಸಿದರು.

ಎಂ.ಬಿ.ಕೆ ಸವಿತಾ ವರದಿ ಮಂಡನೆ ಮಾಡಿ, ಒಕ್ಕೂಟದ ಕಾರ್ಯಕ್ರಮ ವೈಖರಿ ಬಗ್ಗೆ ತಿಳಿಸಿದರು. ಯೋಜನಾ ನಿರ್ದೇಶಕರು ಮತ್ತು ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ವ್ಯವಸ್ಥಾಪಕರು ಒಕ್ಕೂಟದ ಏಳಿಗೆಗೆ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳ ಬದಲಾವಣೆ ಹಾಗೂ ಹಳೆಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಯೋಜನಾ ನಿರ್ದೇಶಕಿ ಸುಜಾತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಸಹಾಯಕ ನಿರ್ದೇಶಕ ಚೇತನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-126-1388747438

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.