ಕೊಪ್ಪ: ತಾಲ್ಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಮುಡಿ ಗ್ರಾಮದಲ್ಲಿ ವಾಸವಾಗಿರುವ ದಿ. ಮರಿಯಪ್ಪ ಗೌಡ ಅವರ ಪತ್ನಿ ಲಲಿತಮ್ಮ ಹಾಗೂ ಅವರ ಪುತ್ರ ಚೇತನ ಅವರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ಸರ್ಕಾರ, ಆರೋಗ್ಯ ಇಲಾಖೆ ಅವರಿಗೆ ನೆರವಾಗಬೇಕು ಎಂದು ಜೆಡಿಎಸ್ ವಕ್ತಾರ ಸುಧಾಕರ್ ಎಸ್.ಶೆಟ್ಟಿ ಒತ್ತಾಯಿಸಿದ್ದಾರೆ.

ಲಲಿತಮ್ಮ ಅವರು ಹಾಸಿಗೆಯಲ್ಲೇ ಇದ್ದು, ಎದ್ದು ತಿರುಗಾಡುವ ಸಾಮರ್ಥ್ಯ ವಿಲ್ಲದ ಸ್ಥಿತಿಯಲ್ಲಿದ್ದಾರೆ. ಅವರ ಪುತ್ರ ಚೇತನ ಕೂಡ ಅಂಗವಿಕಲರಾಗಿದ್ದು, ತಾಯಿಯ ಆರೈಕೆ ಹಾಗೂ ತಮ್ಮ ಜೀವನ ನಿರ್ವಹಣೆ ನಡೆಸುವ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮತ್ತು ಸ್ವತಃ ಬದುಕನ್ನು ಸಾಗಿಸಲು ಅಸಮರ್ಥರಾಗಿರುವ ನಾಗರಿಕರ ಹೊಣೆಗಾರಿಕೆಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂಬುದು ನಮ್ಮ ಸಂವಿಧಾನದ ಆತ್ಮವೂ ಆಗಿದೆ ಎಂದಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ, ಕುಟುಂಬಕ್ಕೆ ಅಗತ್ಯ ಚಿಕಿತ್ಸೆ, ಅಸಹಾಯಕರಿಗೆ ಲಭ್ಯವಿರುವ ಸವಲತ್ತುಗಳನ್ನು ತುರ್ತಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು. ಅವರಿಗೆ ಬದುಕಿನ ಭರವಸೆ ನೀಡುವ ಕಾರ್ಯ ಆಗಬೇಕು. ಈ ಬಗ್ಗೆ ತಹಶೀಲ್ದಾರ್, ಜಿಲ್ಲಾಧಿಕಾರಿ ಗಮನಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-126-705021634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.